Site icon Vistara News

Mamata Banerjee: ಕಾಂಗ್ರೆಸ್ 40 ಸೀಟು ಗೆಲ್ಲೋದು ಡೌಟು ಎಂದ ಮಮತಾ ಬ್ಯಾನರ್ಜಿ!

Mamata Banerjee

Destroying Social Fabric: BJP Slams Mamata Banerjee Over I Am Not A Kafir Remark

ಕೋಲ್ಕೊತಾ: ಕಾಂಗ್ರೆಸ್ (Congress Party) ಜತೆಗಿನ ಮೈತ್ರಿಯನ್ನು ಮುರಿದುಕೊಂಡಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು(West Bengal CM Mamata Banerjee), ಆ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಿಂದಿ ಹಾರ್ಟ್ ಲ್ಯಾಂಡ್ ಎಂದು ಹೇಳಲಾಗುವ ಉತ್ತರ ಭಾರತದ ಹಿಂದಿ ಭಾಷಿಕ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವು ಲೋಕಸಭೆ ಚುನಾವಣೆಯಲ್ಲಿ (Lok Sabha Election) 40 ಸೀಟು ಕೂಡ ಗೆಲ್ಲುವುದಿಲ್ಲ (40 Seats) ಎಂದು ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ. ಟಿಎಂಸಿ ಜತೆಗೆ ಸೀಟು ಷೇರಿಂಗ್ ಸಂಬಂಧ ಉಂಟಾಗಿರುವ ಬಿಕ್ಕಟ್ಟು ಬೇಗ ಹರಿಯಲಿದೆ ಎಂದು ರಾಹುಲ್ ಗಾಂಧಿ (Rahul Gandhi) ಹೇಳಿದ ಒಂದು ದಿನದ ಬಳಿಕ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಪಶ್ಚಿಮ ಬಂಗಾಳದ ಆರು ಜಿಲ್ಲೆಗಳಲ್ಲಿ ಸಂಚರಿಸಿದ ಕಾಂಗ್ರೆಸ್‌ನ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯನ್ನು ಬಲವಾಗಿ ಟೀಕಿಸಿದ ಬ್ಯಾನರ್ಜಿ, ರಾಜ್ಯದಲ್ಲಿ ಅಲ್ಪಸಂಖ್ಯಾತರ ಮತಗಳನ್ನು ವಿಭಜಿಸುವ ಉದ್ದೇಶದಿಂದ “ವಲಸೆ ಹಕ್ಕಿಗಳ” “ಕೇವಲ ಫೋಟೋ ಅವಕಾಶ” ಯಾತ್ರೆ ನಡೆಸುತ್ತಿವೆ ಎಂದು ಹೇಳಿದರು.

ಕಾಂಗ್ರೆಸ್ 300 ಸ್ಥಾನಗಳಲ್ಲಿ (ಬಿಜೆಪಿ ಪ್ರಮುಖ ಪ್ರತಿಪಕ್ಷವಾಗಿರುವ ದೇಶಾದ್ಯಂತ) ಸ್ಪರ್ಧಿಸಬೇಕೆಂದು ನಾನು ಪ್ರಸ್ತಾಪಿಸಿದೆ, ಆದರೆ ಅವರು ಅದಕ್ಕೆ ನಿರಾಕರಿಸಿದರು. ಈಗ ಅವರು ಮುಸ್ಲಿಂ ಮತದಾರರನ್ನು ಒಡೆಯಲು ರಾಜ್ಯಕ್ಕೆ ಬಂದಿದ್ದಾರೆ. ಅವರು ಒಂದು ವೇಳೆ 300 ಸ್ಥಾನಗಳಲ್ಲಿ ಸ್ಪರ್ಧಿಸಿದರೂ 40 ಸ್ಥಾನಗಳನ್ನು ಪಡೆಯುತ್ತಾರೆಯೇ ಎಂದು ನನಗೆ ಅನುಮಾನವಿದೆ ಎಂದು ನನಗೆ ಅನುಮಾನವಿದೆ ಎಂದು ಹೇಳಿದರು.

ರಾಜ್ಯಕ್ಕೆ ನೀಡಬೇಕಾಗಿರುವ ಬಾಕಿ ಅನುದಾಕ್ಕೆ ಒತ್ತಾಯಿಸಿ ಕೇಂದ್ರದ ವಿರುದ್ಧ ಧರಣಿ ನಡೆಸಿದ ಮಮತಾ ಬ್ಯಾನರ್ಜಿ ಅವರು, ಪಶ್ಚಿಮ ಬಂಗಾಳದಲ್ಲಿ ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಲು ತಮ್ಮ ಪಕ್ಷವು ಮುಂದಾಗಿತ್ತು. ಆದರೆ, ಶತಮಾನಗಳ ಹಳೆಯ ಪಕ್ಷ ಕಾಂಗ್ರೆಸ್‌ಗೆ ಅದು ಬೇಕಾಗಿಲ್ಲ ಎಂದು ಹೇಳಿದರು.

ನಾವು ಮೈತ್ರಿಗೆ ಮುಕ್ತರಾಗಿದ್ದೆವು. ಅವರಿಗೆ ಎರಡು ಸ್ಥಾನಗಳನ್ನು ನೀಡಲು ಮುಂದಾಗಿದ್ದೆವು. ಈ ಆಫರ್ ಅನ್ನು ಅವರು ತಿರಸ್ಕರಿಸಿದರು. ಈಗ ಅವರು ಎಲ್ಲಾ 42 ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿ. ಅಂದಿನಿಂದ ನಮ್ಮ ನಡುವೆ ಯಾವುದೇ ಮಾತುಕತೆ ನಡೆದಿಲ್ಲ. ನಾವು ಏಕಾಂಗಿಯಾಗಿ ಹೋರಾಡುತ್ತೇವೆ ಮತ್ತು ಬಂಗಾಳದಲ್ಲಿ ಬಿಜೆಪಿಯನ್ನು ಸೋಲಿಸುತ್ತೇವೆ ಎಂದು ಮಮತಾ ಬ್ಯಾನರ್ಜಿ ಅವರು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್‌ಗೆ ಒಂದೇ ಒಂದು ಲೋಕಸಭಾ ಸ್ಥಾನವನ್ನು ಬಿಟ್ಟುಕೊಡಲು ಇಚ್ಛಿಸದಿದ್ದರೂ ಬ್ಯಾನರ್ಜಿ ಅವರಿಗೆ ಕಾಂಗ್ರೆಸ್ ಏಕೆ ಪ್ರಾಮುಖ್ಯತೆ ನೀಡುತ್ತಿದೆ ಎಂದು ಸುದ್ದಿಗಾರರ ರಾಹುಲ್ ಗಾಂಧಿ ಅವರಿಗೆ ಕೇಳಿದಾಗ, ಮಮತಾ ಅವರು ಮೈತ್ರಿ ಮುರಿದಿದೆ ಎಂದು ಹೇಳಲಿಲ್ಲ ಅಥವಾ ಕಾಂಗ್ರೆಸ್ ಮೈತ್ರಿಯಿಂದ ಹೊರಬಂದಿಲ್ಲ. ಮಮತಾ ಕೂಡ ಮೈತ್ರಿಯಲ್ಲಿರುವುದಾಗಿ ಹೇಳುತ್ತಿದ್ದಾರೆ. ಎರಡೂ ಕಡೆಯಿಂದ ಸೀಟು ಮಾತುಕತೆ ನಡೆಯುತ್ತಿದೆ. ಇದನ್ನು ಪರಿಹರಿಸಲಾಗುವುದು ಎಂದು ಒಂದು ದಿನದ ಹಿಂದೆ ಹೇಳಿದ್ದರು. ಈ ವಿಡಿಯೋವನ್ನು ಎಕ್ಸ್ ವೇದಿಕೆಯಲ್ಲಿ ಹಂಚಿಕೊಳ್ಳಲಾಗಿದೆ.

ಈ ಸುದ್ದಿಯನ್ನೂ ಓದಿ: India Bloc: ಮಮತಾ ಬ್ಯಾನರ್ಜಿ ಇಂಡಿಯಾ ಕೂಟದಿಂದ ದೂರ ಸರಿಯಲು ರಾಹುಲ್ ಕಾರಣ?

Exit mobile version