Site icon Vistara News

Bhupesh Baghel: ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಸಭೆಯಲ್ಲಿ ಕ್ಯಾಂಡಿ ಕ್ರಶ್‌ ಆಡಿದ ಭೂಪೇಶ್‌ ಬಘೇಲ್‌!

Bhupesh Baghel

Crossed Decent Level: Bhupesh Baghel Taunts To BJP On Viral Candy Crush Photo

ರಾಯ್‌ಪುರ: ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ (Bhupesh Baghel) ಅವರು ಸಭೆಯೊಂದರಲ್ಲಿ ಕ್ಯಾಂಡಿ ಕ್ರಶ್‌ (Candy Crush) ಗೇಮ್‌ ಆಡಿದ ಫೋಟೊವನ್ನು ಬಿಜೆಪಿ ವೈರಲ್‌ ಮಾಡಿದ ಬೆನ್ನಲ್ಲೇ ಮುಖ್ಯಮಂತ್ರಿಯು ಪ್ರತಿಕ್ರಿಯಿಸಿದ್ದಾರೆ. “ಕ್ಯಾಂಡಿ ಕ್ರಶ್ ನನ್ನ ಫೇವರಿಟ್‌ ಗೇಮ್.‌ ನಾನು ಕ್ಯಾಂಡಿ ಕ್ರಶ್ ಗೇಮ್‌ನಲ್ಲಿ ಹಲವು ಉನ್ನತ ಹಂತಗಳನ್ನು ದಾಟಿದ್ದೇನೆ” ಎಂದು ಟ್ವೀಟ್‌ ಮಾಡುವ ಮೂಲಕ ಬಿಜೆಪಿಗೆ ಟಾಂಗ್‌ ಕೊಟ್ಟಿದ್ದಾರೆ.

“ನಾನು ಯಾವಾಗಲೂ ಕ್ಯಾಂಡಿ ಕ್ರಶ್‌ ಆಡುವುದನ್ನು ಬಯಸುತ್ತೇನೆ. ನಾನು ಇತ್ತೀಚೆಗೆ ಜಟಕಾ ಓಡಿಸಿದಾಗ ಬಿಜೆಪಿಯವರು ಅಸಮಾಧಾನ ವ್ಯಕ್ತಪಡಿಸಿದ್ದರು. ನಾನೇಕೆ ಗಿಲ್ಲಿ ದಾಂಡು ಆಡುತ್ತೇನೆ? ಛಥ್ತೀಸ್‌ಗಢದಲ್ಲಿ ಒಲಿಂಪಿಕ್ಸ್‌ ಏಕೆ ಆಯೋಜನೆ ಮಾಡಲಾಗುತ್ತಿದೆ ಎಂಬುದು ಸೇರಿ ಬಿಜೆಪಿಯವರು ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರಿಗೆ ನನ್ನ ಅಸ್ತಿತ್ವವೇ ಮುಳುವಾಗಿದೆ. ಆದರೆ, ಯಾರು ಅಧಿಕಾರದಲ್ಲಿ ಉಳಿಯಲಿದ್ದಾರೆ, ಯಾರು ಉಳಿಯುವುದಿಲ್ಲ ಎಂಬುದನ್ನು ರಾಜ್ಯದ ಜನ ತೀರ್ಮಾನಿಸುತ್ತಾರೆ” ಎಂದು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಅಮಿತ್‌ ಮಾಳವೀಯ ಟೀಕೆ ಏನಾಗಿತ್ತು?

ಛತ್ತೀಸ್‌ಗಢ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ಆಯ್ಕೆ ಸಭೆಯಲ್ಲಿಯೇ ಭೂಪೇಶ್‌ ಬಘೇಲ್‌ ಅವರು ಕ್ಯಾಂಡಿ ಕ್ರಶ್‌ ಆಡಿದ ಫೋಟೊವನ್ನು ಬಿಜೆಪಿಯ ಅಮಿತ್‌ ಮಾಳವೀಯ ಹಂಚಿಕೊಂಡಿದ್ದರು. “ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರು ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದಾರೆ. ಏನು ಮಾಡಿದರೂ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಅವರಿಗೆ ಮನವರಿಕೆ ಆಗಿದೆ. ಹಾಗಾಗಿ, ಅಭ್ಯರ್ಥಿಗಳ ಆಯ್ಕೆ ಸಭೆಯಲ್ಲಿ ಕ್ಯಾಂಡಿ ಕ್ರಶ್‌ ಆಡುವುದೇ ಒಳಿತು ಎಂಬುದಾಗಿ ಅವರು ಭಾವಿಸಿದ್ದಾರೆ” ಎಂದು ಅಮಿತ್‌ ಮಾಳವೀಯ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು.

ಇದನ್ನೂ ಓದಿ: Viral Video | ರಾಜ್ಯದ ಒಳಿತಿಗಾಗಿ ಚಾಟಿ ಏಟು ಪಡೆದ ಛತ್ತೀಸ್​ಗಢ ಮುಖ್ಯಮಂತ್ರಿ ಭೂಪೇಶ್​ ಬಾಘೆಲ್​

ಕಾಂಗ್ರೆಸ್‌ ಆಡಳಿತದ ಛತ್ತೀಸ್‌ಗಢದಲ್ಲಿ ನವೆಂಬರ್‌ 7 ಹಾಗೂ ನವೆಂಬರ್‌ 17ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಭೂಪೇಶ್‌ ಬಘೇಲ್‌ ಅವರ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇದ್ದರೂ ಮುಖ್ಯಮಂತ್ರಿ ಆಡಳಿತದ ವಿರುದ್ಧ ಜನಕ್ಕೆ ಸಮಾಧಾನವಿದೆ ಎಂದು ತಿಳಿದುಬಂದಿದೆ. ಡಿಸೆಂಬರ್‌ 3ರಂದು ಛತ್ತೀಸ್‌ಗಢ ಸೇರಿ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.

Exit mobile version