Site icon Vistara News

ವಾರದಲ್ಲಿ ಸಿಎಂ ಶಿಂಧೆ ಬಣ ಶಾಸಕರ ವಿರುದ್ಧದ ಅನರ್ಹ ಅರ್ಜಿ ಇತ್ಯರ್ಥಪಡಿಸಿ; ‘ಮಹಾ’ ಸ್ಪೀಕರ್‌ಗೆ ಸುಪ್ರೀಂ ಸೂಚನೆ

Supreme Court

ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Maharashtra CM Ekatnath Shinde) ಮತ್ತು ಇತರ ಶಿವಸೇನೆಯ ಬಂಡಾಯ ಶಾಸಕರ (Shiv Sen MLAs) ವಿರುದ್ಧದ ಅನರ್ಹತೆ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ತ್ವರಿತವಾಗಿ ಕೈಗೆತ್ತಿಕೊಂಡಿದೆ. ಅಲ್ಲದೇ, ಸ್ಪೀಕರ್ ರಾಹುಲ್ ನಾರ್ವೇಕರ್ (Speaker Rahul Narwekar) ಅವರಿಗೆ ಸೂಚಿಸಿರುವ ಸುಪ್ರೀಂ ಕೋರ್ಟ್, ವಾರದೊಳಗೇ ಅನರ್ಹತೆ ಅರ್ಜಿಗಳನ್ನು ಇತ್ಯರ್ಥಪಡಿಸಲು (disqualification pleas) ಟೈಮ್ ನಿಗದಿ ಮಾಡುವಂತೆ ಖಡಕ್ಕಾಗಿ ಸೂಚಿಸಿದೆ.

ಶಿವಸೇನೆಯ ಬಂಡಾಯ ಶಾಸಕರ ಅನರ್ಹತೆ ಅರ್ಜಿಗಳನ್ನು ಸೂಕ್ತ ಸಮಯದಲ್ಲಿ ತೀರ್ಮಾನಿಸುವಂತೆ ಮೇ 11 ರ ಸುಪ್ರೀಂ ಕೋರ್ಟ್ ನೀಡಿರುವ ಆದೇಶಕ್ಕೆ ಗೌರವ ಸಲ್ಲಿಸುವಂತೆ ಮಹಾರಾಷ್ಟ್ರ ಸ್ಪೀಕರ್‌ಗೆ ಸುಪ್ರೀಂ ಕೋರ್ಟ್ ಹೇಳಿದೆ. ಶಿವಸೇನೆಯ ಬಂಡಾಯ ಶಾಸಕರ ವಿರುದ್ಧ ಅನರ್ಹ ಅರ್ಜಿಗಳ ವಿಚಾರಣೆಯಲ್ಲಿ ಏನೂ ಬೆಳವಣಿಗೆಯಾಗಿಲ್ಲ. ಈ ವಿಚಾರದಲ್ಲಿ ನೋಟಿಸ್ ಜಾರಿ ಮಾಡಿರುವುದನ್ನು ಬಿಟ್ಟರೆ ಬೇರೇನೂ ಆಗಿಲ್ಲ. ಹಾಗಾಗಿ, ಕಾರ್ಯವಿಧಾನದ ನಿರ್ದೇಶನಗಳನ್ನು ರವಾನಿಸಲು ಒಂದು ವಾರದೊಳಗೆ ವಿಷಯವನ್ನು ಇತ್ಯರ್ಥಪಡಿಸುವಂತೆ ಸ್ಪೀಕರ್‌ಗೆ ಸುಪ್ರೀಂ ಕೋರ್ಟ್‌ಗೆ ಸೂಚಿಸಿದೆ.

ಮಹಾರಾಷ್ಟ್ರ ಸ್ಪೀಕರ್ ಹೇಳೋದೇನು?

ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್, ”ಆದೇಶದ ಪ್ರತಿ ಇನ್ನೂ ಬಂದಿಲ್ಲ. ಅನರ್ಹತೆ ಅರ್ಜಿಗಳ ವಿಚಾರಣೆ ತನ್ನದೇ ಆದ ಕ್ರಮವನ್ನು ಅನುಸರಿಸುತ್ತದೆ. ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ನನ್ನ ಮಾಹಿತಿಯ ಪ್ರಕಾರ, ಸ್ಪೀಕರ್ ಹುದ್ದೆಯನ್ನು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಹುದ್ದೆ ಎಂದು ಗುರುತಿಸಿದೆ. ಹಾಗಾಗಿ, ಸ್ಪೀಕರ್ ಕಾರ್ಯನಿರ್ವಹಣೆಯಲ್ಲಿ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸುವಂತಿಲ್ಲ ಎಂದು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Supreme Court : ಪಿಎಂ ಕೇರ್ಸ್​ ಎಲ್ಲ ಅನಾಥ ಮಕ್ಕಳಿಗೂ ಮೀಸಲಾಗಲಿ; ಕೇಂದ್ರಕ್ಕೆ ಸುಪ್ರೀಂ ಕೋರ್ಟ್​ ಹೇಳಿದ್ಯಾಕೆ?

ಮುಖ್ಯಮಂತ್ರಿ ಏಕನಾಥ ಶಿಂಧೆ ಕ್ಯಾಂಪಿನ ಶಾಸಕರ ವಿರುದ್ಧ ಅನರ್ಹತೆಯ ಅರ್ಜಿಗಳ ವಿಚಾರಣೆಯನ್ನು ಸ್ಪೀಕರ್ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ ಎಂದು ಶಿವಸೇನೆಯ(ಯುಬಿಟಿ) ನಾಯಕ ಸಂಜಯ್ ರಾವತ್ ಅವರು ಆರೋಪಿಸಿದ್ದಾರೆ. ಸ್ಪೀಕರ್ ಅವರು ನಿಷ್ಕ್ರಿಯತೆಯು ಅಸಾಂವಿಧಾನಕ ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version