Site icon Vistara News

Cyclone Remal: ರೆಮಲ್‌ ಚಂಡ ಮಾರುತದ ಅಬ್ಬರ ಶುರು; ಬಾಂಗ್ಲಾದೇಶ, ಪ.ಬಂಗಾಳ ಸೇರಿದಂತೆ ಹಲವಡೆ ಭಾರೀ ಮಳೆ, ಭೂಕುಸಿತ ಸಾಧ್ಯತೆ

Cyclone Remal

ಕೋಲ್ಕತ್ತಾ: ಇಂದು ಸಂಜೆ 5:30ರ ವೇಳೆಗೆ ರೆಮಲ್‌ ಚಂಡಮಾರುತ ಪಶ್ಚಿಮ ಬಂಗಾಳ(West Bengal) ಮತ್ತು ಬಾಂಗ್ಲಾದೇಶ(Bangladesh)ದ ಕರಾವಳಿಗೆ ಅಪ್ಪಳಿಸಲಿದೆ. ಈ ಬಗ್ಗೆ ಹವಾಮಾನ ಇಲಾಖೆ(IMD) ಮುನ್ಸೂಚನೆ ನೀಡಿದ್ದು, ಬಾಂಗ್ಲಾದೇಶದ ಖೇಪುಪಾರಾದಲ್ಲಿ 290 ಕಿ.ಮೀ ಮತ್ತು ಸಾಗರ್‌ ದ್ವೀಪದ 270 ಕಿ.ಮೀ ವ್ಯಾಪ್ತಿಯಲ್ಲಿ ರೆಮಲ್‌ ಚಂಡಮಾರುತ(Cyclone Remal) ಬೀಸಲಿದೆ. ಈ ಚಂಡಮಾರುತದಿಂದಾಗಿ ಗಂಟೆಗೆ 102 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಬಹುದು. ಪರಿಣಾಮವಾಗಿ ಭಾನುವಾರ(ಮೇ 26) ಮತ್ತು ಸೋಮವಾರ (ಮೇ 27)ರಂದು ಪಶ್ಚಿಮ ಬಂಗಾಳ ಮತ್ತು ಉತ್ತರ ಒಡಿಶಾ, ಮಿಜೋರಾಂ, ತ್ರಿಪುರಾ ಮತ್ತು ದಕ್ಷಿಣ ಮಣಿಪುರದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗು ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಹವಾಮಾನ ಇಲಾಖೆಯು ಕೆಪುಪಾರಾ (ಬಾಂಗ್ಲಾದೇಶ) ದಿಂದ ಸುಮಾರು 800 ಕಿಮೀ ದಕ್ಷಿಣ-ನೈಋತ್ಯ ಮತ್ತು ಕ್ಯಾನಿಂಗ್ (ಪಶ್ಚಿಮ ಬಂಗಾಳ) ನಿಂದ 810 ಕಿಮೀ ದೂರದಲ್ಲಿ ಅಂದರೆ ಮಧ್ಯ ಬಂಗಾಳ ಕೊಲ್ಲಿಯಲ್ಲಿ ಮೇ 24 ರಂದು ಪಶ್ಚಿಮ ಮಧ್ಯ ಮತ್ತು ಪಕ್ಕದ ದಕ್ಷಿಣ ಬಂಗಾಳ ಕೊಲ್ಲಿಯಲ್ಲಿ ರೆಮಲ್ ಚಂಡಮಾರುತವನ್ನು ಗುರುತಿಸಿದೆ.
ರೆಮಲ್ ಚಂಡಮಾರುತವು ಪ್ರಸ್ತುತ ಉತ್ತರಕ್ಕೆ ಚಲಿಸುತ್ತಿದೆ. ಈ ಚಂಡಮಾರುತವು ಮೇ 26 ರ ಮಧ್ಯರಾತ್ರಿಯ ಹೊತ್ತಿಗೆ ಸಾಗರ್ ದ್ವೀಪ ಮತ್ತು ಖೇಪುಪಾರ ನಡುವೆ ಬಾಂಗ್ಲಾದೇಶ ಮತ್ತು ಪಕ್ಕದ ಪಶ್ಚಿಮ ಬಂಗಾಳದ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ.

ರೆಮಲ್ ಚಂಡಮಾರುತದ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚನೆ ಎಚ್ಚರಿಕೆ ನೀಡಿದೆ. ಇದಲ್ಲದೇ ಈಗಾಗಲೇ ಸಮುದ್ರದಲ್ಲಿ ಬೀಡುಬಿಟ್ಟಿರುವ ಮೀನುಗಾರರು ಮೇ 26ರೊಳಗೆ ಕರಾವಳಿಗೆ ಮರಳುವಂತೆ ಸೂಚಿಸಲಾಗಿದೆ. ಭಾರತೀಯ ಕೋಸ್ಟ್ ಗಾರ್ಡ್ (ICG) ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದು, ಒಂಬತ್ತು ವಿಪತ್ತು ಪರಿಹಾರ ತಂಡಗಳನ್ನು ನಿಯೋಜಿಸಲಾಗಿದೆ. ಪೂರ್ವ ಕರಾವಳಿಯಲ್ಲಿ 10 ಹಡಗುಗಳು ಮತ್ತು 2 ವಿಮಾನಗಳನ್ನು ನಿಯೋಜಿಸಲಾಗಿದೆ, ಇದರಿಂದಾಗಿ ಅವರು ಸಮುದ್ರದಲ್ಲಿ ಇರುವ ಅಥವಾ ಹೋಗುವ ಮೀನುಗಾರರ ಮೇಲೆ ನಿಗಾ ಇಡಬಹುದು.

ರೆಮಲ್‌ ಚಂಡಮಾರುತದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಇಂದು ಮಧ್ಯಾಹ್ನದ ನಂತರ ಭಾರೀ ಮಳೆಯಾಗಲಿದ್ದು, ಭೂಕುಸಿತ ಸಂಭವಿಸುವ ಸಾಧ್ಯತೆ ದಟ್ಟವಾಗಿದೆ. ರಾಜ್ಯಾದ್ಯಂತ 20 ಸೆಂ.ಮೀ ಮಳೆಯಾಗು ಸಂಭವ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇದನ್ನೂ ಓದಿ: DP Manu: ಫೆಡರೇಷನ್ ಕಪ್‌ನಲ್ಲಿ ನೀರಜ್​ ಚೋಪ್ರಾಗೆ ಬೆವರಿಳಿಯುವಂತೆ ಮಾಡಿದ ಕನ್ನಡಿಗ ಮನು; ಇವರ ಹಿನ್ನೆಲೆ, ಸಾಧನೆ ಏನೇನು?

Exit mobile version