ಭುವನೇಶ್ವರ: ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ಶಾಲಿಮಾರ್-ಚೆನ್ನೈ ಕೋರಮಂಡಲ ಎಕ್ಸ್‌ಪ್ರೆಸ್ ರೈಲು, ಬೆಂಗಳೂರು-ಹೌರಾ ರೈಲು ಹಾಗೂ ಗೂಡ್ಸ್ ರೈಲು ಡಿಕ್ಕಿಯಾಗಿದ್ದು (Train Accident), 238 ಮಂದಿ ಮೃತಪಟ್ಟಿದ್ದಾರೆ. ಬಾಲಾಸೋರ್ ಜಿಲ್ಲೆಯ ಬಹನಗ ರೈಲು ನಿಲ್ದಾಣದ ಬಳಿ ಮೂರು ರೈಲುಗಳು ಡಿಕ್ಕಿಯಾಗಿವೆ. ಈ ದುರಂತದಲ್ಲಿ 900ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಅಪಘಾತದ ಫೋಟೊಗಳು ಇಲ್ಲಿವೆ
Odisha | Several feared injured after Coromandel Express derails near Bahanaga station in Balasore, Odisha. pic.twitter.com/hV7YrDlduW
— ANI (@ANI) June 2, 2023
ಪಶ್ಚಿಮ ಬಂಗಾಳದ ಶಾಲಿಮಾರ್ ರೈಲು ನಿಲ್ದಾಣದಿಂದ ಹೊರಟ್ಟಿದ್ದ ಕೋರಮಂಡಲ ಎಕ್ಸ್‌ಪ್ರೆಸ್ ರೈಲು ಬಾಲಾಸೋರ್ ರೈಲು ನಿಲ್ದಾಣಕ್ಕೆ ಜೂನ್ 2ರಂದು ಸಂಜೆ 6.30ಕ್ಕೆ ತಲುಪಿತ್ತು. ಕೋರಮಂಡಲ ಎಕ್ಸ್‌ಪ್ರೆಸ್ ರೈಲು ಜೂನ್ 3ರಂದು ಸಂಜೆ 4.50ಕ್ಕೆ ತಲುಪಬೇಕಿತ್ತು. ಆದರೆ, ಶುಕ್ರವಾರ ಸಂಜೆ ಬಾಲಾಸೋರ್ ರೈಲು ನಿಲ್ದಾಣ ದಾಟಿದ ಕೆಲವೇ ನಿಮಿಷಗಳಲ್ಲಿ ಅಪಘಾತ ಸಂಭವಿಸಿದೆ.
Coromandel Express derails near Bahanaga station in Balasore, Odisha. Several coaches are reported to have derailed: CPRO Southern Railway https://t.co/T38tcZojVd
— ANI (@ANI) June 2, 2023
“ರೈಲುಗಳು ಡಿಕ್ಕಿಯಾದ ಸ್ಥಳಕ್ಕೆ ಹೆಚ್ಚಿನ ಸಿಬ್ಬಂದಿಯನ್ನು ಕಳುಹಿಸಲಾಗಿದೆ. ಬಾಲಾಸೋರ್ ಕಲೆಕ್ಟರ್ ಅವರು ಕರೆ ಮಾಡಿ ರಾಜ್ಯದಿಂದ ಬೇಕಾದ ಎಲ್ಲ ನೆರವು ನೀಡಲಾಗುವುದು ಎಂಬ ಭರವಸೆ ನೀಡಿದ್ದಾರೆ. ರೈಲಿನಲ್ಲಿ ಸಿಲುಕಿದವರು, ಗಾಯಾಳುಗಳ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ. ಗಾಯಾಳುಗಳನ್ನು ಬಾಲಾಸೋರ್ ಆಸ್ಪತ್ರೆಗೆ ಸಾಗಿಸಲಾಗಿದೆ” ಎಂದು ವಿಶೇಷ ಕಾರ್ಯಾಚರಣೆ ಆಯುಕ್ತರ ಕಚೇರಿ ಮಾಹಿತಿ ನೀಡಿದೆ.
ರಕ್ಷಣಾ ಕಾರ್ಯಾಚರಣೆ
ओडिशा के बालासोर में हुए कोरोमंडल एक्सप्रेस ट्रेन हादसे की खबर बेहद चिंताजनक है।
— Sandeep kishore 🇮🇳 (@sandeepkishore_) June 2, 2023
मैं ईश्वर से घायलों के शीघ्र स्वास्थ्य लाभ की प्रार्थना करता हूँ। 🙏#CoromandelExpress #Odisha #IndianRailways #TrainAccident pic.twitter.com/tRfhhh6dtw
ಇದನ್ನೂ ಓದಿ: Pushpa 2 Bus Accident : ‘ಪುಷ್ಪ 2’ ಕಲಾವಿದರ ಬಸ್ ಅಪಘಾತ; ಯಾರಿಗೇನಾಯಿತು?
ನೆರವಿಗೆ ಧಾವಿಸಿದ ಮಮತಾ ಬ್ಯಾನರ್ಜಿ
ಕೋರಮಂಡಲ ಎಕ್ಸ್‌ಪ್ರೆಸ್ ರೈಲು ಹಾಗೂ ಗೂಡ್ಸ್ ರೈಲು ಡಿಕ್ಕಿಯಾದ ಸುದ್ದಿ ತಿಳಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೆರವಿಗೆ ಧಾವಿಸಿದ್ದಾರೆ. “ಜನರ ರಕ್ಷಣೆಗಾಗಿ ನಾವು ಐದಾರು ಸದಸ್ಯರ ತಂಡ ಕಳುಹಿಸುತ್ತಿದ್ದೇವೆ. ಹಾಗೆಯೇ, ಜನರ ರಕ್ಷಣೆಗೆ ರಾಜ್ಯದಿಂದ ಎಲ್ಲ ನೆರವು ನೀಡಲಾಗುತ್ತದೆ. ನಾನೂ ಅಪಘಾತದ ಕುರಿತು ವೈಯಕ್ತಿಕವಾಗಿ ಮಾಹಿತಿ ಪಡೆಯುತ್ತಿದ್ದೇನೆ” ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.