ಮೆಹಬೂಬ್ ನಗರ (ತೆಲಂಗಾಣ): ತನ್ನ ಪತ್ನಿಯ ಜತೆ ಅಕ್ರಮ ಸಂಬಂಧ ಹೊಂದಿದ್ದ ಪೊಲೀಸ್ ಇನ್ಸ್ಟೆಕ್ಟರ್ ಒಬ್ಬರ ಮರ್ಮಾಂಗಕ್ಕೆ ಕಾನ್ಸ್ಟೆಬಲ್ ಒಬ್ಬರು ಚೂರಿ ಯಿಂದ ಚುಚ್ಚಿ ಕತ್ತರಿಸಿದ ಘಟನೆ ತೆಲಂಗಾಣ ರಾಜ್ಯ ಮೆಬಬೂಬ್ ನಗರ ಜಿಲ್ಲೆಯಲ್ಲಿ ನಡೆದಿದೆ. ಒಂದೇ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರ ನಡುವಿನ ಗಲಾಟೆ ಇದಾಗಿದ್ದರೂ, ಪ್ರಕರಣ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.
ಮೆಹಬೂಬ್ನಗರ ಠಾಣೆಯ ಇನ್ಸ್ಪೆಕ್ಟರ್ ಇಫ್ತಿಕಾರ್ ಹಲ್ಲೆಗೊಳಗಾದವು. ಕಾನ್ಸ್ಟೇಬಲ್ ಜಗದೀಶ್ ಆರೋಪಿಯಾಗಿದ್ದಾರೆ. ಗುರುವಾರ ಬೆಳಗ್ಗೆ ಇಫ್ತಿಕಾರ್ ಅವರ ಕೊಠಡಿಗೆ ತೆರಳಿದ್ದ ಜಗದೀಶ್ ಏಕಾಏಕಿ ಅವರ ಮರ್ಮಾಂಗಕ್ಕೆ ಚೂರಿ ಹಾಕಿದ್ದಾರೆ. ಜತೆಗೆ ದೇಹದ ಹಲವೆಡೆಗೆ ಚುಚ್ಚಿ ಗಾಯಗೊಳಿಸಿದ್ದಾರೆ. ಗದ್ದಲ ಕೇಳಿದ ಉಳಿದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅವರನ್ನು ಇಫ್ತಿಕಾರ್ ಅವರನ್ನು ಜಗದೀಶ್ನ ಕೋಪದ ಕೈಯಿಂದ ಬಿಡಿಸಿ ಹೈದರಾಬಾದ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ: Road Accident : ತುಮಕೂರು ಬಳಿ ಬಸ್ – ಕಾರು ನಡುವೆ ಅಪಘಾತ; ಇಬ್ಬರ ಸಾವು
ಜಗದೀಶ್ನ ಪತ್ನಿಯೂ ಪೊಲೀಸ್ ಕಾನ್ಸ್ಟಬಲ್ ಆಗಿದ್ದಾರೆ. ಆಕೆಯ ಜತೆಗೆ ಇಫ್ತಿಕಾರ್ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಜಗದೀಶ್ ಸಂಶಯಿಸಿದ್ದ. ಈ ವಿಚಾರದಲ್ಲಿ ಸಿಟ್ಟಿಗೆದ್ದ ಆತ ಚೂರಿಯಿಂದ ಇರಿದಿದ್ದಾನೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ವಿಶ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿನಿಗೆ ಕಿರುಕುಳ
ವಾರಣಾಸಿ: ಐಐಟಿ-ಬಿಎಚ್ಯು ವಿದ್ಯಾರ್ಥಿನಿಯೊಬ್ಬಳನ್ನು ಕ್ಯಾಂಪಸ್ ಒಳಗಡೆಯೇ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಲೈಂಗಿಕ ಕಿರುಕುಳ ನೀಡಿದ (physical abuse) ಘಟನೆ ಗುರುವಾರ ಮುಂಜಾನೆ ನಡೆದಿದೆ. ಈ ಘಟನೆಯ ಆಕ್ರೋಶಕ್ಕೆ ಕಾರಣವಾಯಿತು, ನಂತರ ನೂರಾರು ವಿದ್ಯಾರ್ಥಿಗಳು ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಗುರುವಾರ ಮುಂಜಾನೆ ವಿದ್ಯಾರ್ಥಿನಿ ತನ್ನ ಸ್ನೇಹಿತನೊಂದಿಗೆ ಹಾಸ್ಟೆಲ್ ನಿಂದ ಹೊರಗೆ ಹೋಗುತ್ತಿದ್ದಾಗ ಘಟನೆ ನಡೆದಿದೆ. ಬೈಕ್ನಲ್ಲಿ ಬಂದ ಮೂವರು ಆಕೆಯನ್ನು ತಡೆದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿಗಳು ತನ್ನನ್ನು ಸ್ನೇಹಿತನಿಂದ ಬೇರ್ಪಡಿಸಿ ಬಲವಂತವಾಗಿ ಬೇರೊಂದು ಕಡೆಗೆ ಕರೆದೊಯ್ದರು. ನಂತರ ಅವರು ನನ್ನನ್ನು ವಿವಸ್ತ್ರಗೊಳಿಸಿ, ವೀಡಿಯೊ ಮಾಡಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ ಎಂದು ವಿದ್ಯಾರ್ಥಿನಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಗಳು 15 ನಿಮಿಷಗಳ ನಂತರ ಅವಳನ್ನು ಅಲ್ಲಿಂದ ಹೋಗಲು ಬಿಟ್ಟಿದ್ದಾರೆ. ಅದಕ್ಕಿಂತ ಮೊದಲು ಆಕೆಯ ಫೋನ್ ನಂಬರ್ ತೆಗೆದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ವಿದ್ಯಾರ್ಥಿಯ ದೂರಿನ ಆಧಾರದ ಮೇಲೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಮಹಿಳೆಯ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ) ಮತ್ತು ಐಟಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆ
ಘಟನೆ ಬೆಳಕೆಗೆ ಬಂದ ನಂತರ, ವಿದ್ಯಾರ್ಥಿಗಳು ಐಐಟಿ-ಬಿಎಚ್ಯು ಕ್ಯಾಂಪಸ್ನ ವಿದ್ಯಾರ್ಥಿ ಚಟುವಟಿಕೆ ಕೇಂದ್ರದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಈ ಘಟನೆಯಲ್ಲಿ ಹೊರಗಿನ ಶಕ್ತಿಗಳು ಭಾಗಿಯಾಗಿವೆ ಎಂದು ಅವರು ಹೇಳಿದ್ದಾರೆ. ಹೊರಗಿನ ವ್ಯಕ್ತಿಗಳೂ ಕ್ಯಾಂಪಸ್ ಪ್ರವೇಶಿಸುವುದನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.
“ಆರೋಪಿಗಳನ್ನು ಪತ್ತೆಹಚ್ಚುವ ಜತೆಗೆ ಐಐಟಿ ಕ್ಯಾಂಪಸ್ನ ಗಡಿಗಳನ್ನು ಬೇರ್ಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳು ಮತ್ತು ವಿದ್ಯುತ್ ಸುಗಮ ಕಾರ್ಯನಿರ್ವಹಣೆಯ ಬಗ್ಗೆ ವಿದ್ಯಾರ್ಥಿಗಳು ಜ್ಞಾಪಕ ಪತ್ರವನ್ನು ನೀಡಿದ್ದಾರೆ ಎಂದು ಡಿಸಿಪಿ ಆರ್.ಎಸ್.ಗೌತಮ್ ಮಾಹಿತಿ ನೀಡಿದ್ದಾರೆ.