ನವದೆಹಲಿ: ಮುಂಬೈ-ಅಹಮದಾಬಾದ್ (Mumbai-Ahmadabad) ಬುಲೆಟ್ ಟ್ರೈನ್ ಪ್ರಾಜೆಕ್ಟ್‌ಗೆ (Bullet Train Project) ಸಂಬಂಧಿಸಿದಂತೆ ಶುಭ ಸುದ್ದಿಯೊಂದು ಹೊರ ಬಿದ್ದಿದೆ. ಈ ಯೋಜನೆಯನ್ನು ಕೈಗೆತ್ತಿಕೊಂಡಿರುವ ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿ(NHSRCL), ಒಟ್ಟು ಮಾರ್ಗದಲ್ಲಿ 100 ಕಿ.ಮೀ.ನಷ್ಟು ವಯಡಕ್ಟ್ ಹಾಗೂ 250 ಕಿ.ಮೀ ಕಂಬಗಳ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಿದೆ. ಈ ಕುರಿತಾದ ವಿಡಿಯೋವನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು (Union Minister Ashwini Vaishnaw) ಎಕ್ಸ್ ವೇದಿಕೆಯಲ್ಲಿ ಷೇರ್ ಮಾಡಿಕೊಂಡಿದ್ದಾರೆ.
ವಯಡಕ್ಟ್ ಎಂಬುದು ಸೇತುವೆ ರೀತಿಯ ನಿರ್ಮಾಣವಾಗಿರುತ್ತದೆ. ಎತ್ತರಿಸಿದ ರಸ್ತೆ ರಸ್ತೆ ರೈಲ್ವೆ ಮಾರ್ಗ ನಿರ್ಮಾಣಕ್ಕೆ, ಕಂಬಗಳ ಆಧಾರದಿಂದ ಈ ವಯಡಕ್ಟ್‌ಗಳನ್ನು ಪೂರ್ತಿಗೊಳಿಸುತ್ತಾ ಹೋಗಲಾಗುತ್ತದೆ.
Progress of Bullet Train project:
— Ashwini Vaishnaw (@AshwiniVaishnaw) November 23, 2023
Till date: 21.11.2023
Pillars: 251.40 Km
Elevated super-structure: 103.24 Km pic.twitter.com/SKc8xmGnq2
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಗುರುವಾರ ವಿಡಿಯೋವೊಂದನ್ನು ಷೇರ್ ಮಾಡಿಕೊಂಡಿದ್ದು, ಅದರಲ್ಲಿ ಮುಂಬೈ-ಅಹಮದಾಬಾದ್ ಬುಲೆಟ್ ಟ್ರೈನ್‌ನ ವಯಡಕ್ಟ್ ನಿರ್ಮಾಣದ ಕಾಮಗಾರಿಯ ಚಿತ್ರಣವನ್ನು ಕಾಣಬಹುದು. ವಿಡಿಯೋದ ಜತೆಗೆ ಅವರು, ಬುಲೆಟ್ ಟ್ರೈನ್ ಪ್ರಾಜೆಕ್ಟ್ ಪ್ರಗತಿಯಲ್ಲಿದೆ. ಈ ವರೆಗೆ ಕಂಬಗಳು: 251.40 ಕಿ.ಮೀ, ಎಲಿವೇಟೆಡ್ ಸೂಪರ್-ಸ್ಟ್ರಕ್ಚರ್: 103.24 ಕಿಮೀ ಎಂದು ಬರೆದುಕೊಂಡಿದ್ದಾರೆ.
ಎನ್‌ಎಚ್‌ಎಸ್‌ಆರ್‌ಸಿಎಲ್ ನೀಡಿರುವ ಹೇಳಿಕೆಯ ಪ್ರಕಾರ, ಬುಲೆಟ್ ಟ್ರೈನ್ ಯೋಜನೆ ಮತ್ತೊಂದು ಮೈಲುಗಲ್ಲು ನೆಟ್ಟಿದೆ. 40 ಮೀಟರ್ ಉದ್ದದ ಫುಲ್ ಸ್ಪಾನ್ ಬಾಕ್ಸ್ ಗ್ರಿಡರ್ಸ್ ಮತ್ತು ಸೆಗ್ಮೆಂಟಲ್ ಗ್ರಿಡರ್ಸ್‌ಗಳ ಮೂಲಕ 100 ಕಿ.ಮೀ ವಯಡಕ್ಟ್‌ಗಳ ಮಾರ್ಗವನ್ನು ಪೂರ್ಣಗೊಳಿಸಿದೆ. ಅಲ್ಲದೇ, 250 ಕಿ.ಮೀ.ನಷ್ಟು ಕಂಬಗಳ ನಿರ್ಮಾಣವೂ ಕೂಡ ಪೂರ್ತಿಯಾಗಿದೆ.
ಈ ಸುದ್ದಿಯನ್ನೂ ಓದಿ: ಇನ್ನು ಬೆಂಗಳೂರಿನಿಂದ ಚೆನ್ನೈಗೆ ಎರಡೇ ಗಂಟೆ ಸಾಕು, ಶೀಘ್ರ ಮೈಸೂರು-ಬೆಂಗಳೂರಿಗೂ ಬರಲಿದೆ ಬುಲೆಟ್ ಟ್ರೈನ್!
ಈ ವಯಡಕ್ಟ್ ಅಳವಡಿಕೆಯ ಕಾಮಗಾರಿಯ ವ್ಯಾಪ್ತಿಯಲ್ಲಿ ಆರು ನದಿಗಳಿವೆ. ಪಾರ್(ವಲ್ಸಾದ ಜಿಲ್ಲೆ), ಪೂರ್ಣ(ನವಸಾರಿ ಜಿಲ್ಲೆ), ಮಿಂಧೋಳ(ನವಸಾರಿ ಜಿಲ್ಲೆ), ಅಂಬಿಕಾ(ನವಸಾರಿ ಜಿಲ್ಲೆ), ಔರಂಗಾ(ವಾಲ್ಸಾದ ಜಿಲ್ಲೆ) ಮತ್ತು ವೆಂಗಾನಿಯಾ(ನವಸಾರಿ ಜಿಲ್ಲೆ) ನದಿಗಳಿದ್ದು, ಎಲ್ಲವು ಗುಜರಾತ್ ವ್ಯಾಪ್ತಿಯಲ್ಲಿವೆ ಎಂದು ಕಂಪನಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.