Site icon Vistara News

Cyclone Biparjoy: ಗುಜರಾತ್‌ನಲ್ಲಿ ಬಿಪರ್‌ಜಾಯ್ ನರ್ತನ, ಕರಾವಳಿಯಲ್ಲಿ ಪೊಲೀಸ್ ಭದ್ರತೆ ಹೆಚ್ಚಳ

Biparjoy

ನವದೆಹಲಿ: ಭಾರೀ ಶಕ್ತಿಶಾಲಿ ಚಂಡಮಾರುತ ಸೈಕ್ಲೋನ್ ಬಿಪರ್‌ಜಾಯ್ (Cyclone Biparjoy) ಮಂಗಳವಾರ ಕೊಂಚ ತೀವ್ರತೆ ತಗ್ಗಿದೆ. ಹಾಗಿದ್ದೂ, ಗುಜರಾತ್‌ನಲ್ಲಿ (Gujarat) ಅದರ ಪರಿಣಾಮ ಭೀಕರವಾಗಿದೆ. ಸದ್ಯ ಗಂಟೆಗೆ 5 ಕಿ.ಮೀ. ವೇಗದಲ್ಲಿ ಈ ಚಂಡು ಮಾರುತ ಬೀಸುತ್ತಿದೆ ಎಂದು ಕೇಂದ್ರ ಹವಾಮಾನ ಇಲಾಖೆ (IMD) ತಿಳಿಸಿದೆ. ಈ ಚಂಡಮಾರತವು ಗಂಟೆಗೆ ಐದು ಕಿ.ಮೀ. ವೇಗದಲ್ಲಿ ಉತ್ತರಾಭಿಮುಖವಾಗಿ ಚಲಿಸುತ್ತಿದೆ. ಗುಜರಾತ್‌ನ ಪೋರಬಂದರ್‌ನಿಂದ ಸುಮಾರು 290 ಕಿ.ಮೀ ನೈಋತ್ಯಕ್ಕೆ ಕೇಂದ್ರಿಕೃತವಾಗಿದೆ. ಗುರುವಾರದ ಹೊತ್ತಿಗೆ ಈ ಚಂಡಮಾರುತವು ಗುಜರಾತ್‌ನ ಸೌರಾಷ್ಟ್ರ ಮತ್ತು ಕಚ್‌ ಪ್ರದೇಶಗಳನ್ನು ಮತ್ತು ಪಾಕಿಸ್ತಾನದ ಕರಾವಳಿಯನ್ನು ದಾಟುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗುತ್ತಿದೆ. ಈ ಮಧ್ಯೆ ಜನರ ಸುರಕ್ಷತೆಯ ದೃಷ್ಟಿಯಿಂದ ಕರಾಳವಳಿ, ಬೀಚುಗಳಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.

ವಿಶೇಷ ಎಂದರೆ, 1982ರಿಂದ ಯಾವುದೇ ಅರೇಬಿಯನ್ ಸಮುದ್ರದ ಮೂಲಕ ಸಾಗುವ ಚಂಡಮಾರುತವು ಬಿಪರ್‌ಜಾಯ್‌ನಷ್ಟು (126 ಗಂಟೆಗಳು) ದೀರ್ಘ ಅವಧಿಯವರೆಗೆ ತನ್ನ ತೀವ್ರತೆಯನ್ನು ಉಳಿಸಿಕೊಂಡಿಲ್ಲ. ಅದರ ಈಗಿನ ಪ್ರಭಾವವನ್ನು ನೋಡಿದರೆ, ಇನ್ನೂ ಹೆಚ್ಚಿನ ಸಮದಯವರೆಗೂ ಚಂಡಮಾರತವು ತನ್ನ ಪ್ರತಾಪವನ್ನು ತೋರಿಸುವ ಸಾಧ್ಯತೆಗಳಿವೆ ಎಂದು ತಜ್ಞರು ಲೆಕ್ಕ ಹಾಕುತ್ತಿದ್ದಾರೆ.

ಜೂನ್ 6 ಮತ್ತು 7 ರ ನಡುವೆ ಅದರ ವೇಗವು 55 kmphನಿಂದ 139 kmphವರೆಗೆ ಮತ್ತು ಜೂನ್ 9 ಮತ್ತು ಜೂನ್ 10 ರ ನಡುವೆ , ಸ್ವಲ್ಪ ಕಡಿಮೆಯಾದ ಅದರ ವೇಗವು 120 kmphನಿಂದ 195 kmphಗೆ ಬಿಪರ್‌ಜಾಯ್ ತೀವ್ರತೆಯ ಎರಡು ಹಂತಗಳಲ್ಲಿ ದಾಖಲಾಗಿದೆ ಜಂಟಿ ಟೈಫೂನ್ ಎಚ್ಚರಿಕೆ ಕೇಂದ್ರ(JTWC) ಮಾಹಿತಿ ನೀಡಿದೆ. ಜೂನ್ 6ರಿಂದ ಕ್ಷೀಣವಾಗಿದ್ದ ಬಿಪರ್ ಜಾಯ್ ಜೂನ್ 10ರ ಹೊತ್ತಿಗೆ ಭಾರೀ ವೇಗವನ್ನು ಪಡೆದುಕೊಂಡಿತು ಎಂದು ಹೇಳಬಹುದು.

ಈ ಸುದ್ದಿಯನ್ನೂ ಓದಿ: Rain News: ಬಿಪರ್‌ಜಾಯ್ ಸೈಕ್ಲೋನ್ ಎಫೆಕ್ಟ್; ಸಮುದ್ರ ಪಾಲಾದ ಮನೆಗಳು, ಇನ್ನೂ 5 ದಿನ ಭಾರಿ ಮಳೆ

ಚಂಡಮಾರುತ ಬೀಸುವ ಪ್ರದೇಶಗಳಲ್ಲಿ ಸಂಚರಿಸುವ ಸುಮಾರು 67 ರೈಲುಗಳನ್ನು ವೆಸ್ಟರ್ನ್ ರೈಲ್ವೆ ತಡೆ ಹಿಡಿದಿದೆ. ಈ ರೈಲುಗಳ ಸಂಚಾರ ರದ್ದಾಗಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ. ಅಲ್ಲದೇ ಮುಂಗಡ ಟಿಕೆಟ್ ಕಾಯ್ದಿರಿಸಿದರಗೆ ರಿಫಂಡ್ ಮಾಡಲಾಗುತ್ತಿದೆ.

ದೇಶದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Exit mobile version