Site icon Vistara News

Supreme Court: ನೇಣಿಗೇರಿಸುವುದು ಕ್ರೂರತನವೇ? ಈ ಬಗ್ಗೆ ಚರ್ಚಿಸಿ ಎಂದು ಕೇಂದ್ರಕ್ಕೆ ಸೂಚಿಸಿದ ಸುಪ್ರೀಂ ಕೋರ್ಟ್

Supreme Court On Article 370

Article 370: Constitution doesn’t restrict President from reorganising a state

ನವದೆಹಲಿ: ನೇಣಿಗೇರಿಸುವ ಮೂಲಕ ಮರಣದಂಡನೆಯನ್ನು(Hanging) ಜಾರಿಗೊಳಿಸುವುದಕ್ಕಿಂತಲೂ ಕಡಿಮೆ ನೋವು ಆಗುವ ಮೂಲಕ ಮರಣದಂಡನೆಯನ್ನು ಜಾರಿ ಮಾಡುವ ಪರ್ಯಾಯ ಮಾರ್ಗವನ್ನು ಶೋಧಿಸಬಹುದೇ ಎಂದು ಸುಪ್ರೀಂ ಕೋರ್ಟ್ (Supreme Court) ಕೇಂದ್ರ ಸರ್ಕಾರಕ್ಕೆ ಕೇಳಿದೆ. ಈ ಬಗ್ಗೆ ಚರ್ಚೆ ಮಾಡುವಂತೆ ದೇಶದ ಅತ್ಯುನ್ನತ ನ್ಯಾಯಾಲಯವು ಸೂಚಿಸಿದೆ.

ನೇಣು ಹಾಕುವುದಕ್ಕಿಂತ ಕಡಿಮೆ ನೋವಿನ ವಿಧಾನವಿದೆಯೇ ಎಂದು ಪರಿಶೀಲಿಸಲು ಚರ್ಚೆಯನ್ನು ಪ್ರಾರಂಭಿಸಲು ಮತ್ತು ಮಾಹಿತಿಯನ್ನು ಸಂಗ್ರಹಿಸಲು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ನೇಣು ಹಾಕುವ ಮೂಲಕ ಉಂಟಾಗುವ ಪರಿಣಾಮಗಳ ಕುರಿತಾದ ಅಧ್ಯಯನ ಮಾಹಿತಿಯೊಂದಿಗೆ ಬನ್ನಿ ಎಂದು ಕೇಂದ್ರ ಸರ್ಕಾರ ಅಟಾರ್ನಿ ಜನರಲ್ ಅವರಿಗೆ ಆರ್ ವೆಂಕಟರಮಣಿ ಅವರಿಗೆ ಕೋರಿದೆ.

ಮರಣದಂಡನೆಗೆ ಗುರಿಯಾದ ಅಪರಾಧಿಗಳಿಗೆ ನೋವು ರಹಿತವಾಗಿ ಶಿಕ್ಷೆಯನ್ನು ಜಾರಿಗೊಳಿಸುವ ಕುರಿತು ದಾಖಲಾಗಿರುವ ಪಿಐಎಲ್‌ಗಳ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿದೆ. ನೇಣು ಹಾಕುವ ಬದಲು ಗುಂಡು ಹಾರಿಸುವುದು, ಮಾರಣಾಂತಿಕ ಚುಚ್ಚುಮದ್ದು ನೀಡುವುದು ಅಥವಾ ವಿದ್ಯುತ್ ಕುರ್ಚಿ ಮೂಲಕ ಸಾಯಿಸುವುದು ಸೇರಿದಂತೆ ಇತರ ಕ್ರಮಗಳನ್ನು ಅರ್ಜಿಯಲ್ಲಿ ಮಾಹಿತಿ ನೀಡಲಾಗಿದೆ. ಕುತ್ತಿಗೆಗೆ ನೇಣು ಹಾಕಿ ಮರಣದಂಡನೆಯನ್ನು ಜಾರಿಗೊಳಿಸುವ ಪ್ರಕ್ರಿಯೆ ಅತ್ಯಂತ ಕ್ರೂರವಾಗಿದೆ ಎಂದು, ಕಾನೂನು ಆಯೋಗದ ವರದಿಯನ್ನು ಓದಿ ವಕೀಲ ರಿಷಿ ಮಲ್ಹೋತ್ರಾ ಅವರು ಕೋರ್ಟ್‌ಗೆ ತಿಳಿಸಿದರು.

ಹೌದು, ಇದೊಂದು ಚರ್ಚಾ ವಿಷಯವಾಗಿದೆ. ಈ ಕುರಿತು ನಮಗೆ ಕೆಲವು ವೈಜ್ಞಾನಿಕ ದತ್ತಾಂಶಗಳು ನಮ್ಮ ಬಳಿ ಇಲ್ಲ. ನೋವಿಗೆ ಕಾರಣವಾಗುವ ಕೆಲವು ಅಧ್ಯಯನಗಳನ್ನು ನಮಗೆ ಕೊಡಿ. ನಾವು ಒಂದು ಸಮಿತಿಯನ್ನು ರಚಿಸಬಹುದು, ಈ ಕುರಿತು ಮುಂದಿನ ವಿಚಾಣೆಯಲ್ಲಿ ಚರ್ಚಿಸಬಹುದು ಎಂದು ಸಿಜೆಐ ಡಿ ವೈ ಚಂದ್ರಚೂಡ್ ಹೇಳಿದರು. ಅಲ್ಲದೇ, ಮುಂದಿನ ವಿಚಾರಣೆಯನ್ನು ಮೇ 2ಕ್ಕೆ ನಿಗದಿ ಮಾಡಿದ್ದಾರೆ.

ವಿಚಾರಣೆಯ ಸಂದರ್ಭದಲ್ಲಿ ಜಸ್ಟೀಸ್ ಪಿ ಎಸ್ ನರಸಿಂಹ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇಂದಿಗೂ ಸಾವಿನಲ್ಲಿ ಘನತೆ ಇರಬೇಕೆಂಬ ಪ್ರಶ್ನೆ ಚರ್ಚೆಯಾಗುತ್ತಲೇ ಇದೆ. ಅದು ಕಡಿಮೆ ನೋವಿನಿಂದ ಕೂಡಿರಬೇಕು. ಸದ್ಯದ ಪರಿಸ್ಥಿತಿಯ ನೇಣು ಹಾಕುವುದು ತೃಪ್ತಿಕರ ಸಾಧನವಾಗಿದೆ. ಹಾಗಾದಲ್ಲಿ, ಇಂಜೆಕ್ಷನ್ ಕೊಟ್ಟು ಸಾಯಿಸುವುದು ಪರಿಗಣಿಸಬಹುದೇ ಎಂದು ಜಸ್ಟೀಸ್ ಹೇಳಿದರು.

ಚುಚ್ಚುಮದ್ದು ಮೂಲಕ ಮರಣ ದಂಡನೆ ಶಿಕ್ಷೆಯ ಜಾರಿ ಮಾಡುವುದು ನೋವಿನಿಂದ ಕೊಡಿದೆ. ಶೂಟ್ ಮಾಡುವ ಮೂಲಕ ಶಿಕ್ಷೆ ಜಾರಿ ಮಾಡುವುದು ಮಿಲಿಟರಿ ಆಡಳಿತಗಳ ನೆಚ್ಚಿನ ಟೈಮ್‌ಪಾಸ್ ಆಗಿತ್ತು. ಇದು ಮಾನವ ಹಕ್ಕುಗಳ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಸಿಜೆಐ ಚಂದ್ರಚೂಡ್ ಅವರು ಹೇಳಿದರು.

Exit mobile version