Site icon Vistara News

Cyclonic Storm : ಪಶ್ಚಿಮ ಬಂಗಾಳದಲ್ಲಿ ಚಂಡಮಾರುತ, 4 ಸಾವು, 100ಕ್ಕೂ ಅಧಿಕ ಮಂದಿಗೆ ಗಾಯ

Cyclone in West Bengal

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಭಾನುವಾರ ಮಧ್ಯಾಹ್ನ ಚಂಡಮಾರುತ ಅಪ್ಪಳಿಸಿದ ಪರಿಣಾಮ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಹಾಗೂ 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಜಿಲ್ಲಾ ಕೇಂದ್ರ ಮತ್ತು ನೆರೆಯ ಮೈನಗುರಿಯ ಕೆಲವು ಭಾಗಗಳಲ್ಲಿ ವೇಗದಲ್ಲಿ ಬೀಸಿದ ಗಾಳಿಯು ಹಾನಿಯನ್ನುಂಟು ಮಾಡಿದೆ. ಇದರಿಂದ ಹಲವಾರು ಮನೆಗಳಿಗೆ ಹಾನಿಯಾಗಿದೆ ಮತ್ತು ಮರಗಳು ಬುಡಮೇಲಾಗಿವೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪೀಡಿತ ಪ್ರದೇಶಕ್ಕೆ ತೆರಳಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

“ಇಂದು ಮಧ್ಯಾಹ್ನ ಮೈನಗುರಿ ಪ್ರದೇಶಗಳಲ್ಲಿ ಹಠಾತ್ ಭಾರಿ ಮಳೆ ಮತ್ತು ಬಿರುಗಾಳಿಯ ಬೀಸಿದ ಕಾರಣ ವಿಪತ್ತು ಸಂಭವಿಸಿದೆ. ಪ್ರಾಣಹಾನಿ ಉಂಟಾಗಿದ್ದು ಹಲವರಿಗೆ ಗಾಯಗಳಾಗಿವೆ. ಮನೆಗಳಿಗೆ ಹಾನಿಯಾಗುವ ಜತೆಗೆ ಮರಗಳು ಮತ್ತು ವಿದ್ಯುತ್ ಕಂಬಗಳು ಬುಡಮೇಲಾಗಿವೆ ಎಂದು ತಿಳಿದು ದುಃಖವಾಗಿದೆ. ಜಿಲ್ಲಾ ಮತ್ತು ಬ್ಲಾಕ್ ಆಡಳಿತ, ಪೊಲೀಸ್, ಡಿಎಂಜಿ ಮತ್ತು ಕ್ಯೂರ್​ಟಿ ತಂಡಗಳು ವಿಪತ್ತು ನಿರ್ವಹಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಮತ್ತು ಪರಿಹಾರವನ್ನು ಒದಗಿಸಿವೆ” ಎಂದು ಸಿಎಂ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

ಸಂತ್ರಸ್ತ ವ್ಯಕ್ತಿಗಳನ್ನು ಈಗ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಸಾವಿನ ಸಂದರ್ಭದಲ್ಲಿ ಜಿಲ್ಲಾಡಳಿತವು ಹತ್ತಿರದ ಸಂಬಂಧಿಕರಿಗೆ ಮತ್ತು ಗಾಯಗೊಂಡವರಿಗೆ ನಿಯಮಗಳ ಪ್ರಕಾರ ಮತ್ತು ಎಂಸಿಸಿಯನ್ನು ಅನುಸರಿಸಿ ಪರಿಹಾರವನ್ನು ನೀಡಲಿದೆ ಎಂದು ಸಿಎಂ ಹೇಳಿದರು.

ಇದನ್ನೂ ಓದಿ: Call Forwarding Service : ನಾಳೆಯಿಂದ ಯುಎಸ್ಎಸ್ಡಿ ಆಧಾರಿತ ಕಾಲ್ ಫಾರ್ವರ್ಡಿಂಗ್ ಸೇವೆ ಬಂದ್​

“ಸುಮಾರು 166 ರೋಗಿಗಳು ಗಾಯಗಳೊಂದಿಗೆ ಆಸ್ಪತ್ರೆಗೆ ಬಂದಿದ್ದಾರೆ. ಅವರಲ್ಲಿ 36 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದರಲ್ಲಿ 3 ಜನರು ಸಾವನ್ನಪ್ಪಿದ್ದಾರೆ. ಒಟ್ಟು ಸಾವಿನ ಸಂಖ್ಯೆ 4ಕ್ಕೇರಿದೆ ಎಂದು ಬಿಜೆಪಿ ಸಂಸದ ಜಯಂತ ಕುಮಾರ್ ರಾಯ್ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ಅವರು ಜಲ್ಪೈಗುರಿಯಲ್ಲಿ ಚಂಡಮಾರುತದ ಹಾನಿಯನ್ನು ಎದುರಿಸಲು ರಾಜಭವನದಲ್ಲಿ ತುರ್ತು ಸೆಲ್ ಅನ್ನು ಸ್ಥಾಪಿಸಿದ್ದಾರೆ.

“ರಾಜ್ಯಪಾಲರು ದೆಹಲಿಯ ವಿಪತ್ತು ನಿರ್ವಹಣಾ ಪ್ರಾಧಿಕಾರದೊಂದಿಗೆ ಸಂಪರ್ಕದಲ್ಲಿದ್ದಾರೆ. ಜಲ್ಪೈಗುರಿಗೆ ಅಗತ್ಯ ವಸ್ತುಗಳು ಹಾಗೂ ರಕ್ಷಣಾ ಪಡೆಯನ್ನು ಕಳುಹಿಸಲಾಘಿದೆ. ರಾಜ್ಯಪಾಲರು ಕೇಂದ್ರ ಗೃಹ ಸಚಿವಾಲಯದೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರು ನಾಳೆ ಜಲ್ಪೈಗುರಿಯಲ್ಲಿ ಕ್ಯಾಂಪ್ ಮಾಡಲಿದ್ದಾರೆ. ಸಂತ್ರಸ್ತರ ಮನೆಗಳಿಗೆ ಅವರು ಭೇಟಿ ನೀಡಲಿದ್ದಾರೆ” ಎಂದು ರಾಜಭವನದ ಮಾಹಿತಿ ತಿಳಿಸಿದೆ.

Exit mobile version