Site icon Vistara News

Cyclone Mocha: ಬಾಂಗ್ಲಾದೇಶ-ಮ್ಯಾನ್ಮಾರ್​​ ಕರಾವಳಿಯಲ್ಲಿ ಮೋಚಾ ಅಬ್ಬರ; ಸಾವಿರಾರು ಜನರ ಸ್ಥಳಾಂತರ

Cyclone Mocha Affect on Bangladesh and Myanmar

#image_title

ಮೋಚಾ ಚಂಡಮಾರುತ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್​​ಗಳಲ್ಲಿ ಅಬ್ಬರಿಸುತ್ತಿದೆ. ಇಲ್ಲಿನ ಕರಾವಳಿ ತೀರಕ್ಕೆ ಮೋಚಾ (Cyclone Mocha) ಅಪ್ಪಳಿಸುತ್ತಿದೆ. ಕರಾವಳಿ ಪ್ರದೇಶದ ಜನರು ಬೇರೆಡೆ ಸ್ಥಳಾಂತರಗೊಂಡು, ಆಶ್ರಯ ಪಡೆಯಿರಿ ಎಂದು ಅಲ್ಲಿನ ಹವಾಮಾನ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಮೇ 6ರಿಂದಲೇ ಈ ಮೋಚಾ ಚಂಡಮಾರುತದ ಹಾವಳಿ ಶುರುವಾಗಿದ್ದು, ಮೇ 12ರಂದು 2.30 ಗಂಟೆ ಸುಮಾರಿಗೆ ಆಗ್ನೇಯ ದಿಕ್ಕಿನ ಮಧ್ಯ ಬಂಗಾಳ ಕೊಲ್ಲಿಯ ಮೇಲೆ, ಪೋರ್ಟ್‌ಬ್ಲೇರ್‌ನ ಪಶ್ಚಿಮ-ವಾಯುವ್ಯಕ್ಕೆ 520 ಕಿಮೀ ದೂರದಲ್ಲಿ ಕೇಂದ್ರೀಕೃತವಾಗಿತ್ತು.

ಇಂದು ಮುಂಜಾನೆ ಹೊತ್ತಿಗೆ ಚಂಡ ಮಾರುತ ಮ್ಯಾನ್ಮಾರ್​​ನ ಕರಾವಳಿ ತೀರದ ರಖಿನ್ ರಾಜ್ಯಕ್ಕೆ ಕಾಲಿಟ್ಟಿದೆ. ಭಾನುವಾರ ಮಧ್ಯಾಹ್ನದ ನಂತರ ಸಿಟ್ವೆ ನಗರದ ಬಳಿ ಭೂಕುಸಿತ ಉಂಟಾಗಬಹುದು. ಜನರು ಎಚ್ಚರಿಕೆಯಿಂದ ಇರಬೇಕು ಎಂದು ಅಲ್ಲಿನ ಹವಾಮಾನ ಇಲಾಖೆ ತಿಳಿಸಿದೆ. ಚಂಡಮಾರುತದ ಚಲನೆ ಮೊದಲೇ ಗೊತ್ತಾಗುವ ಕಾರಣ ಶುಕ್ರವಾರದಿಂದಲೂ ಜನರನ್ನು ಈ ಭಾಗದಿಂದ ಸ್ಥಳಾಂತರ ಮಾಡಲಾಗುತ್ತಿದೆ. ಇಲ್ಲಿಯವರೆಗೆ 30 ಸಾವಿರ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ: Cyclone Mocha: ಮೇ 12ರಂದು ತೀವ್ರಗೊಳ್ಳಲಿದೆ ಮೋಚಾ ಚಂಡಮಾರುತ, ಈ ಹೆಸರಿಗೆ ಕಾರಣವೇನು?

ಇನ್ನು ಬಾಂಗ್ಲಾದೇಶದಲ್ಲೂ ಕೂಡ ಕರಾವಳಿ ತೀರದಲ್ಲಿ ವಾತಾವರಣ ಹದಗೆಟ್ಟಿದೆ. ಚಂಡಮಾರುತದಿಂದ ತೀವ್ರ ಸಮಸ್ಯೆಯಾಗಬಹುದು ಎಂದು ಹಲವು ಮುನ್ನೆಚ್ಚರಿಕೆಗಳನ್ನು ವಹಿಸಲಾಗಿದೆ. ಒಣ ಆಹಾರಗಳನ್ನು ಸಂಗ್ರಹಿಸಿ ಇಡಲಾಗಿದೆ. ಹಲವು ಆ್ಯಂಬುಲೆನ್ಸ್​ಗಳು, ವೈದ್ಯಕೀಯ ತಂಡಗಳು ಸಿದ್ಧವಾಗಿವೆ. ಆಶ್ರಯ ಕೇಂದ್ರಗಳನ್ನು ರಚಿಸಿ ಇಡಲಾಗಿದೆ. Cox’s Bazar ಸಿಟಿಯಲ್ಲಿ ಹೈಅಲರ್ಟ್ ಇದೆ. ಒಟ್ಟು ಎಂಟು ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

Exit mobile version