ನವ ದೆಹಲಿ: ದೇಶದಲ್ಲಿ ಕೊರೊನಾ ಪ್ರಕರಣಗಳು ನಿನ್ನೆಗೆ ಹೋಲಿಸಿದರೆ ಶನಿವಾರ ಕಡಿಮೆಯಾಗಿದೆ. ಶುಕ್ರವಾರ ೧೭,೦೦೦ಕ್ಕಿಂತಲೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದರೆ ಕಳೆದ 24 ಗಂಟೆಗಳ ಅವಧಿಯಲ್ಲಿ 15,940 ಪ್ರಕರಣಗಳು ದಾಖಲಾಗಿವೆ.
ಶುಕ್ರವಾರ 4 ತಿಂಗಳಲ್ಲೇ ಅತಿ ಹೆಚ್ಚು ಕೊವಿಡ್ ಪ್ರಕರಣ ದಾಖಲಾಗಿದ್ದರಿಂದ ಜನರಲ್ಲಿ ಆತಂಕ ಹೆಚ್ಚಾಗಿತ್ತು. ಮತ್ತೆ ಲಾಕ್ಡೌನ್ ಆಗಬಹುದು ಎನ್ನುವ ಆತಂಕ ಎದುರಾಗಿತ್ತು. ಆದರೆ ಇಂದಿನ ಕೊರೊನಾ ಪ್ರಕರಣಗಳನ್ನು ಗಮನಿಸಿದರೆ ಸ್ವಲ್ಪ ಸಮಾಧಾನ ಅನಿಸುತ್ತಿದೆ. ನಿನ್ನೆಗಿಂತ ಎರಡು ಸಾವಿರದಷ್ಟು ಪ್ರಕರಣಗಳು ಇಳಿಮುಖವಾಗಿವೆ.. ಕಳೆದೊಂದು ದಿನದಲ್ಲಿ 20 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.. ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 91 ಸಾವಿರದ 779ಕ್ಕೆ ಏರಿಕೆಯಾಗಿದೆ.
ವಿವಿಧ ರಾಜ್ಯಗಳಲ್ಲಿನ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ
ಮಹಾರಾಷ್ಟ್ರದಲ್ಲಿ 4,205, ಕೇರಳದಲ್ಲಿ 3,981, ದೆಹಲಿಯಲ್ಲಿ 1,447, ತಮಿಳು ನಾಡಿನಲ್ಲಿ 1,359, ಕರ್ನಾಟಕದಲ್ಲಿ 816 ಕೇಸುಗಳು ದಾಖಲಾಗಿವೆ.
ಇದನ್ನೂ ಓದಿ: ದೇಶದಲ್ಲಿ ಮತ್ತೆ ಹೆಚ್ಚಿದ ಕೊರೊನಾ: ನಿನ್ನೆಯಿಂದ ಇವತ್ತಿಗೆ 30% ಕೇಸುಗಳು ಹೆಚ್ಚಳ