Site icon Vistara News

Chief Minister Conrad Sangma: ಮೇಘಾಲಯದ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಕಾನ್ರಾಡ್ ಸಂಗ್ಮಾ, ಇಬ್ಬರು ಡಿಸಿಎಂ

Conrad Sangma becomes Meghalaya Chief minister and two deputy cm

ನವದೆಹಲಿ: ಎನ್‌ಪಿಪಿ ನಾಯಕ ಕಾನ್ರಾಡ್ ಕೆ ಸಂಗ್ಮಾ (Chief Minister Conrad Sangma) ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಶಿಲ್ಲಾಂಗ್‌ನಲ್ಲಿ ಮಂಗಳವಾರ ಮೇಘಾಲಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಂಗ್ಮಾ ಅವರು ಸತತ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುತ್ತಿದ್ದಾರೆ. ಈ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರೂ ಹಾಜರಿದ್ದರು.

ಮೇಘಾಲಯದ ಉಪಮುಖ್ಯಮಂತ್ರಿಗಳಾಗಿ ಪ್ರೆಸ್ಟೋನ್ ಟೈನ್‌ಸಾಂಗ್ ಮತ್ತು ಸ್ನಿಯಾವ್‌ಭಾಲಾಂಗ್ ಧಾರ್ ಅವರೂ ಇದೇ ವೇಳೆ ಪ್ರಮಾಣ ವಚನ ಸ್ವೀಕರಿಸಿದರು. ಹೊಸ ಎನ್‌ಪಿಪಿ ನೇತೃತ್ವದ ಮೇಘಾಲಯ ಸರ್ಕಾರದಲ್ಲಿ ಅಲೆಕ್ಸಾಂಡರ್ ಲಾಲೂ ಹೆಕ್, ಡಾ ಅಂಪಾರೀನ್ ಲಿಂಗ್ಡೋಹ್, ಪಾಲ್ ಲಿಂಗ್ಡೋಹ್ ಮತ್ತು ಕಮಿಂಗೋನ್ ಯಂಬನ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇದನ್ನೂ ಓದಿ: Meghalaya Election Result: ಎನ್‌ಪಿಪಿ ನಾಯಕ ಸಂಗ್ಮಾಗೆ 45 ಶಾಸಕರ ಬೆಂಬಲ, ನೂತನ ಎಂಎಲ್‌ಎಗಳಿಂದ ಅಧಿಕಾರ ಸ್ವೀಕಾರ

45 ಸದಸ್ಯರ ಬೆಂಬಲವನ್ನು ಹೊಂದಿರುವ ನ್ಯಾಷನಲ್ ಪೀಪಲ್ಸ್ ಪಾರ್ಟಿಯ ನಾಯಕ ಕಾನ್ರಾಡ್ ಸಂಗ್ಮಾ ಅವರು ಈ ಹಿಂದೆಯೂ ಮುಖ್ಯಂತ್ರಿಯಾಗಿದ್ದರು. ಫೆಬ್ರವರಿ 27ರಂದು ನಡೆದ ಚುನಾವಣೆಯಲ್ಲಿ ಸಂಗ್ಮಾ ನೇತೃತ್ವದ ಎನ್‌ಪಿಪಿ 26 ಸ್ಥಾನಗಳನ್ನು ಗೆದ್ದುಕೊಂಡಿತ್ತು. 2 ಸೀಟುಗಳನ್ನು ಗೆದ್ದಿರುವ ಬಿಜೆಪಿ, ಫಲಿತಾಂಶದ ಬಳಿಕ ತನ್ನ ಬೆಂಬಲವನ್ನು ಎನ್‌ಪಿಪಿಗೆ ನೀಡಿತ್ತು.

Exit mobile version