ನವದೆಹಲಿ: ಕೇಂದ್ರ ಸರ್ಕಾರದ ಪರೀಕ್ಷೆಗಳು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರವೇ ಇರುತ್ತವೆ. ಆದರೆ, ಸರ್ಕಾರದ ಈ ನಡೆ ವಿರುದ್ಧ ದಕ್ಷಿಣ ಭಾರತದ ರಾಜ್ಯಗಳು ಆಕ್ಷೇಪ ಎತ್ತುತ್ತಲೇ ಇರುತ್ತವೆ. ಆದರೂ ಪರಿಸ್ಥಿತಿ ಸುಧಾರಿಸಿಲ್ಲ. ಈಗ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ (tamil nadu cm m k stalin) ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರಿಗೆ ಪತ್ರ ಬರೆದು, ಕಂಪ್ಯೂಟರ್ ಆಧಾರಿತ ಸಿಆರ್‌ಪಿಎಫ್ ನೇಮಕಾತಿ ಪರೀಕ್ಷೆಯಲ್ಲಿ ತಮಿಳು ಭಾಷೆಯ ಆಯ್ಕೆಯನ್ನು ನೀಡಿಲ್ಲ. ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರವೇ ಪರೀಕ್ಷೆ ನಡೆಸುತ್ತಿರುವುದು ತಾರತಮ್ಯವಾಗಿದೆ ಎಂದು ಆರೋಪಿಸಿದ್ದಾರೆ. ಕೇಂದ್ರೀಯ ಪರೀಕ್ಷೆಗಳನ್ನು ಕನ್ನಡದಲ್ಲಿ ನಡಿಸಬೇಕೆಂಬ ಕೂಗು ಆಗಾಗ ಕರ್ನಾಟಕದಲ್ಲೂ ಕೇಳಿ ಬರುತ್ತದೆ(CRPF Recruitment Test). ಸಿಆರ್‌ಪಿಎಫ್ ಪರೀಕ್ಷೆಯನ್ನು ಕನ್ನಡದಲ್ಲೂ ಬರೆಯಲು ಅವಕಾಶವಿಲ್ಲ.
ಕೇಂದ್ರ ಸರ್ಕಾರದ ಈ ನಿರ್ಧಾರವು ಆಕಾಂಕ್ಷಿಗಳು ಪರೀಕ್ಷೆಯನ್ನು ತೆಗೆದುಕೊಳ್ಳುವುದನ್ನು ತಡೆಯುತ್ತದೆ. ಅಲ್ಲದೇ, ಕೇವಲ ಹಿಂದಿ ಮತ್ತು ಇಂಗ್ಲಿಷ್ ಮಾತ್ರವೇ ಎಂದು ಹೇಳಿರುವ ಅಧಿಸೂಚನೆಯು ಅವರ ಸಾಂವಿಧಾನಿಕ ಹಕ್ಕಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ನಲ್ಲಿ ಖಾಲಿ ಇರುವ 9,212 ಹುದ್ದೆಗಳಲ್ಲಿ 579 ತಮಿಳುನಾಡಿನಿಂದ ಭರ್ತಿ ಮಾಡಬೇಕಾಗಿತ್ತು ಮತ್ತು ಅದಕ್ಕಾಗಿ ಪರೀಕ್ಷೆಯು 12 ಕೇಂದ್ರಗಳಲ್ಲಿ ನಡೆಯಲು ನಿರ್ಧರಿಸಲಾಗಿದೆ ಎಂದು ರಾಜ್ಯ ಸರ್ಕಾರವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸಿಆರ್‌ಪಿಎಫ್ ತಮಿಳುನಾಡಿನಲ್ಲಿ 9,212 ಖಾಲಿ ಹುದ್ದೆಗಳಲ್ಲಿ 579 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಿಸಿದೆ. ಆದರೆ ತಮಿಳುನಾಡಿನಿಂದ ಈ ಪರೀಕ್ಷೆಗೆ ಅರ್ಜಿ ಸಲ್ಲಿಸಿದವರು ಈ ಪರೀಕ್ಷೆಯನ್ನು ತಮ್ಮ ಮಾತೃಭಾಷೆಯಲ್ಲಿ ಬರೆಯಲು ಅವಕಾಶ ನೀಡಿಲ್ಲ. 100 ಅಂಕಗಳ ಪೈಕಿ ಮೂಲಭೂತ ಹಿಂದಿ ತಿಳಿವಳಿಕೆಗಾಗಿ ಒಟ್ಟು 25 ಅಂಕಗಳನ್ನು ನಿಗದಿಪಡಿಸಲಾಗಿದೆ. ಈ ನಿರ್ಬಂಧವು ಇದು ಹಿಂದಿ ಮಾತನಾಡುವವರಿಗೆ ಮಾತ್ರ ಪ್ರಯೋಜನವನ್ನು ನೀಡುತ್ತದೆ. ಇದು ಸಂಪೂರ್ಣವಾಗಿ ತಮಿಳುನಾಡು ಅರ್ಜಿದಾರರ ಅಭಿಮಾನಕ್ಕೆ ವಿರುದ್ಧವಾಗಿದೆ. ಇದು ತಾರತಮ್ಯ ವಾಗಿದೆ ಎಂದು ಸ್ಟಾಲಿನ್ ಅವರು ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದಾರೆ.
ತಮಿಳುನಾಡು ಹುದ್ದೆಗಳಿಗಾಗಿ ಅರ್ಜ ಹಾಕುವವರ ಹಿತಾಸಕ್ತಿಯ ವಿರುದ್ಧವಾಗಿದೆ ಈ ನೋಟಿಫಿಕೇಷನ್. ಇದು ಕೇವಲ ಏಕೀಕೃತ ಮಾತ್ರವಲ್ಲದೇ ತಮಿಳುನಾಡು ಜನರ ವಿರುದ್ದ ಮಾಡುತ್ತಿರುವ ತಾರತಮ್ಯವೂ ಹೌದು ಎಂದು ಶಾ ಅವರಿಗೆ ಸ್ಟಾಲಿನ್ ಹೇಳಿದ್ದಾರೆ.