Site icon Vistara News

Viral Video | ಚಲಿಸುವ ಜೀಪ್‌ ಮೇಲೆ ʼಫೂಲ್‌ ಔರ್‌ ಕಾಂಟೆʼ ರೀತಿ ರೌಡಿ ಸ್ಟಂಟ್‌, ಪೊಲೀಸರಿಗೇ ಚಾಲೆಂಜ್‌, ಇಲ್ಲಿದೆ ವಿಡಿಯೊ

Viral Video Bhopal

ಭೋಪಾಲ್‌: ಹಿಂದಿಯ ‘ಫೂಲ್‌ ಔರ್‌ ಕಾಂಟೆ’ (Phool Aur Kante) ಸಿನಿಮಾದಲ್ಲಿ ಅಜಯ್‌ ದೇವಗನ್‌ ಅವರು ಚಲಿಸುವ ಎರಡು ಬೈಕ್‌ಗಳ ಮೇಲೆ ಕಾಲಿಟ್ಟು ಸ್ಟಂಟ್‌ ಮಾಡಿದ ದೃಶ್ಯ ಎಲ್ಲರಿಗೂ ನೆನಪಿರುತ್ತದೆ. ಇದೇ ಸಿನಿಮಾದ ಶೈಲಿಯಲ್ಲಿ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ರೌಡಿಯೊಬ್ಬ ಚಲಿಸುತ್ತಿರುವ ಜೀಪ್ ಮೇಲೆ ನಿಂತು, ಮತ್ತೊಂದು ಕಾರಿನ ಮೇಲೆ ಕಾಲಿಟ್ಟು ಸ್ಟಂಟ್‌ ಮಾಡಿದ ವಿಡಿಯೊ (Vira Video) ಈಗ ವೈರಲ್‌ ಆಗಿದೆ.

ಜುಬೈರ್‌ ಮೌಲಾನಾ ಎಂಬಾತನ ವಿರುದ್ಧ 65 ಪ್ರಕರಣಗಳು ದಾಖಲಾಗಿವೆ. ಈತ ರೌಡಿಯಾಗಿದ್ದು, ಕಳೆದ ಶುಕ್ರವಾರ (ಡಿ.9) ರಂದು ಭೋಪಾಲದ ಗಾಂಧಿನಗರದಲ್ಲಿ ಸನ್ನಿ ಮಲಿಕ್‌ ಎಂಬ ಮತ್ತೊಬ್ಬ ರೌಡಿಯ ಬರ್ತ್‌ಡೇ ಆಚರಿಸಿ ಜೀಪ್‌ನಲ್ಲಿ ಬರುವಾಗ ಸ್ಟಂಟ್‌ ಮಾಡಿದ್ದಾನೆ. ಇದಕ್ಕೂ ಮೊದಲು ಕೂಡ ಜುಬೈರ್‌ ಮೌಲಾನಾ ಸ್ಟಂಟ್‌ ಮಾಡಿದ್ದಕ್ಕೇ ಕೇಸ್‌ ದಾಖಲಾಗಿತ್ತು. ಈಗ ಮತ್ತೆ ಸ್ಟಂಟ್‌ ಮಾಡಿದ್ದಾನೆ.

ಇಬ್ಬರು ಜೀಪಿನ ಬಾನೆಟ್‌ ಮೇಲೆ ನಿಂತಿದ್ದಾರೆ. ಮತ್ತೊಬ್ಬ ಇನ್ನೊಂದು ಕಾರಿನ ಮೇಲೆ ಕಾಲಿಟ್ಟು ಸ್ಟಂಟ್‌ ಮಾಡಿದ್ದಾನೆ. ಅಲ್ಲದೆ, ಸ್ಟಂಟ್‌ ಮಾಡುತ್ತಲೇ ಪೊಲೀಸರಿಗೆ ಸವಾಲು ಹಾಕಿದ್ದು ದೃಶ್ಯದಲ್ಲಿ ಸೆರೆಯಾಗಿದೆ. ವಿಡಿಯೊ ಜಾಲತಾಣದಲ್ಲಿ ವೈರಲ್‌ ಆಗುತ್ತಲೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ | Shahrukh Khan | ಮೆಕ್ಕಾ ಬಳಿಕ ವೈಷ್ಣೋದೇವಿ ದೇವಸ್ಥಾನಕ್ಕೆ ಭೇಟಿ ಕೊಟ್ಟ ಶಾರುಖ್‌ ಖಾನ್‌: ವಿಡಿಯೊ ವೈರಲ್‌!

Exit mobile version