Site icon Vistara News

ಜಿಮೇಲ್ ಓಪನ್ ಆಗ್ಲಿಲ್ಲ, ಅದ್ಕೆ ಜೈಲಿನಿಂದ ಬಿಡಲಿಲ್ಲ! ಹೈಕೋರ್ಟ್ ಬೇಲ್ ನೀಡಿದ್ರೂ 3 ವರ್ಷ ಜೈಲಿನಲ್ಲೇ ಉಳಿದ ಯುವಕ!

Gujarat High Court

ಅಹಮದಾಬಾದ್: ಜಾಮೀನು ನೀಡಿದರೂ 3 ವರ್ಷಗಳಿಂದ ಜೈಲಿನಿಂದ ಬಿಡುಗಡೆಯಾಗದ 27 ವರ್ಷದ ಯುವಕನಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಗುಜರಾತ್ ಹೈಕೋರ್ಟ್(Gujarat High Court), ಗುಜರಾತ್ ರಾಜ್ಯ ಸರ್ಕಾರಕ್ಕೆ (Gujarat State Government) ಬುಧವಾರ ಆದೇಶಿಸಿದೆ. 2020ರಲ್ಲಿ ಗುಜರಾತ್ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ, ಜೈಲು ಅಧಿಕಾರಿಗಳ (Jail Officials) ನಿರ್ಲಕ್ಷ್ಯದಿಂದಾಗಿ ಯುವಕ ಆಲ್ಮೋಸ್ಟ್ 3 ವರ್ಷಗಳವರೆಗೆ ಜೈಲಿನಲ್ಲಿ ಕೊಳೆಯುವಂತಾಯಿತು. ಅಲ್ಲದೇ, ಜೈಲು ಅಧಿಕಾರಿಗಳು ಕೊಟ್ಟಿರುವ ಕಾರಣ ಕೂಡ ವಿಚಿತ್ರವಾಗಿದೆ. ಜಿಮೇಲ್ ತೆರೆಯಲು (Gmail) ಸಾಧ್ಯವಾಗದ್ದಕ್ಕೆ ಜೈಲಿನಿಂದ ಬಿಡುಗಡೆ ಸಾಧ್ಯವಾಗಿಲ್ಲ ಎಂದು ಸಬೂಬು ಹೇಳಿರುವುದು ಅಪಹಾಸ್ಯಕ್ಕೆ ಕಾರಣವಾಗಿದೆ.

ಜಾಮೀನು ಆದೇಶವನ್ನು 2020ರ ಸೆಪ್ಟೆಂಬರ್ 29ರಂದು ನೀಡಲಾಯಿತು. ಆದರೆ ನಿನ್ನೆ, 2023ರ ಸೆಪ್ಟೆಂಬರ್ 21ರಂದು ಅಂತಿಮವಾಗಿ ಅಪರಾಧಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ನ್ಯಾಯಮೂರ್ತಿಗಳಾದ ಎಎಸ್ ಸುಪೇಹಿಯಾ ಮತ್ತು ಎಂಆರ್ ಮೆಂಗ್ಡೆ ಅವರ ಪೀಠವು 35 ಪುಟಗಳ ಆದೇಶದಲ್ಲಿ ತಿಳಿಸಿದೆ. ಕಾರಾಗೃಹ ಅನುಭವಿಸುತ್ತಿದ್ದ 27 ವರ್ಷದ ಚಂದನ್‌ಜಿ ಠಾಕೂರ್ ಅವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿ ಪೀಠವು ಈ ಆದೇಶವನ್ನು ನೀಡಿದೆ.

ಜೈಲು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹೈಕೋರ್ಟ್ ಆದೇಶದ ಹೊರತಾಗಿಯೂ ಜೈಲಿನಲ್ಲಿಯೇ ಉಳಿದಿರುವ ಅರ್ಜಿದಾರರ ದುರವಸ್ಥೆಯನ್ನು ಪರಿಗಣಿಸಿ, ಸುಮಾರು ಮೂರು ವರ್ಷಗಳ ಕಾಲ ಅಕ್ರಮವಾಗಿ ಜೈಲಿನಲ್ಲಿದ್ದಕ್ಕಾಗಿ ಪರಿಹಾರವನ್ನು ನೀಡಲು ನಾವು ಒಲವು ತೋರಿದ್ದೇವೆ. ಅರ್ಜಿದಾರರನ್ನು ಸಾಮಾನ್ಯ ಜಾಮೀನಿನ ಮೇಲೆ ಬಿಡುಗಡೆ ಮಾಡುವ ಈ ನ್ಯಾಯಾಲಯವು ಸೆಪ್ಟೆಂಬರ್ 2020 ರ ಜಾಮೀನು ಆದೇಶದ ಬಗ್ಗೆ ಹೈಕೋರ್ಟ್‌ನ ನೋಂದಾವಣೆ ಜೈಲು ಅಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿಸಿದೆ. ಜೈಲು ಅಧಿಕಾರಿಗಳಿಗೆ ಆದೇಶದ ಇ-ಮೇಲ್ ಬಂದಿಲ್ಲ ಎಂಬುದು ನಿಜವಲ್ಲ.ಅವರು ಇ-ಮೇಲ್ ಸ್ವೀಕರಿಸಿದ್ದರೂ, ಅಟ್ಯಾಚ್‌ಮೆಂಟ್ ಓಪನ್ ಮಾಡಲು ಸಾಧ್ಯವಾಗಿಲ್ಲ ಎಂದು ಕೋರ್ಟ್ ಹೇಳಿದೆ.

ಈ ಸುದ್ದಿಯನ್ನೂ ಓದಿ: Congress Guarantee : ಗೃಹಲಕ್ಷ್ಮಿ, ಗೃಹಜ್ಯೋತಿ ಜಾಹೀರಾತಿನಲ್ಲಿ ಸಿಎಂ, ಡಿಸಿಎಂ ಫೋಟೊ ಬಳಕೆ ಪ್ರಶ್ನಿಸಿದ ಅರ್ಜಿ ವಜಾ

ಜಾಮೀನು ಆದೇಶವನ್ನು ಒಳಗೊಂಡಿರುವ ಇಮೇಲ್ ಅನ್ನು ಮೆಹ್ಸಾನಾದ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಕಳುಹಿಸಲಾಗಿತ್ತು. ಆದರೆ ಆದೇಶದ ಸರಿಯಾದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯವು ಯಾವುದೇ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಂಡಿಲ್ಲ. ದುರದೃಷ್ಟವಶಾತ್, ನಿನ್ನೆಯವರೆಗೆ ಈ ವಿಷಯದ ಬಗ್ಗೆ ಯಾರೂ ತಲೆಯೇ ಕೆಡಿಸಿಕೊಂಡಿಲ್ಲ. ಆದ್ದರಿಂದ, ನ್ಯಾಯದ ಹಿತದೃಷ್ಟಿಯಿಂದ ಮತ್ತು ಜೈಲು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅರ್ಜಿದಾರರು ಜೈಲಿನಲ್ಲಿ ಉಳಿಯುಂತಾಯಿತು. ಹಾಗಾಗಿ ಅವರಿಗೆ 1 ಲಕ್ಷ ರೂ. ಪರಿಹಾರವನ್ನು ನೀಡುವಂತೆ ರಾಜ್ಯಕ್ಕೆ ನಿರ್ದೇಶಿಸುತ್ತಿದ್ದೇವೆ. ಲಕ್ಷ. 14 ದಿನಗಳ ಅವಧಿಯೊಳಗೆ ಪಾವತಿಸಬೇಕು ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ಜೈಲು ದಾಖಲೆಗಳ ಪ್ರಕಾರ, ಅರ್ಜಿದಾರರು ಈಗಾಗಲೇ ಐದು ವರ್ಷಗಳಿಗಿಂತ ಹೆಚ್ಚು ಅವಧಿಯನ್ನು ಜೈಲಿನಲ್ಲಿ ಕಳೆದಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version