ನವದೆಹಲಿ: ಭಾನುವಾರ ಸಂಜೆ ಸಂಭವಿಸಿದ ಮೋರ್ಬಿ ಸೇತುವೆ ದುರಂತದಲ್ಲಿ (Morbi Bridge Collapse) ಮೃತಪಟ್ಟವರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ. ಸಾವಿಗೀಡಾದವರು ಈ ಪೈಕಿ 40 ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ. ಗಾಯಗೊಂಡಿರುವ ನೂರಕ್ಕೂ ಅಧಿಕ ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೇತುವೆ ಕುಸಿದ ಪರಿಣಾಮ ಒಟ್ಟು 350 ಮಂದಿ ನದಿಯಲ್ಲಿ ಮುಳುಗಿದ್ದರು.
ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡಗಳು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. ಜೊತೆಗೆ, ವಾಯಪಡೆ ಮತ್ತು ನೌಕಾ ಪಡೆಗಳ ತಂಡವನ್ನು ನಿಯೋಜಿಸಲಾಗಿದೆ. ಗಾಯಾಳಗಳನ್ನು ಏರ್‌ಲಿಫ್ಟ್ ಮಾಡಲಾಗುತ್ತಿದೆ. ಏತನ್ಮಧ್ಯೆ, ಇಡೀ ಘಟನೆ ಕುರಿತು ಹೈಕೋರ್ಟ್‌ನ ನಿವೃತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ಕೈಗೊಳ್ಳಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.
ಈ ದುರ್ಘಟನೆಯಲ್ಲಿ ರಾಜ್‌ಕೋಟ್‌ನ ಬಿಜೆಪಿ ಸಂಸದರ ತಮ್ಮ ಕುಟುಂಬದ 12 ಸದಸ್ಯರನ್ನು ಕಳೆದುಕೊಂಡಿದ್ದಾರೆ. ಚುನಾವಣೆ ನಡೆಯಲಿರುವ ಗುಜರಾತ್‌ನಲ್ಲಿ ರಾಜಕೀಯ ಚಟುವಟಿಕೆಗಳು ಜೋರುಗೊಂಡಿದ್ದವು. ಈ ದುರ್ಘಟನೆಯಲ್ಲಿ ಎಲ್ಲ ಪಕ್ಷಗಳು ತಮ್ಮ ಪ್ರಚಾರ ಸಭೆ, ಮೆರವಣಿಗೆ, ರೋಡ್ ಶೋಗಳನ್ನು ಕ್ಯಾನ್ಸಲ್ ಮಾಡಿವೆ. ಆದಮಪುರದಲ್ಲಿ ನಡೆಯಬೇಕಿದ್ದ ಆಪ್ ರೋಡ್ ಶೋವನ್ನು ಅರವಿಂದ್ ಕೇಜ್ರಿವಾಲ್ ರದ್ದು ಮಾಡಿದ್ದಾರೆ.
ಇದನ್ನು ಓದಿ | Morbi Bridge Collapse | ಮೋರ್ಬಿ ದುರ್ಘಟನೆಯಲ್ಲಿ ಬಿಜೆಪಿ ಸಂಸದ ಕುಟುಂಬದ 12 ಮಂದಿ ಸಾವು