ನವದೆಹಲಿ: ಅಯೋಧ್ಯೆಯ (Ayodhya Ram Mandir) ಜನ್ಮಸ್ಥಳದಲ್ಲಿ ರಾಮ್ ಲಲ್ಲಾನ (Ram Lalla) ಪ್ರವೇಶ ಮತ್ತು ದೇವಾಲಯದ ಪ್ರಾಣ ಪ್ರತಿಷ್ಠಾ (Pran Pratishtha Event) ಸಮಾರಂಭವು “ಭರತವರ್ಷದ ಪುನರ್ ನಿರ್ಮಾಣ’ದ ಅಭಿಯಾನದ ಆರಂಭವಾಗಿದೆ(Bharatvarsh). ಇದು ಎಲ್ಲರ ಸಾಮರಸ್ಯ, ಏಕತೆ, ಪ್ರಗತಿ, ಶಾಂತಿ ಮತ್ತು ಯೋಗಕ್ಷೇಮವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ (RSS Chief Mohan Bhagwat) ಅವರು ಹೇಳಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ ಲೇಖನದಲ್ಲಿ ಅನೇಕ ಸಂಗತಿಗಳ ಕುರಿತು ಮೋಹನ್ ಭಾಗವತ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕಾಗಿ “ಹಿಂದೂ ಸಮಾಜದ ನಿರಂತರ ಹೋರಾಟ” ವನ್ನು ಉಲ್ಲೇಖಿಸಿದ್ದಾರೆ ಮತ್ತು ವಿವಾದದ ಸಂಬಂಧದ ಉಂಟಾದ “ಘರ್ಷಣೆ ಮತ್ತು ಕಹಿ” ಇನ್ನು ಅಂತ್ಯಯಾಗಬೇಕು ಎಂದು ಅವರು ಹೇಳಿದ್ದಾರೆ.
ಹಲವು ವರ್ಷಗಳ ಕಾನೂನು ಹೋರಾಟದ ನಂತರ ಸುಪ್ರೀಂ ಕೋರ್ಟ್, 2019ರ ನವೆಂಬರ್ 9 ರಂದು “ಸತ್ಯ ಮತ್ತು ಸಂಗತಿಗಳನ್ನು” ಪರಿಶೀಲಿಸಿದ ನಂತರ ಮತ್ತು ಪ್ರಕರಣದ ಎಲ್ಲಾ ಪಕ್ಷಗಳ ವಾದಗಳನ್ನು ಆಲಿಸಿ, ಸಮತೋಲಿತ ತೀರ್ಪನ್ನು ಪ್ರಕಟಿಸಿತು ಎಂದು ಮೋಹನ್ ಭಾಗವತ್ ಅವರು ಹೇಳಿದ್ದಾರೆ.
ಧರ್ಮದ ದೃಷ್ಟಿಯಿಂದ ನೋಡುವುದಾದರೆ ಭಾರತೀಯ ಬಹುತೇಕ ಸಮಾಜಗಳಲ್ಲಿ ರಾಮ ಆರಾಧಿಸುವ ದೈವವಾಗಿದ್ದಾರೆ. ಈಗಲೂ ಅವರನ್ನು ಇಡೀ ಸಮಾಜವು ಆದರ್ಶ ಎಂದು ಒಪ್ಪಿಕೊಳ್ಳುತ್ತದೆ. ಆದ್ದರಿಂದ ಈಗ ವಿವಾದದ ಪರ ಮತ್ತು ವಿರುದ್ಧವಾಗಿ ಉದ್ಭವಿಸಿರುವ ಸಂಘರ್ಷವನ್ನು ಕೊನೆಗೊಳಿಸಬೇಕು. ಈ ನಡುವೆ ಎದ್ದಿರುವ ಕಹಿಯೂ ಕೊನೆಯಾಗಬೇಕು. ಸಮಾಜದ ಪ್ರಜ್ಞಾವಂತರು ವಿವಾದ ಸಂಪೂರ್ಣವಾಗಿ ಅಂತ್ಯಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿದ್ದಾರೆ.
ಅಯೋಧ್ಯೆ ಎಂದರೆ ಯುದ್ಧ ಇಲ್ಲದ ನಗರ; ಸಂಘರ್ಷ ಮುಕ್ತ ಸ್ಥಳ. ಈ ಸಂದರ್ಭದಲ್ಲಿ, ಇಡೀ ದೇಶದಲ್ಲಿ, ಅಯೋಧ್ಯೆಯ ಪುನರ್ನಿರ್ಮಾಣವು ಈ ಸಮಯದ ಅಗತ್ಯವಾಗಿದೆ ಮತ್ತು ನಮ್ಮೆಲ್ಲರ ಕರ್ತವ್ಯವಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಸಂದರ್ಭವು ರಾಷ್ಟ್ರೀಯ ಹೆಮ್ಮೆಯ ಪುನರುತ್ಥಾನವನ್ನು ಸೂಚಿಸುತ್ತದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Ram Mandir: ನಾಳೆ ಭಾರತೀಯರಿಗೆ ಸುದಿನ; ಈಡೇರಲಿದೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನಾ ಕ್ಷಣ!