Site icon Vistara News

Costliest City: ಮುಂಬಯಿ ಈಗ ಭಾರತದ ಅತ್ಯಂತ ದುಬಾರಿ ನಗರ; ಬೆಂಗಳೂರಿಗೆ ಎಷ್ಟನೇ ಸ್ಥಾನ?

Costliest City

ವಾಣಿಜ್ಯ ನಗರಿ ಮುಂಬಯಿ (mumbai) ಈಗ ವಿಶ್ವದ ಅತ್ಯಂತ ದುಬಾರಿ ನಗರಗಳಲ್ಲಿ (Costliest City) ಒಂದಾಗಿ ಹೊರ ಹೊಮ್ಮಿದೆ. ಜಾಗತಿಕವಾಗಿ 136ನೇ ಸ್ಥಾನದಲ್ಲಿದೆ. ಮರ್ಸರ್ಸ್ ಕಾಸ್ಟ್ ಆಫ್ ಲಿವಿಂಗ್ ಸಿಟಿ (Mercer’s Cost of Living City) ಶ್ರೇಯಾಂಕ 2024ರ ವರದಿಯನ್ನು ಪ್ರಕಟಿಸಿದ್ದು, ಕಳೆದ ವರ್ಷದಂತೆ ಈ ಬಾರಿಯೂ ಹಾಂಗ್‌ಕಾಂಗ್ (Hong Kong), ಸಿಂಗಾಪುರ್ (Singapore) ಮತ್ತು ಜ್ಯೂರಿಚ್ (Zurich) ವಲಸಿಗರಿಗೆ ವಿಶ್ವದ ಅತ್ಯಂತ ದುಬಾರಿ ನಗರಗಳಾಗಿ ಗುರುತಿಸಿಕೊಂಡಿದೆ.

ಜೀವನ ವೆಚ್ಚದ ವಿಚಾರದಲ್ಲಿ ಇಸ್ಲಾಮಾಬಾದ್, ಲಾಗೋಸ್ ಮತ್ತು ಅಬುಜಾ ಅತ್ಯಂತ ಕೆಳಗಿನ ಸ್ಥಾನದಲ್ಲಿವೆ. ಭಾರತದಲ್ಲಿ ಮುಂಬಯಿ ಅತ್ಯುನ್ನತ ಸ್ಥಾನದಲ್ಲಿದೆ. ಮುಂಬಯಿ ಕಳೆದ ವರ್ಷಕ್ಕಿಂತ 11 ಸ್ಥಾನಗಳನ್ನು ಏರಿಸಿಕೊಂಡಿದೆ. ಮುಂಬಯಿ ಈಗ ವಲಸಿಗರಿಗೆ ಭಾರತದ ಅತ್ಯಂತ ದುಬಾರಿ ನಗರವಾಗಿ ಗುರುತಿಸಲ್ಪಟ್ಟಿದೆ. ದೆಹಲಿಯು ನಾಲ್ಕು ಪ್ರದೇಶಗಳನ್ನು ಕೆಳಕ್ಕೆ ತಳ್ಳಿ ವಿಶ್ವದಲ್ಲಿ 165ನೇ ದುಬಾರಿ ನಗರವಾಗಿ ಗುರುತಿಸಿಕೊಂಡಿದೆ.


ದುಬಾರಿ ಪಟ್ಟಿಯಲ್ಲಿರುವ ಭಾರತದ ನಗರಗಳು

ಐದು ಅಂಕಗಳನ್ನು ಕಳೆದುಕೊಂಡು ಚೆನ್ನೈ 189 ಮತ್ತು ಬೆಂಗಳೂರು 195 ಅಂಕಗಳಿಗೆ ಕುಸಿದಿದೆ. ಹೈದರಾಬಾದ್ 202ರಲ್ಲಿದೆ. ವಲಸಿಗರಿಗೆ ವಿಶ್ವದ ಅತ್ಯಂತ ದುಬಾರಿ ನಗರಗಳ ಪಟ್ಟಿಯಲ್ಲಿ ಪುಣೆ 205 ಮತ್ತು ಕೋಲ್ಕತ್ತಾ 207 ನೇ ಸ್ಥಾನದಲ್ಲಿದೆ.

ಮರ್ಸರ್ಸ್ ಕಾಸ್ಟ್ ಆಫ್ ಲಿವಿಂಗ್ ಸಿಟಿ ಶ್ರೇಯಾಂಕ 2024ರ ಪಟ್ಟಿಗೆ ಮಾಹಿತಿ ಪಡೆಯಲು ವಿಶ್ವದ 226 ನಗರಗಳನ್ನು ವಿಶ್ಲೇಷಿಸಲಾಗಿದೆ. ಇದರಲ್ಲಿ ವಸತಿ, ಸಾರಿಗೆ, ಆಹಾರ, ಬಟ್ಟೆ ಮತ್ತು ಮನೋರಂಜನೆಯಂತಹ 200 ಕ್ಕೂ ಹೆಚ್ಚು ವಸ್ತುಗಳ ವೆಚ್ಚವನ್ನು ಅಳೆಯಲಾಗಿದೆ.

ಸಮೀಕ್ಷೆಯ ಮೂಲ ನ್ಯೂಯಾರ್ಕ್ ನಗರವಾಗಿದೆ. ಸಮೀಕ್ಷೆಯ ಪ್ರಕಾರ ಹಣದುಬ್ಬರ, ವಿನಿಮಯ ದರದ ವ್ಯತ್ಯಾಸಗಳು, ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಚಂಚಲತೆ ಮತ್ತು ಹೆಚ್ಚುತ್ತಿರುವ ಸಂಘರ್ಷಗಳಂತಹ ಜೀವನ ವೆಚ್ಚದ ಹೆಚ್ಚಳಕ್ಕೆ ಕಾರಣವಾಗಿವೆ.


ಹಾಂಗ್‌ಕಾಂಗ್ ಏಕೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ?

ಹಾಂಗ್‌ಕಾಂಗ್‌ನಂತಹ ನಗರಗಳಲ್ಲಿ ದುಬಾರಿ ವಸತಿ, ಹೆಚ್ಚಿನ ಸಾರಿಗೆ ವೆಚ್ಚಗಳು ಮತ್ತು ದುಬಾರಿ ಸರಕು ಮತ್ತು ಸೇವೆಗಳ ಕಾರಣದಿಂದಾಗಿ ಜೀವನ ವೆಚ್ಚ ಹೆಚ್ಚಾಗಿದೆ ಎಂದು ಸಮೀಕ್ಷೆಯು ತೋರಿಸಿದೆ. ಆದರೆ ಆರ್ಥಿಕ ಕುಸಿತದಿಂದಾಗಿ ಇಸ್ಲಾಮಾಬಾದ್, ಲಾಗೋಸ್ ಮತ್ತು ಅಬುಜಾದಲ್ಲಿ ಜೀವನ ವೆಚ್ಚವನ್ನು ಕಡಿಮೆಯಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: Maya Neelakantan: ಅಮೆರಿಕವನ್ನು ಹುಚ್ಚೆಬ್ಬಿಸಿದ 10 ವರ್ಷದ ಭಾರತೀಯ ಗಿಟಾರ್‌ ಬಾಲೆ ಮಾಯಾ ನೀಲಕಂಠನ್‌, ಯಾರೀಕೆ?

ಇತರ ಅತ್ಯಂತ ದುಬಾರಿ ನಗರಗಳು

ಯುರೋಪಿಯನ್ ನಗರಗಳಲ್ಲಿ ಟಾಪ್ 10 ಅತ್ಯಂತ ದುಬಾರಿ ನಗರಗಳಲ್ಲಿ ಕಾಣಿಸಿಕೊಂಡಿವೆ. ಲಂಡನ್ 8ನೇ ಸ್ಥಾನದಲ್ಲಿದೆ, ಕೋಪನ್ ಹ್ಯಾಗನ್ 11, ವಿಯೆನ್ನಾ 24, ಪ್ಯಾರಿಸ್ 29, ಮತ್ತು ಆಮ್ಸ್ಟರ್‌ಡ್ಯಾಮ್ 30, ದುಬೈ ಮಧ್ಯಪ್ರಾಚ್ಯದಲ್ಲಿ ಅಂತಾರಾಷ್ಟ್ರೀಯ ಉದ್ಯೋಗಿಗಳಿಗೆ 15 ನೇ ಶ್ರೇಯಾಂಕದಲ್ಲಿ ಅತ್ಯಂತ ದುಬಾರಿ ನಗರವಾಗಿದೆ, ದಕ್ಷಿಣ ಅಮೆರಿಕಾದಲ್ಲಿ ಉರುಗ್ವೆ 42 ನೇ ಶ್ರೇಣಿಯಲ್ಲಿದೆ. ಉತ್ತರ ಅಮೆರಿಕಾದಲ್ಲಿ ನ್ಯೂಯಾರ್ಕ್ ನಗರವು 7ನೇ ಶ್ರೇಣಿಯಲ್ಲಿದ್ದು ಅಗ್ರಸ್ಥಾನದಲ್ಲಿದೆ.

Exit mobile version