Site icon Vistara News

ಅಂಬೇಡ್ಕರ್‌ ಮೂರ್ತಿ ಪ್ರತಿಷ್ಠಾಪನೆ ವೇಳೆ ಜಗಳ; ದಲಿತ ಬಾಲಕನ ಹತ್ಯೆಗೈದ ದುರುಳರು

Uttar Pradesh Police

Dalit teen killed, two injured in clash over installing BR Ambedkar's board in Uttar Pradesh

ಲಖನೌ: ಉತ್ತರ ಪ್ರದೇಶದ ರಾಮ್‌ಪುರ ಜಿಲ್ಲೆಯಲ್ಲಿ (Rampur District) ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ (Dr B R Ambedkar) ಅವರ ಮೂರ್ತಿ ಪ್ರತಿಷ್ಠಾಪನೆ, ಅವರ ಫೋಟೊ ಇರುವ ಬೋರ್ಡ್‌ ಅವಳಡಿಸುವ ವೇಳೆ ಎರಡು ಗುಂಪುಗಳ (Clash Between Two Groups) ಮಧ್ಯೆ ಗಲಾಟೆ ನಡೆದಿದ್ದು, 17 ವರ್ಷದ ದಲಿತ ಬಾಲಕನನ್ನು (Dalit Teen) ಹತ್ಯೆಗೈಯಲಾಗಿದೆ. ಇಬ್ಬರು ದಲಿತ ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ರಾಮ್‌ಪುರ ಜಿಲ್ಲೆ ಮಿಲಾಕ್‌ ಪ್ರದೇಶದ ಸಿಲಾಯಿ ಬಾರಗಾಂವ್‌ ಗ್ರಾಮದಲ್ಲಿ ಎರಡು ಗುಂಪುಗಳ ಮಧ್ಯೆ ಭಾರಿ ಸಂಘರ್ಷ ನಡೆದಿದೆ. ವಿವಾದಿತ ಪ್ರದೇಶದಲ್ಲಿ ದಲಿತ ಯುವಕರು ಅಂಬೇಡ್ಕರ್‌ ಅವರ ಫೋಟೊ ಇರುವ ಬೋರ್ಡ್‌ ಹಾಗೂ ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಲು ಮುಂದಾಗಿದ್ದರು. ಆ ಜಾಗವನ್ನು ಬಳಿಕ ಉದ್ಯಾನವನ್ನಾಗಿ ನಿರ್ಮಿಸಲಾಗುವುದು ಎಂಬುದಾಗಿ ದಲಿತ ಯುವಕರು ಘೋಷಿಸಿದ್ದರು. ಆದರೆ, ಮತ್ತೊಂದು ಗುಂಪು ಇದಕ್ಕೆ ಅಡ್ಡಿಯಾಗಿದೆ. ಆಗ ಎರಡೂ ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಅಂಬೇಡ್ಕರ್‌ ಫೋಟೊ ಇರುವ ಬೋರ್ಡ್‌ ಹಾಗೂ ಮೂರ್ತಿ ಪ್ರತಿಷ್ಠಾಪನೆ ಮಾಡಲು ಮುಂದಾದಾಗ ಮತ್ತೊಂದು ಗುಂಪು ಅದಕ್ಕೆ ಅಡ್ಡಿಯಾಗಿದೆ. ಈ ಜಾಗವು ಗ್ರಾಮ ಸಮಾಜಕ್ಕೆ ಸೇರಿದೆ. ನೀವು ಇಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಹಾಗಿಲ್ಲ ಎಂದು ಮತ್ತೊಂದು ಗುಂಪು ತಗಾದೆ ತೆಗೆದಿದೆ. ಇದೇ ವೇಳೆ ನಡೆದ ಗಲಾಟೆಯಲ್ಲಿ 17 ವರ್ಷದ ಬಾಲಕನು ಗಂಭೀರವಾಗಿ ಗಾಯಗೊಂಡಿದ್ದ. ಬಳಿಕ ಆತ ಮೃತಪಟ್ಟಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಮೊರಾದಾಬಾದ್‌ ಹಿರಿಯ ಪೊಲೀಸ್‌ ಅಧಿಕಾರಿ ಆಂಜನೇಯ ಕುಮಾರ್‌ ಸಿಂಗ್‌ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Narendra Modi : ದಲಿತರು, ಒಬಿಸಿಗಳೇ ಮೋದಿ ಗ್ಯಾರಂಟಿಯ ಫಲಾನುಭವಿಗಳು ಎಂದ ಪ್ರಧಾನಿ

“ಗಲಾಟೆ ವೇಳೆ ಮತ್ತೊಂದು ಗುಂಪು ನಮ್ಮ ಮಗನ ಮೇಲೆ ಗುಂಡಿನ ದಾಳಿ ನಡೆಸಿದೆ. ಸುಮೇಶ್‌ ಕುಮಾರ್‌ ಎಂಬಾತ 10ನೇ ತರಗತಿ ಓದುತ್ತಿದ್ದು, ವಾರ್ಷಿಕ ಪರೀಕ್ಷೆಗೆ ತಯಾರಾಗುತ್ತಿದ್ದ. ಈತನ ಮೇಲೆ ಮತ್ತೊಂದು ಗುಂಪು ದಾಳಿ ನಡೆಸಿದೆ ಎಂಬುದಾಗಿ ಬಾಲಕನ ಪೋಷಕರು ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತದೆ. ತಪ್ಪಿತಸ್ಥರು ಯಾರೇ ಆಗಿರಲಿ, ಅವರಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆ ನೀಡಲಾಗುವುದು” ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version