Site icon Vistara News

Allahabad High Court | ಇಬ್ಬರು ವಯಸ್ಕರು ಒಟ್ಟಿಗೆ ವಾಸಿಸುವುದು ಅನೈತಿಕವಲ್ಲ: ಅಲಹಾಬಾದ್ ಹೈಕೋರ್ಟ್

ಪ್ರಯಾಗರಾಜ್: ವಯಸ್ಕರಾದ ಇಬ್ಬರು ಜತೆಯಾಗಿ ವಾಸಿಸುವ ಎಲ್ಲ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ಅವರ ಲಿವ್-ಇನ್ ರಿಲೇಷನ್‌ಶಿಪ್‌ ಸಂಬಂಧ ಮಧ್ಯೆ ಬೇರೆ ಯಾರೇ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ (Allahabad High Court) ಹೇಳಿದೆ. ಅಲ್ಲದೇ, ಈ ಸಂಬಂಧ ಹುಡುಗಿಯ ತಂದೆಯೊಬ್ಬರು ಉತ್ತರ ಪ್ರದೇಶದ ಜಾನ್ಪುರ್ ಜಿಲ್ಲೆಯಲ್ಲಿ ದಾಖಲಿಸಿದ್ದ ಎಫ್ಐಆರ್ ರದ್ದುಪಡಿಸಿ, ಆದೇಶ ಹೊರಡಿಸಿದೆ.

ಜಸ್ಟೀಸ್ ಸುನೀತ್ ಕುಮಾರ್ ಮತ್ತು ಜಸ್ಟೀಸ್ ಸಯೈದ್ ವೈಜ್ ಮಿಯಾ ಅವರಿದ್ದ ಅಲಹಾಬಾದ್ ಹೈಕೋರ್ಟ್‌ನ ವಿಭಾಗೀಯ ಪೀಠವು, ಪರಸ್ಪರ ಒಪ್ಪಿಗೆಯೊಂದಿಗೆ ವಯಸ್ಕರಿಬ್ಬರು ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿರುವುದು ಕಾನೂನು ಬಾಹಿರವಲ್ಲ ಎಂಬ ಉನ್ನತ ನ್ಯಾಯಾಲಯದ ಆದೇಶವನ್ನು ತಮ್ಮ ತೀರ್ಪಿಗೆ ಬಳಸಿಕೊಂಡಿದ್ದಾರೆ.

ಎಸ್ ಖುಷ್ಬೂ ವರ್ಸಸ್ ಕಣ್ಣಿಅಮ್ಮಳ್ ಕೇಸಿನಲ್ಲಿ ಸರ್ವೋಚ್ಚ ನ್ಯಾಲಯವು ಐತಿಹಾಸಿಕ ತೀರ್ಪು ನೀಡಿದೆ. ಬದುಕುವ ಹಕ್ಕು ನೀಡಿರುವ ಸಂವಿಧಾನದ 21 ವಿಧಿ ವ್ಯಾಪ್ತಿಗೆ ಲಿವ್ ಇನ್ ರಿಲೇಷನ್‌‌ಶಿಪ್ ಕೂಡ ಬರುತ್ತದೆ. ಅದರಂತೆ, ಕಾನೂನಿನಿಂದ ಸ್ಥಾಪಿಸಲ್ಪಟ್ಟ ಕಾರ್ಯವಿಧಾನದ ಪ್ರಕಾರ ಹೊರತುಪಡಿಸಿ ಯಾವುದೇ ವ್ಯಕ್ತಿಯ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳಬಾರದು ಎಂಬ ಗ್ಯಾರಂಟಿಯನ್ನು ಈ ವಿಧಿ ಒದಗಿಸುತ್ತದೆ.

ಇದೇ ವೇಳೆ, ಲಿವ್ ಇನ್ ರಿಲೇಷನ್‌ಶಿಪ್ ಕಾನೂನುಬಾಹಿರವಲ್ಲ. ಇಬ್ಬರು ವಯಸ್ಕರು ಜತೆಗೂಡಿ ವಾಸಿಸುವುದನ್ನು ಕಾನೂನುಬಾಹಿರ ಅಥವಾ ಅನೈತಿಕ ಎಂದು ಪರಿಗಣಿಸಲಾಗದು ಎಂದು ಅಲಹಾಬಾದ್ ಹೈಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.

ಇದನ್ನೂ ಓದಿ | ದೇಶದ ಅತ್ಯಂತ ಹಳೆಯ ಹೈಕೋರ್ಟ್​ ಯಾವುದು ಗೊತ್ತಾ? ಇಲ್ಲಿವೆ ಹಳೇ ಉಚ್ಚ ನ್ಯಾಯಾಲಯದ ಬಗೆಗಿನ ಕುತೂಹಲಕಾರಿ ಸಂಗತಿಗಳು

Exit mobile version