ನವದೆಹಲಿ: ಒಂದು ಕಾಲದಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ (Former PM HD Deve Gowda) ನಿಕಟವರ್ತಿಯಾಗಿದ್ದ, ಲೋಕಸಭೆ ಸಂಸದ ಡ್ಯಾನಿಶ್ ಅಲಿ (Lok Sabha member Danish Ali) ಅವರನ್ನು ಬಹುಜನ ಸಮಾಜ ಪಕ್ಷದಿಂದ ಮಾಯಾವತಿ (Mayawati) ಅವರು ಉಚ್ಚಾಟನೆ ಮಾಡಿದ್ದಾರೆ(expelled from bsp). ಪಕ್ಷ ವಿರೋಧಿ ಚಟುವಟಿಕೆಯ ಕಾರಣ ನೀಡಿ ಡ್ಯಾನಿಸ್ ಅಲಿ ಅವರನ್ನು ಬಿಎಸ್‌ಪಿಯಿಂದ ಕಿತ್ತು ಹಾಕಲಾಗಿದೆ. ಮಳೆಗಾಲದ ಅಧಿವೇಶನದಲ್ಲಿ ಬಿಜೆಪಿಯ ರಮೇಶ್ ಬಿದುರಿ ಅವರು ಡ್ಯಾನಿಶ್ ಅಲಿ ಅವರನ್ನು ಉಗ್ರವಾದಿ ಎಂದು ಕರೆದಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ.
ಪಕ್ಷದ ನೀತಿಗಳು, ಸಿದ್ಧಾಂತ ಮತ್ತು ಶಿಸ್ತಿನ ವಿರುದ್ಧ ಹೇಳಿಕೆಗಳು ಅಥವಾ ಕ್ರಮಗಳ ವಿರುದ್ಧ ನಿಮಗೆ ಅನೇಕ ಬಾರಿ ಎಚ್ಚರಿಕೆ ನೀಡಲಾಗಿತ್ತು. ಆದರೆ, ಅದರ ಹೊರತಾಗಿಯೂ ನೀವು ನಿರಂತರವಾಗಿ ಪಕ್ಷದ ವಿರುದ್ಧ ವರ್ತಿಸುತ್ತಿದ್ದೀರಿ ಎಂದು ಡ್ಯಾನಿಶ್ ಅಲಿಗೆ ಬಿಎಸ್‌ಪಿ ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಬಹುಜನ ಸಮಾಜ ಪಾರ್ಟಿಯನ್ನು ಸೇರುವ ಮುಂಚೆ ಜೆಡಿಎಸ್ ಜತೆ ಗುರುತಿಸಿಕೊಂಡಿದ್ದರು. ಜೆಡಿಎಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು. ರಾಷ್ಟ್ರೀಯ ವಾಹಿನಿಗಳ ಪ್ಯಾನೆಲ್ ಚರ್ಚೆಯಲ್ಲಿ ಜೆಡಿಎಸ್ ಅನ್ನು ಪ್ರತಿನಿಧಿಸುತ್ತಿದ್ದರು. ಆದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಎಸ್ಪಿಯನ್ನು ಸೇರಿ, ಉತ್ತರ ಪ್ರದೇಶದ ಅಮ್ರೋಹ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.
ಡ್ಯಾನಿಶ್ ಅಲಿಯನ್ನು ಉಗ್ರ ಎಂದು ಕರೆದಿದ್ದ ಬಿಜೆಪಿ ಸಂಸದ
ಬಿಎಸ್‌ಪಿಯ ಸಂಸದ ಡ್ಯಾನಿಶ್ ಅಲಿ (BSP MP Danish Ali) ಅವರಿಗೆ ಭಾರತೀಯ ಜನತಾ ಪಾರ್ಟಿಯ ಸಂಸದ ರಮೇಶ್ ಬಿಧುರಿ (BJP MP Ramesh Bidhuri) ಅವರು ಸಂಸತ್ತಿನಲ್ಲಿ ‘ಉಗ್ರ’ (Terrorist) ಎಂದು ಕರೆದಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದೇ ರೀತಿಯ ನಡವಳಿಕೆಯನ್ನು ಮತ್ತೊಮ್ಮೆ ಪ್ರದರ್ಶಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗವುದು ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ (Lok Sabha Speaker Om Birla) ಅವರು ಸಂಸದ ಬಿಧುರಿ ಅವರಿಗೆ ಆಗ ಎಚ್ಚರಿಕೆ ನೀಡಿದ್ದರು. ಜತೆಗೆ, ಬಿಜೆಪಿ ಕೂಡ ಕಾರಣ ಕೇಳಿ ನೋಟಿಸ್ ಜಾರಿ ಮಾಡಿತ್ತು. ಆದರೆ, ಪ್ರತಿಪಕ್ಷಗಳು (Opposition Parties)ಇಷ್ಟೇ ತೃಪ್ತಿಯಾಗದೇ ಬಿಧುರಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದವು. ಲೋಕಸಭೆಯಲ್ಲಿ ಪ್ರತಿ ಪಕ್ಷಗಳ ಸಂಸದರ ವಿರುದ್ಧ ಸಣ್ಣ ಪುಟ್ಟ ಕಾರಣಗಳಿಗೆ ಕಠಿಣ ಕ್ರಮ ಕೈಗೊಳ್ಳುವ ಓಂ ಬಿರ್ಲಾ ಅವರು, ಬಿಜೆಪಿಯ ಸಂಸದರ ವಿರುದ್ಧ ಕೇವಲ ‘ಎಚ್ಚರಿಕೆ’ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದವು. ಈ ಮಧ್ಯೆ, ಬಿಧುರಿ ಅವರು ಬಳಸಿರುವ ಉಗ್ರ ಎಂಬ ಪದವನ್ನು ಕಲಾಪದ ಕಡತದಿಂದ ತೆಗೆದು ಹಾಕಲಾಗಿದೆ(Parliament Special Session).
ಲೋಕಸಭೆಯಲ್ಲಿ ಚಂದ್ರಯಾನ ಯಶಸ್ಸಿನ ಕುರಿತು ಚರ್ಚೆ ನಡೆಯುತ್ತಿತ್ತು. ಈ ವೇಳೆ, ರಮೇಶ್ ಬಿಧುರಿ ಅವರು ಡ್ಯಾನಿಶ್ ಅಲಿ ವಿರುದ್ದ ಪದೇ ಪದೇ ನಿಂದಿಸುತ್ತಿದ್ದರು. ಅಲ್ಲದೇ ಇಸ್ಲಾಮೋಫೋಬಿಕ್ ನಿಂದನೆಗಳನ್ನು ನಿರಂತರವಾಗಿ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ನಿಮ್ಮ ನೇತೃತ್ವದಲ್ಲಿ ಹೊಸ ಸಂಸತ್ತಿನ ಕಟ್ಟಡದಲ್ಲಿ ಇದು ನಡೆದಿರುವುದು ಈ ಮಹಾನ್ ರಾಷ್ಟ್ರದ ಅಲ್ಪಸಂಖ್ಯಾತ ಸದಸ್ಯ ಮತ್ತು ಸಂಸದನಾಗಿ ನನಗೆ ತೀವ್ರ ನೋವುಂಟು ಮಾಡಿದೆಎಂದು ಡ್ಯಾನಿಶ್ ಅಲಿ ಸ್ಪೀಕರ್‌ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಅಲ್ಲದೇ ಬಿಜೆಪಿ ಸಂಸದ ರಮೇಶ್ ಬಿಧುರಿ ಅವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು. ಆದರೆ, ರಮೇಶ್ ಬಿಧುರಿ ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಯಿತು ಎಂಬುದು ಇದುವರಗೂ ಗೊತ್ತಾಗಿಲ್ಲ.
ಈ ಸುದ್ದಿಯನ್ನೂ ಓದಿ: ‘ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿ’! ಡ್ಯಾನಿಶ್ ಅಲಿಯನ್ನು ಭೇಟಿಯಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ