Site icon Vistara News

ಸನ್ನಿ ಲಿಯೋನ್ ಮನೆಗೆಲಸದಾಕೆಯ ಮಗಳು ನಾಪತ್ತೆ! ಹುಡುಕಿಕೊಟ್ಟವರಿಗೆ 50 ಸಾವಿರ ರೂ. ಬಹುಮಾನ

Daughter of sunny leone househelp is missing from jogeshwari

ಮುಂಬೈ: ತಮ್ಮ ಮನೆ ಕೆಲಸದವಳ ಮಗಳು (Daughter of Househelp) ಕಾಣೆಯಾಗಿದ್ದು, ಹುಡುಕಿಕೊಟ್ಟವರಿಗೆ 50 ಸಾವಿರ ರೂ. ಬಹುಮಾನ ನೀಡುವುದಾಗಿ ಬಾಲಿವುಡ್ ನಟಿ (Bollywood) ಸನ್ನಿ ಲಿಯೋನ್ (Sunny Leone) ಅವರು ಘೋಷಣೆ ಮಾಡಿದ್ದಾರೆ. ನಟಿ ಸನ್ನಿ ಲಿಯೋನ್ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ, ಮನೆಯ ಸಹಾಯಕಿಯ ಒಂಬತ್ತು ವರ್ಷದ ಮಗಳು ಮುಂಬೈನ (Mumbai) ಜೋಗೇಶ್ವರಿಯಿಂದ (Jogeshwari) ಕಾಣೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಕಾಣೆಯಾದ ಅನುಷ್ಕಾ ಕಿರಣ್ ಮೋರೆ ಅವರ ಫೋಟೋವನ್ನು ಇತರ ವಿವರಗಳೊಂದಿಗೆ ಹಂಚಿಕೊಂಡಿದ್ದಾರೆ.

ಮುಂಬೈ ಪೊಲೀಸ್, ಬಿಎಂಸಿಗೂ ಈ ಮಾಹಿತಿಯನ್ನು ಟ್ಯಾಗ್ ಮಾಡಲಾಗಿದೆ. ಗುರುವಾರ ಸಂಜೆಯಿಂದಲೇ ಅನುಷ್ಕಾ ಕಾಣೆಯಾಗಿದ್ದಾರೆ. ಜೋಗೇಶ್ವರಿ ವೆಸ್ಟ್‌ನ ಬೆಹ್ರಾಮ್ ಬೇಗ್‌ನಿಂದ ನಾಪತ್ತೆಯಾಗಿದ್ದಾಳೆ ಎಂದು ಸನ್ನಿ ಲಿಯೋನ್ ಅವರು ತಿಳಿಸಿದ್ದಾರೆ. ಅನುಷ್ಕಾಳನ್ನು ಅವರ ಕುಟುಂಬಕ್ಕೆ ಸುರಕ್ಷಿತವಾಗಿ ಮನೆಗೆ ಮರಳಿಸುವ ವ್ಯಕ್ತಿಗೆ 50,000 ರೂ. ಬಹುಮಾನ ನೀಡುವುದಾಗಿ ಅವರು ಘೋಷಣೆ ಮಾಡಿದ್ದಾರೆ.

ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ, ಜನವರಿ 1 ರಿಂದ ಮಾರ್ಚ್ 31 ರವರೆಗೆ, ಮಹಾರಾಷ್ಟ್ರದಲ್ಲಿ 16-35 ವರ್ಷದೊಳಗಿನ 3,594 ಹುಡುಗಿಯರು ಮತ್ತು ಮಹಿಳೆಯರು ನಾಪತ್ತೆಯಾಗಿದ್ದಾರೆ, ಮುಂಬೈಯೊಂದರಲ್ಲೇ 383 ಮಂದಿ ಕಾಣೆಯಾಗಿದ್ದಾರೆ.

ಶಾಲೆಯಿಂದ ಮೂವರು ವಿದ್ಯಾರ್ಥಿಗಳು ನಾಪತ್ತೆ

ಬೆಂಗಳೂರು: ಕಳೆದ ಶುಕ್ರವಾರದಿಂದ ಬಿಟಿಎಂ ಲೇಔಟಿನ ಶಾಂತಿನಿಕೇತನ ಶಾಲೆಯ ಮೂವರು ವಿದ್ಯಾರ್ಥಿಗಳು (missing case) ನಾಪತ್ತೆಯಾಗಿದ್ದಾರೆ.

ಶುಕ್ರವಾರ ಮಧ್ಯಾಹ್ನ ಶಾಲೆ ಮುಗಿಸಿಕೊಂಡು ಹೋಗಿರುವ ವಿದ್ಯಾರ್ಥಿಗಳು ಆ ಬಳಿಕ ಕಂಡುಬಂದಿಲ್ಲ. ಅಪರಿಚಿತ ವ್ಯಕ್ತಿಯಿಂದ ಸ್ಕೂಟರ್‌ ಒಂದನ್ನು ಪಡೆದು ಅದನ್ನು ಚಲಾಯಿಸಿಕೊಂಡು ಹೋಗುತ್ತಿರುವುದು ಶಾಲೆ ಬಳಿ ಇದ್ದ ಸಿಸಿ ಕ್ಯಾಮೆರಾದಲ್ಲಿ ಕಂಡುಬಂದಿದೆ.

ಆದರೆ ರಾತ್ರಿಯಾದರೂ ಮನೆಗೆ ವಾಪಸ್ ಬಂದಿಲ್ಲ. ಹೇಮಂತ್ ಗೌಡ, ಪವನ್ ಮತ್ತು ಸಂಜಯ್ ನಾಪತ್ತೆಯಾದ ವಿದ್ಯಾರ್ಥಿಗಳು. ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಸುದ್ದಿಯನ್ನೂ ಓದಿ: Shivamogga News: ಸಾದಗಲ್ ಗ್ರಾಮದಲ್ಲಿ ತೋಟಕ್ಕೆ ಹೋಗಿದ್ದ ವೃದ್ಧೆ ನಾಪತ್ತೆ

Exit mobile version