Site icon Vistara News

Viral Video: ಮಾಡಬಾರದ್ದು ಮಾಡ್ತಿದಾರೆ ಎಂದು ದಂಪತಿಯನ್ನು ಮರಕ್ಕೆ ನೇತು ಹಾಕಿದ ಹಳ್ಳಿ ಜನ!

Couple Tied To Tree

#image_title

ತೆಲಂಗಾಣದಲ್ಲಿ ದಂಪತಿ (Telangana couple)ಯನ್ನು, ಸ್ಥಳೀಯರೆಲ್ಲ ಸೇರಿ ಮರಕ್ಕೆ ನೇತು ಹಾಕಿದ ರೀತಿಯಲ್ಲಿ ಕಟ್ಟಿ ಹಾಕಿ ಥಳಿಸಿದ್ದಾರೆ. ಈ ವಿಡಿಯೊ-ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಗಂಡ-ಹೆಂಡತಿ ಇಬ್ಬರೂ ಮರದಲ್ಲಿ ಜೋತಾಡುತ್ತಿದ್ದರೆ, ಸ್ಥಳದಲ್ಲಿ ಹಲವು ಮಂದಿ ಇರುವುದು ಕಾಣಿಸುತ್ತದೆ. ಅಂದಹಾಗೇ, ಈ ಘಟನೆ ನಡೆದಿದ್ದು ತೆಲಂಗಾಣದ ಕೋಲ್ಕುರು ಎಂಬ ಗ್ರಾಮದಲ್ಲಿ. ಫೋಟೋ-ವಿಡಿಯೊ ವೈರಲ್ ಆಗುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೊಲೀಸರು ಆ ಹಳ್ಳಿಗೆ ತೆರಳಿ ವಿಚಾರಣೆ ನಡೆಸಿದಾಗ ಅಲ್ಲಿನ ಜನರು ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಈ ದಂಪತಿ (ಯಾದಯ್ಯ ಮತ್ತು ಅವನ ಪತ್ನಿ ಶ್ಯಾಮಮ್ಮ) ಮಾಟ-ಮಂತ್ರದಲ್ಲಿ ತೊಡಗಿದ್ದರು. ಇವರಿಬ್ಬರ ನಡೆ ತುಂಬ ನಿಗೂಢವಾಗಿತ್ತು. ವಿಚಿತ್ರ ಆಚರಣೆಗಳನ್ನು ಮಾಡುತ್ತಿದ್ದರು. ಹೀಗಾಗಿ ಇಬ್ಬರನ್ನೂ ಕಟ್ಟಿ ಹಾಕಿ ಥಳಿಸಿದ್ದೇವೆ ಎಂದು ಗ್ರಾಮಸ್ಥರು ಉತ್ತರಿಸಿದ್ದಾರೆ.

ಇದನ್ನೂ ಓದಿ: Electric Shock: ಕಲಬುರಗಿ, ತುಮಕೂರಲ್ಲಿ ವಿದ್ಯುತ್‌ ಶಾಕ್‌ ಅವಘಡ; ದಂಪತಿ ದಾರುಣ ಸಾವು, ನಾಲ್ವರು ಗಂಭೀರ

ಈ ಬಗ್ಗೆ ಮಾಹಿತಿ ನೀಡಿದ ಸರ್ಕಲ್ ಇನ್ಸ್​ಪೆಕ್ಟರ್​ ನವೀನ್​ ಅವರು ‘ಯಾದಯ್ಯ ಮತ್ತು ಶ್ಯಾಮಮ್ಮ ವಿರುದ್ಧ ಗ್ರಾಮಸ್ಥರು ಮಾಟ-ಮಂತ್ರದ ಆರೋಪ ಮಾಡುತ್ತಿದ್ದಾರೆ. ಇವರಿಬ್ಬರೂ ಶಂಕಿತ ಆಚರಣೆ ಮಾಡುತ್ತಿದ್ದುದನ್ನು ಎರಡು ದಿನಗಳ ಹಿಂದೆ ಯಾರೋ ಒಬ್ಬರು ನೋಡಿದ್ದಾರಂತೆ. ಹೀಗಾಗಿ ಹಳ್ಳಿಗರೆಲ್ಲ ಸೇರಿ, ದಂಪತಿಯನ್ನು ಮನೆಯಿಂದ ಹೊರಗೆ ಎಳೆದುಕೊಂಡು ಬಂದು, ಹೀಗೆ ಮರಕ್ಕೆ ಕಟ್ಟಿ ಹಾಕಿ ಹೊಡೆದಿದ್ದಾರೆ. ಹಾಗಂತ ದಂಪತಿಗೆ ದೊಡ್ಡಮಟ್ಟದ ಗಾಯವಾಗಿಲ್ಲ. ನಾವು ಪ್ರಕರಣದ ತನಿಖೆಯನ್ನು ಸಮಗ್ರವಾಗಿ ನಡೆಸುತ್ತಿದ್ದೇವೆ’ ಎಂದಿದ್ದಾರೆ.

Exit mobile version