ನವದೆಹಲಿ: ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಬುಧವಾರ ಪದಗ್ರಹಣ ಮಾಡಿದ ಬೆನ್ನಲ್ಲೇ 47 ಸದಸ್ಯರನ್ನೊಳಗೊಂಡ ಸಂಚಾಲನಾ ಸಮಿತಿ (Steering Committee) ರಚಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (CWC) ವಿಸರ್ಜನೆಯಾಗಿದೆ. ಈಗ ಪಕ್ಷದ ಆಗುಹೋಗುಗಳ ಕುರಿತು ಸಂಚಾಲನಾ ಸಮಿತಿಯೇ ತೀರ್ಮಾನ ತೆಗೆದುಕೊಳ್ಳಲಿದೆ. ಹಾಗಾಗಿ ಸಂಚಾಲನಾ ಸಮಿತಿಯು ಪ್ರಮುಖವೆನಿಸಿದೆ.
ಮೂವರು ಕನ್ನಡಿಗರಿಗೆ ಸ್ಥಾನ
ಮಲ್ಲಿಕಾರ್ಜುನ ಖರ್ಗೆ ಅವರು ಸಂಚಾಲನಾ ಸಮಿತಿಯಲ್ಲಿ ಮೂವರು ಕನ್ನಡಿಗರಿಗೆ ಮಣೆ ಹಾಕಿದ್ದಾರೆ. ಕರ್ನಾಟಕ ಕಾಂಗ್ರೆಸ್ ನಾಯಕರಾದ ದಿನೇಶ್ ಗುಂಡೂರಾವ್, ಎಚ್.ಕೆ.ಪಾಟೀಲ್ ಹಾಗೂ ಕೆ.ಎಚ್.ಮುನಿಯಪ್ಪ ಅವರು ಸಮಿತಿಯಲ್ಲಿದ್ದಾರೆ. ಇನ್ನು ನಿರ್ಗಮಿತ ಅಧ್ಯಕ್ಷೆ ಸೋನಿಯಾ ಗಾಂಧಿ, ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಸೇರಿ ಹಲವರಿಗೆ ಸ್ಥಾನ ನೀಡಲಾಗಿದೆ.
ಸಂಚಾಲನಾ ಸಮಿತಿ ಸದಸ್ಯರ ಪಟ್ಟಿ ಹೀಗಿದೆ…
- ಸೋನಿಯಾ ಗಾಂಧಿ
- ಡಾ.ಮನಮೋಹನ್ ಸಿಂಗ್
- ರಾಹುಲ್ ಗಾಂಧಿ
- ಎ.ಕೆ.ಆ್ಯಂಟನಿ
- ಡಾ.ಅಭಿಷೇಕ್ ಮನು ಸಿಂಘ್ವಿ
- ಅಜಯ್ ಮಕೇನ್
- ಅಂಬಿಕಾ ಸೋನಿ
- ಆನಂದ್ ಶರ್ಮಾ
- ಅವಿನಾಶ್ ಪಾಂಡೆ
- ಗೈಖಂಗಮ್
- ಹರೀಶ್ ರಾವತ್
- ಜೈರಾಮ್ ರಮೇಶ್
- ಜಿತೇಂದ್ರ ಸಿಂಗ್
- ಸೆಲ್ಜಾ
- ಕೆ.ಸಿ.ವೇಣುಗೋಪಾಲ್
- ಲಲ್ತನ್‌ವಾಲಾ
- ಮುಕುಲ್ ವಸ್ನಿಕ್
- ಊಮನ್ ಚಾಂಡಿ
- ಪ್ರಿಯಾಂಕಾ ವಾದ್ರಾ
- ಪಿ.ಚಿದಂಬರಂ
- ರಣದೀಪ್ ಸುರ್ಜೇವಾಲಾ
- ರಘುಬೀರ್ ಮೀನಾ
- ತಾರಿಕ್ ಅನ್ವರ್
- ಡಾ.ಎ.ಚೆಲ್ಲ ಕುಮಾರ್
- ಡಾ.ಅಜಯ್ ಕುಮಾರ್
- ಅಧೀರ್ ರಂಜನ್ ಚೌಧರಿ
- ಭಕ್ತ ಚರಣ್ ದಾಸ್
- ದೇವೇಂದ್ರ ಯಾದವ್
- ದಿಗ್ವಿಜಯ್ ಸಿಂಗ್
- ದಿನೇಶ್ ಗುಂಡೂರಾವ್
- ಹರೀಶ್ ಚೌಧರಿ
- ಎಚ್.ಕೆ.ಪಾಟೀಲ್
- ಜಯಪ್ರಕಾಶ್ ಅಗರ್ವಾಲ್
- ಕೆ.ಎಚ್.ಮುನಿಯಪ್ಪ
- ಬಿ.ಮಣಿಕಮ್ ಟ್ಯಾಗೋರ್
- ಮನೀಶ್ ಚತ್ರಾತ್
- ಮೀರಾ ಕುಮಾರ್
- ಪಿ.ಎಲ್.ಪುನಿಯಾ
- ಪವನ್ ಕುಮಾರ್ ಬನ್ಸಾಲ್
- ಪ್ರಮೋದ್ ತಿವಾರಿ
- ರಜನಿ ಪಾಟೀಲ್
- ಡಾ.ರಘು ಶರ್ಮಾ
- ರಾಜೀವ್ ಶುಕ್ಲಾ
- ಸಲ್ಮಾನ್ ಖುರ್ಷಿದ್
- ಶಕ್ತಿಸಿಂಗ್ ಗೊಹಿಲ್
- ಟಿ.ಸುಬ್ಬಿರಾಮಿ ರೆಡ್ಡಿ
- ತಾರಿಕ್ ಅಹ್ಮದ್ ಕರ‍್ರಾ
ಇದನ್ನೂ ಓದಿ | Mallikarjun Kharge | ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ