Site icon Vistara News

Budget 2023: ಹೆಚ್ಚಾಯ್ತು ಸುಡುವ ಸಿಗರೇಟ್​​ನ ಬಿಸಿ; ಸೋಷಿಯಲ್​ ಮೀಡಿಯಾದಲ್ಲಿ ಮೀಮ್ಸ್​​ಗಳ ಸುರಿಮಳೆ

Costlier Cigarettes Memefest on Social Media

#image_title

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕೊನೇ ಸಲದ ಪೂರ್ಣಪ್ರಮಾಣದ ಬಜೆಟ್​​ನ್ನು ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಮಂಡಿಸಿದರು. ಇಂದು ಮಂಡನೆಯಾದ ಕೇಂದ್ರ ಆಯವ್ಯಯ ಸಿಗರೇಟ್​ ಪ್ರಿಯರಿಗೆ ಕಹಿಸುದ್ದಿ ನೀಡಿದೆ. ತಂಬಾಕು ಉತ್ಪನ್ನಗಳ ಮೇಲಿನ ಸುಂಕವನ್ನು (National Calamity Contingent Duty ) ಕೇಂದ್ರ ಸರ್ಕಾರ ಶೇ.16ರಷ್ಟು ಹೆಚ್ಚಿಸಿದ ಕಾರಣಕ್ಕೆ, ಸಿಗರೇಟ್​ ಬೆಲೆ ಏರಿಕೆಯಾಗಲಿದೆ. ಹೀಗೆ ಸಿಗರೇಟ್​ ದರ ಹೆಚ್ಚಿದ ಬೆನ್ನಲ್ಲೇ ಟ್ವಿಟರ್​​ನಲ್ಲಿ ಈ ಬಗ್ಗೆ ವಿಧವಿಧವಾದ ಜೋಕ್​ಗಳು, ಮೀಮ್ಸ್​ಗಳು ಸೋಷಿಯಲ್​ ಮೀಡಿಯಾಗಳಲ್ಲಿ ಹರಿದಾಡುತ್ತಿವೆ.

ಇನ್ಮುಂದೆ ಪ್ರತಿದಿನವೂ ಅಪಾರ ಸಿಗರೇಟ್​ ಸೇದುವವರ ಜೇಬು ಖಾಲಿ ಇರುತ್ತದೆ. ಅವರ ಬಳಿಯಿದ್ದ ಹಣ, ‘ಒಳಿತಾಗಲಿ ಸೋದರ, ನಾನಿನ್ನು ಹೊರಡುತ್ತೇನೆ’ ಎಂದು ಹೇಳಿ ಹೋಗಿಯೇ ಬಿಡುತ್ತದೆ’ ಎಂಬರ್ಥದ ಪೋಸ್ಟ್​ವೊಂದು ಸಿಕ್ಕಾಪಟೆ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲ, ‘ಐಟಿಸಿ ಸಿಗರೇಟ್​ ಕಂಪನಿ ಕೇಂದ್ರ ಸರ್ಕಾರದ ಬಳಿ ‘ನೀವ್ಯಾಕೆ ನಮ್ಮನ್ನು ಹೊಡೆದು ಹಾಕಿದಿರಿ’ ಎಂದು ಪ್ರಶ್ನೆ ಕೇಳುತ್ತಿರುವಂಥ, ಸಿಗರೇಟ್​ ಬೆಲೆ ಏರಿಕೆಯಾಗುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ಸ್ಮೋಕರ್​ವೊಬ್ಬ ಅತ್ಯಂತ ಹತಾಶೆಯಿಂದ ‘ನಮ್ಮನ್ನು ಯಾಕೆ ಉಳಿಸಿದ್ದೀರಿ, ಕೊಂದು ಬಿಡಿ’ ಎಂದು ಹೇಳುತ್ತಿರುವಂಥ ಮೀಮ್ಸ್​​ಗಳು, ‘ಹೀಗೆ ಕಾಯ್ತಾ ಇರಿ, ಗೋಲ್ಡ್​ಫ್ಲೇಕ್​ ಸಿಗರೇಟ್​ ಇನ್ನು ಕೆಲವೇ ದಿನಗಳಲ್ಲಿ ಚಿನ್ನದ ಅಂಗಡಿಯಲ್ಲಿ ಸಿಗುವಂತಾಗುತ್ತದೆ’ ಎಂದು ನಿರ್ಮಲಾ ಸೀತಾರಾಮನ್​ ಅವರು ಸ್ಮೋಕರ್​ಗಳಿಗೆ ಹೇಳುತ್ತಿರುವಂಥ ಮೀಮ್ಸ್​​ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್ ಆಗುತ್ತಿವೆ.

Exit mobile version