Site icon Vistara News

Cyrus Mistry Death | ಸೈರಸ್‌ ಮಿಸ್ತ್ರಿ ಮೃತಪಟ್ಟ ರಸ್ತೆಯಲ್ಲಿ ಇದೇ ವರ್ಷ ಅಪಘಾತಕ್ಕೆ 62 ಜನ ಬಲಿ!

Cyrus Mistry Car

ಮುಂಬೈ: ಟಾಟಾ ಸನ್ಸ್‌ ಮಾಜಿ ಚೇರ್ಮನ್‌ ಸೈರಸ್‌ ಮಿಸ್ತ್ರಿ (Cyrus Mistry Death) ಅವರು ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆ ಸಮೀಪ ಸೆ.೪ರಂದು ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದು, ಈಗ ಮಿಸ್ತ್ರಿ ಸಂಚರಿಸಿದ ರಸ್ತೆಯು ಮಾರಣಾಂತಿಕ ಎಂಬ ಕುರಿತು ಮಾಹಿತಿಯೊಂದು ಲಭ್ಯವಾಗಿದೆ. ಮಿಸ್ತ್ರಿ ಸಂಚರಿಸುತ್ತಿದ್ದ ರಸ್ತೆಯಲ್ಲಿ ಇದೇ ವರ್ಷ ಸಂಭವಿಸಿದ ಸರಣಿ ಅಪಘಾತಗಳಲ್ಲಿ ೬೨ ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮುಂಬೈ-ಅಹಮದಾಬಾದ್‌ ಹೆದ್ದಾರಿಯ ಘೋಡ್‌ಬಂಡರ್‌ನಿಂದ ಪಾಲ್ಘರ್‌ ಜಿಲ್ಲೆಯ ದಪ್ಚಾರಿಯ ೧೦೦ ಕಿ.ಮೀ ರಸ್ತೆಯಲ್ಲಿ ಇದೇ ವರ್ಷದ ಒಂಬತ್ತು ತಿಂಗಳಲ್ಲಿ ೨೬೨ ಅಪಘಾತಗಳು ಸಂಭವಿಸಿವೆ. ಅಪಘಾತದಲ್ಲಿ ೧೯೨ ಜನರಿಗೆ ಗಾಯಗಳಾಗಿದ್ದು, ೬೨ ಜನ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಾರ್ಗಸೂಚಿ ಫಲಕ (ಸೈನ್‌ ಬೋರ್ಡ್‌)ಗಳ ಅಳವಡಿಕೆಯ ಕೊರತೆ, ಅತಿಯಾದ ವೇಗ, ರಸ್ತೆಗಳ ನಿರ್ವಹಣೆಯಲ್ಲಿ ತೋರಿದ ನಿರ್ಲಕ್ಷ್ಯವೇ ಅಪಘಾತಗಳಿಗೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ. ಸೆಪ್ಟೆಂಬರ್‌ ೪ರಂದು ನಡೆದ ಭೀಕರ ಅಪಘಾತದಲ್ಲಿ ಸೈರಸ್‌ ಮಿಸ್ತ್ರಿ ಸೇರಿ ಇಬ್ಬರು ಮೃತಪಟ್ಟಿದ್ದರು.

ಇದನ್ನೂ ಓದಿ | Cyrus Mistry Death | ಸೈರಸ್‌ ಮಿಸ್ತ್ರಿ ಸೀಟ್‌ ಬೆಲ್ಟ್‌ ಧರಿಸಿರಲಿಲ್ಲ, ಕೇವಲ 9 ನಿಮಿಷದಲ್ಲಿ 20 ಕಿ.ಮೀ ತಲುಪಿದ್ದ ಕಾರು

Exit mobile version