ಲಖನೌ: ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ದಲಿತ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಎಸಗುತ್ತಿರುವ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಉತ್ತರ ಪ್ರದೇಶದ (Uttar Pradesh) ಬಾಂಡಾ ಜಿಲ್ಲೆಯಲ್ಲಿ ಮನೆಗೆಲಸಕ್ಕೆ ಬಂದ ದಲಿತ ಮಹಿಳೆಯೊಬ್ಬರ (Dalit Woman) ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಅಷ್ಟೇ ಅಲ್ಲ, ದಲಿತ ಮಹಿಳೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ ದುರುಳರು, ತಲೆಮರೆಸಿಕೊಂಡಿದ್ದಾರೆ.
ಬಾಂಡಾ ಜಿಲ್ಲೆಯ ಗ್ರಾಮವೊಂದರಲ್ಲಿ ಮಹಿಳೆಯೊಬ್ಬರು ಮಂಗಳವಾರ (ನವೆಂಬರ್ 2) ರಾಜ್‌ಕುಮಾರ್ ಶುಕ್ಲಾ ಎಂಬಾತನ ಮನೆಗೆ ಕೆಲಸಕ್ಕೆಂದು ಹೋಗಿದ್ದಾರೆ. ಇದೇ ವೇಳೆ ಮಹಿಳೆಯ ಪುತ್ರಿಯು ಅಲ್ಲಿಗೇ ಬಂದಿದ್ದಾರೆ. ಆಗ ಕೋಣೆಯೊಂದರಲ್ಲಿ ತಾಯಿ ಕಿರುಚುತ್ತಿದ್ದನ್ನು ನೋಡಿ ಗಾಬರಿಗೊಂಡಿದ್ದಾರೆ. ಬಾಗಿಲು ಚಿಲಕ ಹಾಕಿದ ಕಾರಣ ದಲಿತ ಮಹಿಳೆಯ ಪುತ್ರಿಯು ಬಾಗಿಲು ತೆರೆಯಲು ಆಗಿಲ್ಲ. ಕೆಲ ಹೊತ್ತಿನ ಬಳಿಕ ಬಾಗಿಲು ತೆರೆದ ದುರುಳರು ಓಡಿಹೋಗಿದ್ದಾರೆ. ಮಗಳು ಹೋಗಿ ನೋಡಿದಾಗ ತಾಯಿಯ ದೇಹ ತುಂಡಾಗಿ ಬಿದ್ದಿತ್ತು ಎಂದು ತಿಳಿದುಬಂದಿದೆ.
ಘಟನೆ ಖಂಡಿಸಿದ ಅಖಿಲೇಶ್ ಯಾದವ್
बांदा में एक दलित के साथ बलात्कार व जघन्य हत्या की जो ख़बर आई है, वो दिल दहला देने वाली है। उप्र की महिलाएं डरी हुई हैं और अंदर-ही-अंदर आक्रोशित भी।
— Akhilesh Yadav (@yadavakhilesh) November 2, 2023
साथ ही आईआईटी बीएचयू की महिला छात्रा के साथ अभद्रता के बाद निर्वस्त्र कर वीडियो बनाने की घटना उप्र की क़ानून-व्यवस्था के मुँह पर… pic.twitter.com/g96iu9MFIK
ಮಹಿಳೆ ಮೇಲೆ ರಾಜ್‌ಕುಮಾರ್ ಶುಕ್ಲಾ, ಆತನ ಸಹೋದರರಾದ ಬೌವಾ ಶುಕ್ಲಾ ಹಾಗೂ ರಾಮಕೃಷ್ಣ ಶುಕ್ಲಾ ಅವರು ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳ ವಿರುದ್ಧವೂ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪ್ರಕರಣವನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಖಂಡಿಸಿದ್ದು, “ಉತ್ತರ ಪ್ರದೇಶದಲ್ಲಿ ದಲಿತ ಮಹಿಳೆಯರು, ಯುವತಿಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Ujjain Horror: ಉಜ್ಜಯಿನಿಯಲ್ಲಿ ಇನ್ನೊಂದು ಬರ್ಬರ ಕೃತ್ಯ; 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ
ದಲಿತ ಮಹಿಳೆಯರಿಗಿಲ್ಲ ರಕ್ಷಣೆ
ಕೆಲ ತಿಂಗಳಷ್ಟೇ ಉತ್ತರ ಪ್ರದೇಶದಲ್ಲಿ ದಲಿತ ಮಹಿಳೆ ಮೇಲೆ ಪೊಲೀಸ್ ಅಧಿಕಾರಿಯೇ ಅತ್ಯಾಚಾರ ಎಸಗಿದ್ದ. ಪ್ರಯಾಗರಾಜ್ ಜಿಲ್ಲೆಯ ಝಂಘಾಯಿ ಪೊಲೀಸ್ ಠಾಣೆ ಎಸ್‌ಐ ಆಗಿರುವ ಸುಧೀರ್ ಕುಮಾರ್ ಎಂಬಾತನು ದಲಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ. ಸೆಪ್ಟೆಂಬರ್ 21ರಂದು ಮಹಿಳೆಯೊ ಪೊಲೀಸ್ ಠಾಣೆಗೆ ಬಂದಿದ್ದಾರೆ. ಆಕೆಯ ದೂರು ದಾಖಲಿಸಿಕೊಂಡು, ನ್ಯಾಯ ಒದಗಿಸಬೇಕಾದ ಎಸ್‌ಐ, ಮಹಿಳೆಗೆ ಮತ್ತು ಬರುವ ಔಷಧ ಇರುವ ಪಾನೀಯ ನೀಡಿ, ಬಳಿಕ ಕಾರಿನಲ್ಲಿ ಎತ್ತಿಕೊಂಡು ಹೋಗಿ ಅತ್ಯಾಚಾರ ಎಸಗಿದ್ದ ಎಂದು ತಿಳಿದುಬಂದಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ