Site icon Vistara News

Congress Session: 85ನೇ ಕಾಂಗ್ರೆಸ್ ಮಹಾಧಿವೇಶನ ಇಂದಿನಿಂದ ಖರ್ಗೆ ನೇತೃತ್ವದಲ್ಲಿ ಆರಂಭ

Congress Session

ಬೆಂಗಳೂರು: ಕಾಂಗ್ರೆಸ್‌ ಮಹಾಧಿವೇಶನ ಇಂದಿನಿಂದ ಮೂರು ದಿನಗಳ ಕಾಲ ಛತ್ತೀಸ್‌ಗಢದ ನವ ರಾಯಪುರ್‌ನಲ್ಲಿ ನಡೆಯಲಿದೆ.

ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷರಾದ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ. 2024ರ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸ್ಪಷ್ಟ ಮಾರ್ಗಸೂಚಿ ರೂಪಿಸುವ ಹಾಗು ಸಮಾನ ಮನಸ್ಕ ಪಕ್ಷಗಳ ಜೊತೆ ಮೈತ್ರಿ ಕುರಿತು ಚರ್ಚೆ ನಡೆಸುವ ಆಶಯ ಈ ಅಧಿವೇಶನಕ್ಕಿದೆ.

ಭಾರತ್ ಜೋಡೋ ಯಾತ್ರೆಯ ಯಶಸ್ಸಿನ ಬಳಿಕ ನಡೆಯುತ್ತಿರುವ ಮಹಾಧಿವೇಶನದಲ್ಲಿ 15 ಸಾವಿರ ಸದಸ್ಯರು ಭಾಗವಹಿಸುವ ನಿರೀಕ್ಷೆಯಿದೆ. ಎಐಸಿಸಿ ಸದಸ್ಯರು, ಪಿಸಿಸಿಗಳ ಸದಸ್ಯರು ಹಾಗು ಪದಾಧಿಕಾರಿಗಳು ಅಧಿವೇಶನದಲ್ಲಿ ಭಾಗಿಯಾಗಲಿದ್ದಾರೆ. ಕರ್ನಾಟಕದಲ್ಲಿ 700 ಮಂದಿಗೆ ಆಹ್ವಾನ ನೀಡಲಾಗಿದೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಸುವುದು, ಮುಂಬರುವ ರಾಜ್ಯಗಳಲ್ಲಿ‌ ಚುನಾವಣೆ ಸಿದ್ಧತೆ, ಲೋಕಸಭಾ ಚುನಾವಣೆಗೆ ಸಿದ್ಧತೆ ಬಗ್ಗೆ 3 ದಿನ ಚರ್ಚೆ ನಡೆಯಲಿದೆ. ಕಾಂಗ್ರೆಸ್ ಅಧಿಕಾರದಲ್ಲಿರುವ ಛತ್ತೀಸ್‌ಗಢ, ರಾಜಸ್ಥಾನ ಸೇರಿ ಕರ್ನಾಟಕ ಒಳಗೊಂಡಂತೆ 9 ರಾಜ್ಯಗಳಲ್ಲಿ ಈ ವರ್ಷ ಚುನಾವಣೆ ನಡೆಯಲಿದೆ.

ಕರ್ನಾಟಕದ ರಾಜಕೀಯ, ಚುನಾವಣೆ ಬಗ್ಗೆ ಎಐಸಿಸಿ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು ಚರ್ಚೆ ನಡೆಸಲಿದ್ದಾರೆ. ಟಿಕೆಟ್ ಹಂಚಿಕೆ ಪ್ರಕ್ರಿಯೆ, ತಂತ್ರ- ಪ್ರತಿತಂತ್ರಗಾರಿಕೆ ವಿಚಾರಗಳು ಕುರಿತು ಎಐಸಿಸಿ ಅಧ್ಯಕ್ಷರ ಜೊತೆ ಸಿಎಲ್‌ಪಿ ನಾಯಕ, ಪಿಸಿಸಿ ಅಧ್ಯಕ್ಷರು ಚರ್ಚಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: Congress Plenary Session: ಫೆ.24ರಿಂದ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಮಹಾ ಅಧಿವೇಶನ, ಚುನಾವಣೆಗೆ ರಣತಂತ್ರ

Exit mobile version