Site icon Vistara News

ದೇಶದಲ್ಲಿ ಹೆಚ್ಚಿದ ಕೊರೊನಾ ಅಬ್ಬರ: 24 ಗಂಟೆಯಲ್ಲೇ 12,847 ಹೊಸ ಕೇಸು

covid

ನವ ದೆಹಲಿ: ದೇಶದಲ್ಲಿ ಕೊರೊನಾ ಅಬ್ಬರ ದಿನದಿಂದ ದಿನಕ್ಕೆ ಏರುತ್ತಿದ್ದು, ಕಳೆದ 24 ಗಂಟೆಯಲ್ಲೇ ಹೊಸದಾಗಿ 12,847 ಮಂದಿಗೆ ಸೋಂಕು ತಗುಲಿದೆ. 14 ಮಂದಿ ಮೃತಪಟ್ಟಿದ್ದಾರೆ. ಈ ನಡುವೆ ದೇಶದಲ್ಲಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ 63,063ಕ್ಕೆ ಏರಿದೆ. ಗುರುವಾರ 12,213 ಪ್ರಕರಣ ದಾಖಲಾಗಿದ್ದರೆ, ಬುಧವಾರ 8,822 ಸೋಂಕು ದಾಖಲಾಗಿತ್ತು.

ಇದನ್ನು ಓದಿ | Covid news | ಅಕ್ಟೋಬರ್‌ನಲ್ಲಿ ಕೊರೊನಾ ಉತ್ತುಂಗ, ಆರೋಗ್ಯ ಸಚಿವ ಸುಧಾಕರ್‌ ಹೇಳಿದ್ದೇನು?

ಮಹಾರಾಷ್ಟ್ರ, ಕೇರಳ, ದೆಹಲಿ, ಹರಿಯಾಣ ಮತ್ತು ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ರಾಜ್ಯಗಳಲ್ಲಿ ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು, ಕೊರೊನಾ ನಾಲ್ಕನೇ ಅಲೆಯ ಭೀತಿ ಶುರುವಾಗಿದೆ. ಮಹಾರಾಷ್ಟ್ರದಲ್ಲಿ ಒಂದೇ ದಿನ 4,255, ಕೇರಳದಲ್ಲಿ 3,419, ದೆಹಲಿ 1,323, ಕರ್ನಾಟಕದಲ್ಲಿ 833 ಮತ್ತು ಹರಿಯಾಣದಲ್ಲಿ 625 ಪ್ರಕರಣಗಳು ದಾಖಲಾಗಿವೆ.  

ಸದ್ಯ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಲಸಿಕೆ ಅಭಿಯಾನವನ್ನು ಚುರುಕುಗೊಳಿಸಲಾಗಿದ್ದು, 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್​ ಡೋಸ್​ ನೀಡಲಾಗುತ್ತಿದೆ. ಕಳೆದ ವರ್ಷದ ಜನವರಿ 16 ರಿಂದ ಭಾರತದಲ್ಲಿ ಲಸಿಕೆ ಅಭಿಯಾನವನ್ನು ಆರಂಭ ಮಾಡಲಾಯಿತು, ಈವರೆಗೂ 195.84 ಕೋಟಿ ಲಸಿಕೆಯನ್ನು ಸಾರ್ವಜನಿಕರಿಗೆ ವಿತರಣೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Exit mobile version