Site icon Vistara News

Gyanvapi mosque case: ಜ್ಞಾನವಾಪಿ ಮಸೀದಿಯ ಪುರಾತತ್ವ ಸರ್ವೇ ವರದಿ ಬಹಿರಂಗಕ್ಕೆ ಕೋರ್ಟ್ ಒಪ್ಪಿಗೆ

Gnanavapi Masjid

ನವದೆಹಲಿ: ಜ್ಞಾನವಾಪಿ ಮಸೀದಿ (Gyanvapi mosque case) ಸಂಕೀರ್ಣ ಕುರಿತಾದ ಭಾರತೀಯ ಪುರಾತತ್ವ ಸಮೀಕ್ಷೆ ವರದಿಯನ್ನು (ASI survey report) ಸಾರ್ವಜನಿಕಗೊಳಿಸಲು ಮತ್ತು ಹಿಂದೂ ಹಾಗೂ ಮುಸ್ಲಿಮ್ ಕಕ್ಷಿದಾರರಿಗೆ ಒದಗಿಸಲು ವಾರಾಣಸಿ ಜಿಲ್ಲಾ ನ್ಯಾಯಾಲಯವು (Varanasi District court) ಅವಕಾಶವನ್ನು ಕಲ್ಪಿಸಿದೆ ಎಂದು ಉಭಯ ಪಕ್ಷಗಳ ಕಕ್ಷಿದಾರರು ತಿಳಿಸಿದ್ದಾರೆ.

2023ರ ಡಿಸೆಂಬರ್‌ ತಿಂಗಳಲ್ಲಿ ಎಎಸ್‌ಐ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ತಾನು ಕೈಗೊಂಡ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಪ್ರಾಚೀನ ಕಾಲದ ಹಿಂದೂ ದೇವಾಲಯದ ಮೇಲೆ ಮಸೀದಿಯನ್ನು ನಿರ್ಮಾಣ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಲು ಸಮೀಕ್ಷೆ ಕೈಗೊಳ್ಳುವಂತೆ ನ್ಯಾಯಾಲಯವು ಎಎಸ್‌ಐ ಆದೇಶಿಸಿತ್ತು.

ಭಾರತೀಯ ಪುರಾತತ್ವ ಇಲಾಖೆ ಸಿದ್ಧಪಡಿಸಿರುವ ವರದಿ ಒದಗಿಸುವಂತೆ ಹಿಂದೂ ಮತ್ತು ಮುಸ್ಲಿಮ್ ಕಕ್ಷಿದಾರರು ಅರ್ಜಿ ಸಲ್ಲಿಸಬೇಕು. ಬಳಿಕ ವರದಿಯನ್ನು ನೀಡಲಾಗುವುದು ಎಂದು ನ್ಯಾಯಾಲಯವು ಹೇಳಿದೆ ಎಂದು ಈ ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಅಂಜಮನ್ ಇಂತೇಜಾಮಿಯಾ ಮಸೀದಿ ಕಮಿಟಿಯನ್ನು ಪ್ರತಿನಿಧಿಸುವ ವಕೀಲ ಮುಮ್ತಾಜ್ ಅಹ್ಮದ್ ಅವರು ತಿಳಿಸಿದ್ದಾರೆ.

ನ್ಯಾಯಾಲಯದಲ್ಲಿ ಹಿಂದೂ ಅರ್ಜಿದಾರರನ್ನು ಪ್ರತಿನಿಧಿಸುವ ವಕೀಲ ವಿಷ್ಣು ಶಂಕರ್ ಜೈನ್, ಬುಧವಾರ ವಿಚಾರಣೆ ನಡೆದಿದೆ. ಪ್ರಕರಣದಲ್ಲಿ ಕಕ್ಷಿದಾರರಿಗೆ ದೃಢೀಕರಿಸಿದ ಹಾರ್ಡ್ ಕಾಪಿ ಲಭ್ಯವಾಗುವಂತೆ ಕಕ್ಷಿದಾರರ ನಡುವೆ ತಿಳುವಳಿಕೆಯನ್ನು ಪಡೆಯಲಾಯಿತು. ಈ ಕುರಿತು ನ್ಯಾಯಾಲಯ ಶೀಘ್ರದಲ್ಲೇ ಆದೇಶ ಹೊರಡಿಸಲಿದೆ. ಕೋರ್ಟ್ ತನ್ನ ಆದೇಶದಲ್ಲಿ ಏನು ಹೇಳುತ್ತದೆ ಎಂಬುದನ್ನು ಕಾದು ನೋಡಬೇಕು. ಕಕ್ಷಿದಾರರಿಗೆ ಪ್ರಮಾಣೀಕೃತ ಪ್ರತಿಗಳನ್ನು ನೀಡಲು ನ್ಯಾಯಾಲಯವು ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

ಸೈಬರ್ ಅಪರಾಧಗಳ ಬೆದರಿಕೆಯಿಂದಾಗಿ ಸಾಫ್ಟ್ ಕಾಪಿಗಳನ್ನು ನೀಡಲಾಗುವುದಿಲ್ಲ ಎಂದು ಎಎಸ್ಐ ಹೇಳಿದೆ. ಹಾಗಾಗಿ, ನ್ಯಾಯಾಲಯದ ಆದೇಶದ ಬಳಿಕ ನಾವು ವರದಿಯ ಪ್ರತಿಗಾಗಿ ಅರ್ಜಿ ಸಲ್ಲಿಸುತ್ತೇವೆ ಎಂದು ವಕೀಲ ವಿಷ್ಣು ಶಂಕರ್ ಜೈನ್ ಅವರು ಹೇಳಿದರು.

2022ರ ಮೇ 16ರಂದು ಕಾಶಿ ವಿಶ್ವನಾಥ ದೇವಸ್ಥಾನ-ಜ್ಞಾನವಾಪಿ ಮಸೀದಿಯ ವೀಡಿಯೊಗ್ರಾಫಿಕ್ ಸಮೀಕ್ಷೆಯನ್ನು ಸ್ಥಳೀಯ ನ್ಯಾಯಾಲಯ ನೇಮಿಸಿದ ಆಯೋಗವು ತನ್ನ ಪೂರ್ಣಗೊಳಿಸಿದೆ. ಪೂರ್ಣಗೊಳಿಸಿದೆ. ಮಸೀದಿಯು ಹಿಂದೂ ದೇವಾಲಯದಲ್ಲಿ ನಿರ್ಮಿಸಲಾಗಿದೆ. ಶಿವಲಿಂಗ ಎಂದು ಹೇಳಲಾಗುವ ರಚನೆಯ ಮಸೀದಿಯ ಒಳಗೆ ಇದೆ ಎಂದು ಹಿಂದೂಗಳು ವಾದಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: ಜ್ಞಾನವಾಪಿ ಮಸೀದಿ ಜಾಗದಲ್ಲಿ ಮಂದಿರ: ವಿಚಾರಣೆಗೆ ಅಲಹಾಬಾದ್‌ ಹೈಕೋರ್ಟ್‌ ಅಸ್ತು, ಮುಸ್ಲಿಮರ 5 ಅರ್ಜಿ ವಜಾ

Exit mobile version