Site icon Vistara News

Cyber crime: ದೇಶಾದ್ಯಂತ 28,000ಕ್ಕೂ ಹೆಚ್ಚು ಮೊಬೈಲ್‌ ಫೋನ್‌ಗಳು ಬ್ಲಾಕ್‌!

cyber crime

ನವದೆಹಲಿ: ದಿನೇ ದಿನೇ ಸೈಬರ್‌ ಕ್ರೈಂ(Cyber crime)ಗಳ ಸಂಖ್ಯೆ ಹೆಚ್ಚಾಗುತ್ತಲೇ ಇವೆ. ಇದರ ಮೇಲೆ ಪೊಲೀಸರು ಎಷ್ಟೇ ನಿಗಾ ಇಟ್ಟರೂ ಈ ಜಾಲಕ್ಕೆ ಜನ ಆಗಾಗ ಬಲಿಯಾಗುತ್ತಲೇ ಇದ್ದಾರೆ. ಅಮಾನಯಕ ಜನರಿಗೆ ಬಲೆ ಬೀಸುವ ಈ ಸೈಬರ್ ಕ್ರೈಂ ಅಪರಾಧಿಗಳಿಗೆ ಬಿಸಿ ಮುಟ್ಟಿಸಲು ಕೇಂದ್ರ ಸರ್ಕಾರ(Union Government) ಮುಂದಾಗಿದೆ. ಸೈಬರ್‌ ಕ್ರೈಂನಲ್ಲಿ ಭಾಗಿಯಾಗಿರುವ ಹಿನ್ನೆಲೆ ದೇಶ್ಯಾದ್ಯಂತ 28,000ಕ್ಕೂ ಹೆಚ್ಚು ಮೊಬೈಲ್‌ ಫೋನ್‌ಗಳನ್ನು ಬ್ಲಾಕ್‌ ಮಾಡುವಂತೆ ಟೆಲಿಕಮ್ಯೂನಿಕೇಶನ್ಸ್‌ ಇಲಾಖೆ (The Department of Telecommunications) ಎಲ್ಲಾ ಟೆಲಿಕಾಂ ಆಪರೇಟರ್‌ಗಳಿಗೆ ಸೂಚನೆ ನೀಡಿದೆ.

ಟೆಲಿಕಮ್ಯೂನಿಕೇಶನ್ಸ್‌ ಇಲಾಖೆ, ಕೇಂದ್ರ ಗೃಹ ಸಚಿವಾಲಯ ಮತ್ತು ರಾಜ್ಯ ಪೊಲೀಸರು ಜಂಟಿಯಾಗಿ ಸೈಬರ್‌ ಕ್ರೈಂ ವಿರುದ್ಧ ಸಮರ ಸಾರಿದ್ದು, ಟೆಲಿಕಾಂ ಸೌಕರ್ಯಗಳನ್ನು ಸೈಬರ್‌ ಕ್ರೈಂ ಮತ್ತು ಹಣ ವಂಚನೆ ಬಳಸುವುದನ್ನು ತಡೆಯಲು ಮುಂದಾಗಿದೆ. ಡಿಜಿಟಲ್‌ ಅಪಾಯದಿಂದ ಜನರನ್ನು ಕಾಪಾಡುವುದೇ ಇದರ ಮೂಲ ಗುರಿಯಾಗಿದೆ ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಕೇಂದ್ರ ಗೃಹ ಸಚಿವಾಲಯ ಮತ್ತು ರಾಜ್ಯ ಪೊಲೀಸರ ನೀಡಿರುವ ಮಾಹಿತಿ ಪ್ರಕಾರ, ದೇಶಾದ್ಯಂತ 28,200 ಮೊಬೈಲ್‌ಗಳನ್ನು ಸೈಬರ್‌ ಕ್ರೈಂಗಾಗಿ ಬಳಸಿಕೊಳ್ಳಲಾಗಿದೆ. ಈ ಮೊಬೈಲ್‌ಗಳಲ್ಲಿ 20 ಲಕ್ಷಕ್ಕೂ ಅಧಿಕ ನಂಬರ್‌ಗಳನ್ನು ಬಳಸಲಾಗಿದೆ. ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿರುವ ಟೆಲಿಕಮ್ಯೂನಿಕೇಶನ್ಸ್‌ ಇಲಾಖೆ, 28,200 ಮೊಬೈಲ್‌ ಫೋನ್‌ಗಳನ್ನು ತಕ್ಷಣವೇ ಬ್ಲಾಕ್‌ ಮಾಡಿ ಅವುಗಳ ಜೊತೆ ಸಂಪರ್ಕದಲ್ಲಿದ್ದ 20 ಲಕ್ಷ ನಂಬರ್‌ಗಳನ್ನು ಪರಿಶೀಲನೆ ನಡೆಸುವಂತೆ ಟೆಲಿಕಾಂ ಆಪರೇಟರ್‌ಗಳಿಗೆ ಖಡಕ್‌ ಸೂಚನೆ ನೀಡಿದೆ.

ಇದನ್ನೂ ಓದಿ: Murder Case: ಕೊಡಗಿನಲ್ಲಿ ಬಾಲಕಿಯ ರುಂಡ ಕತ್ತರಿಸಿದ್ದ ಆರೋಪಿಯ ಬಂಧನ

ಕಳೆದ ವರ್ಷ ಆಗಸ್ಟ್‌ನಲ್ಲಿ, ವಂಚನೆಗಾಗಿ ಸಿಮ್ ಕಾರ್ಡ್‌ಗಳನ್ನು ಬಳಸುವ ಕಿಡಿಗೇಡಿಗಳ ಜೊತೆ ಸಂಪರ್ಕ ಇರುವ ಸಿಮ್‌ ವಿತರಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಟೆಲಿಕಮ್ಯೂನಿಕೇಶನ್‌ ಇಲಾಖೆ ಮುಂದಾಗಿತ್ತು. ಆ ನಿಟ್ಟಿನಲ್ಲಿ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವ ಡೀಲರ್‌ಗಳು ಟೆಲಿಕಾಂ ಆಪರೇಟರ್‌ಗಳೊಂದಿಗೆ ನೋಂದಾಯಿಸಿಕೊಳ್ಳಬೇಕೆಂದು ಇಲಾಖೆ ಕಡ್ಡಾಯಗೊಳಿಸಿತ್ತು. ಇನ್ನು ಸಿಮ್‌ ಪಡೆಯುವ ವೇಳೆ ಇ-ಕೆವೈಸಿಯನ್ನೂ ಕಡ್ಡಾಯಗೊಳಿಸಿತ್ತು. ಒಂದು ವೇಳೆ ಯಾವುದೇ ಕಾನೂನುಬಾಹಿರ ಚಟುವಟಿಕೆಯ ಸಂದರ್ಭದಲ್ಲಿ, ಡೀಲರ್‌ಶಿಪ್ ಅನ್ನು ರದ್ದುಗೊಳಿಸಲಾಗುತ್ತದೆ. ಮತ್ತು ಮೂರು ವರ್ಷಗಳವರೆಗೆ ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ. ಒಂದು ವರ್ಷದೊಳಗೆ ಪರಿಶೀಲನೆ ಪ್ರಕ್ರಿಯೆ ನಡೆಸಬೇಕು ಎಂದು ಸಚಿವಾಲಯ ಈ ಹಿಂದೆ ಹೇಳಿತ್ತು

Exit mobile version