Site icon Vistara News

Death Penalty: 34 ಕೋಟಿ ರೂ. ದಂಡ ಪಾವತಿ; ಸೌದಿ ಅರೇಬಿಯಾದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಕೇರಳದ ವ್ಯಕ್ತಿಗೆ ಕೊನೆಗೂ ಬಿಡುಗಡೆ ಭಾಗ್ಯ

Death Penalty

ಕೋಯಿಕ್ಕೋಡ್‌: ವಿಶೇಷ ಚೇತನ ಬಾಲಕನ ಸಾವಿನ ಪ್ರಕರಣದಲ್ಲಿ ಸೌದಿ ಅರೇಬಿಯಾದಲ್ಲಿ ಗಲ್ಲುಶಿಕ್ಷೆ(Death Penalty)ಗೆ ಗುರಿಯಾಗಿರುವ ಕೇರಳ(Kerala) ಮೂಲದ ವ್ಯಕ್ತಿಯ ಶಿಕ್ಷೆಯನ್ನು ಹಿಂಪಡೆಯಲಾಗಿದೆ. 2006ರಲ್ಲಿ ಅಬ್ದುಲ್‌ ರಹೀಮ್‌ (44) ಎಂಬಾತ ಗಲ್ಲುಶಿಕ್ಷೆಗೆ ಗುರಿಯಾಗಿದ್ದ. ಇದೀಗ ಈ ಶಿಕ್ಷೆಯನ್ನು ತಪ್ಪಿಸಲು ಆತನ ಕುಟುಂಬಸ್ಥರು ಬರೋಬ್ಬರಿ 34 ಕೋಟಿ ದೇಣಿಗೆ ಸಂಗ್ರಹಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ ಬೆನ್ನಲ್ಲೇ ಸೌದಿ ಕ್ರಿಮಿನಲ್‌ ಕೋರ್ಟ್‌ ಮರಣದಂಡನೆ ಶಿಕ್ಷೆಯನ್ನು ಹಿಂಪಡೆದಿದೆ.

ಅಬ್ದುಲ್‌ ರಹೀಮ್‌ನನ್ನು ಕಾಪಾಡಲು ಕೇರಳದಲ್ಲಿ ಆತನ ಕುಟುಂಬಸ್ಥರು 34ಕೋಟಿ ರೂ. ಸಂಗ್ರಹಿಸಿದ್ದರು. ಇದಾದ ಬಳಿಕ ಅಷ್ಟು ಮೊತ್ತದ ಹಣವನ್ನು ಪಡೆದು ರಹೀಮ್‌ನ ಕುಟುಂಬಸ್ಥರು ಸೌದಿ ಅರೇಬಿಯಾಗೆ ಭೇಟಿ ಕೊಟ್ಟಿದ್ದಾರೆ. ಅಲ್ಲಿ ಕೋರ್ಟ್‌ ವಿಚಾರಣೆ ವೇಳೆ ಅಷ್ಟು ಮೊತ್ತದ ಹಣವನ್ನು ಪರಿಹಾರವಾಗಿ ಸಂತ್ರಸ್ತ ಸೌದಿ ಕುಟುಂಬಕ್ಕೆ ಹಸ್ತಾಂತರಿಸಿದೆ. ಹಣ ವರ್ಗಾವಣೆ ಆಗುತ್ತಿದ್ದಂತೆ ತಕ್ಷಣ ರಹೀಂನನ್ನು ರೀಲೀಸ್‌ ಮಾಡಿ ಕೇರಳಕ್ಕೆ ವಾಪಾಸ್‌ ಕಳಿಸುವಂತೆ ಕೋರ್ಟ್‌ ಆದೇಶಿಸಿದೆ.

ಇನ್ನು ಈ ಬಗ್ಗೆ ರಹೀಮ್‌ನ ತಾಯಿ ಫಾತಿಮಾ ಪ್ರತಿಕ್ರಿಯಿಸಿದ್ದು, ತನ್ನ ಮಗನ ಬಿಡುಗಡೆಗೆ ಸಹಕರಿಸಿದ ಎಲ್ಲಾ ಕೇರಳದ ಜನರಿಗೆ ಧನ್ಯವಾದ. ಮಗನ ಬರುವಿಕೆಗಾಗಿ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.

ಏನಿದು ಪ್ರಕರಣ?

ಕೋಯಿಕ್ಕೋಡ್‌ ಜಿಲ್ಲೆಯ ಫೆರೋಕ್‌ ನಿವಾಸಿಯಾಗಿರುವ ರಹೀಮ್‌ ಅಟೋ ರಿಕ್ಷಾ ಚಾಲಕನಾಗಿದ್ದ. 2006ರಲ್ಲಿ ಆತನಿಗೆ ಸೌದಿ ಅರೇಬಿಯಾದಲ್ಲಿ ಡ್ರೈವರ್‌ ನೌಕರಿ ಸಿಕ್ಕಿತ್ತು. 15 ವರ್ಷ ವಿಶೇಷ ಚೇತನ ಬಾಲಕ ಫಾಯಿಜ್‌ ಅಬ್ದುಲ್ಲಾ ರಹೀಮಾನ್‌ ಅಲ್ಸಾಹರಿಯ ಓಡಾಟಕ್ಕೆ ನಿಗದಿಯಾಗಿದ್ದ ಕಾರಿನಲ್ಲಿ ಚಾಲಕನಾಗಿ ರಹೀಮ್‌ ನೇಮಕಗೊಂಡಿದ್ದ. 2006ರಲ್ಲಿ ರಹೀಮ್‌ ಮತ್ತು ಆ ಬಾಲಕ ಕಾರಿನಲ್ಲಿ ಹೋಗುತ್ತಿದ್ದಾಗ ಆಕಸ್ಮಿಕವಾಗಿ ರಹೀಮ್‌ನ ಕೈ ತಗುಲಿ ಅನ್ನ ಸೇವನೆಗೆ ಅಳವಡಿಸಿದ್ದ ಪೈಪ್‌ ಕಳಚಿಬಿದ್ದಿತ್ತು. ತಕ್ಷಣ ಬಾಲಕ ಪ್ರಜ್ಞೆ ತಪ್ಪಿ ಬಿದ್ದಿದ್ದು, ಕಾರಿನಲ್ಲೇ ಮೃತಪಟ್ಟಿದ್ದ.

ಪ್ರಕರಣಕ್ಕೆ ಸಂಬಂಧಿಸಿದಂತೆ ರಹೀಮ್‌ಗೆ ಕ್ರಿಮಿನಲ್‌ ಕೋರ್ಟ್‌ 2018ರಲ್ಲಿ ಮರಣದಂಡನೆ ವಿಧಿಸಿತ್ತು. ನಾಲ್ಕು ವರ್ಷಗಳ ನಂತರ ಸುಪ್ರೀಂ ಕೋರ್ಟ್ ದೃಢಪಡಿಸಿತು. ಇದರ ನಂತರ, ಪೀಪಲ್ ಆಕ್ಷನ್ ಕಮಿಟಿ (ಪಿಎಸಿ) ಮರಣದಂಡನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತು ಮತ್ತು ಮೃತ ಕುಟುಂಬವು 34 ಕೋಟಿ ರೂಪಾಯಿಗಳ ಪರಿಹಾರ ಸ್ವೀಕರಿಸಲು ಒಪ್ಪಂದಕ್ಕೆ ಬಂದಿತು. ಅಕ್ಟೋಬರ್ 16, 2023 ರಂದು ಒಪ್ಪಂದಕ್ಕೆ ಸಹಿ ಹಾಕಲಾಯಿತು ಮತ್ತು ಅದನ್ನು ಆರು ತಿಂಗಳೊಳಗೆ ಪಾವತಿಸುವಂತೆ ಆದೇಶಿಸಿತ್ತು.

ಇದನ್ನೂ ಓದಿ: BJP Muslim Candidate: ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ ಮುಸ್ಲಿಂ ಅಭ್ಯರ್ಥಿಗೆ ಬಿಜೆಪಿ ಟಿಕೆಟ್? ಏನಿದರ ಗುಟ್ಟು?

Exit mobile version