ನವದೆಹಲಿ: ಕೊರೊನಾ ಸೋಂಕು (Coronavirus) ಈಗ ಮನುಷ್ಯನಿಗೆ ಅತ್ಯಂತ ದೊಡ್ಡ ಅಪಾಯವಾಗಿ ಉಳಿದುಕೊಂಡಿಲ್ಲ. ಇದು ಕೇವಲ ಒಂದು ಕಾಯಿಲೆಯಾಗಿ ಮಾತ್ರವೇ ಉಳಿದುಕೊಂಡಿದೆ ಎಂದು ಅಮೆರಿಕದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್(ಸಿಡಿಸಿ)ನ ಭಾರತದ ಮುಖ್ಯಸ್ಥೆ ಮೇಘನಾ ದೇಸಾಯಿ ಅವರು ಹೇಳಿದ್ದಾರೆ.
ಇದನ್ನೂ ಓದಿ: International Women’s Day: ಕೊರೊನಾ ಕಾಲದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದು ಹೋರಾಡಿದ ಮಹಿಳೆಯರಿವರು
ಸಂದರ್ಶನವೊಂದರಲ್ಲಿ ಮಾತನಾಡಿರುವ ಮೇಘನಾ ಅವರು, “ಲಾಕ್‌ಡೌನ್‌ನಂತಹ ಕಠಿಣ ಕ್ರಮ ಬಳಸದೆಯೇ ಕೊರೊನಾವನ್ನು ನಿಯಂತ್ರಿಸುವ ಪರಿಸ್ಥಿತಿಯಲ್ಲಿ ನಾವೀಗ ಇದ್ದೇವೆ. ಕೊರೊನಾ ಮನುಷ್ಯನಿಗೆ ಅಪಾಯಕಾರಿಯೇ. ಆದರೆ ಅದನ್ನು ನಿಭಾಯಿಸುವುದನ್ನು ನಾವು ಕಂಡುಕೊಂಡಿದ್ದೇವೆ. ಈ ಸೋಂಕು ಸಂಪೂರ್ಣವಾಗಿ ನಿರ್ಮೂಲನೆಯಾಗುವ ಹಂತಕ್ಕೆ ಬಂದಿದೆ. ಆದರೂ ನಾವು ಆಗಾಗ ಟೆಸ್ಟ್, ಬೂಸ್ಟರ್ ಡೋಸ್‌ನಂತಹ ಎಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿರಬೇಕು” ಎಂದು ಹೇಳಿದ್ದಾರೆ.
ಕೊರೊನಾ ಸೋಂಕು ಚೀನಾದ ಪ್ರಯೋಗಾಲಯದಲ್ಲಿ ಉತ್ಪತ್ತಿಯಾದದ್ದೇ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಅವರು, “ಆ ಬಗ್ಗೆ ಇನ್ನೂ ಸರಿಯಾದ ಉತ್ತರ ಸಿಕ್ಕಿಲ್ಲ. ಕೊರೊನಾ ಸೋಂಕು ಪ್ರಯೋಗಾಲಯದಲ್ಲಿ ಉತ್ಪತ್ತಿಯಾದದ್ದು ಎನ್ನುವುದಕ್ಕೆ ಸೂಕ್ತ ಪುರಾವೆಗಳೂ ನಮ್ಮಲ್ಲಿಲ್ಲ. ಈಗ ಸದ್ಯಕ್ಕೆ ಪಶ್ಚಿಮ ಆಫ್ರಿಕಾದಲ್ಲಿ ಹೆಚ್ಚುತ್ತಿರುವ ಮಾರ್ಬರ್ಗ್ ಸೋಂಕಿನ ಬಗ್ಗೆ ಅಧ್ಯಯನ ನಡೆಸುವ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Coronavirus Cases Rise: ಹೆಚ್ಚಿನ ಜನಕ್ಕೆ ಜ್ವರ, ಶೀತದ ಬೆನ್ನಲ್ಲೇ ಕೊರೊನಾ ಕೇಸ್ ಹೆಚ್ಚಳ, ಜನರಲ್ಲಿ ಆತಂಕ