Site icon Vistara News

Defence Ministry | ಭಾರತೀಯ ಡಿಫೆನ್ಸ್ ಮಿನಿಸ್ಟ್ರಿ ಜಗತ್ತಿನ ಅತಿದೊಡ್ಡ ಉದ್ಯೋಗದಾತ ಇಲಾಖೆ!

Defence Ministry

ನವದೆಹಲಿ: ಭಾರತೀಯ ರಕ್ಷಣಾ ಇಲಾಖೆಯು (Defence ministry) ಉದ್ಯೋಗ ಒದಗಿಸುವ ಜಗತ್ತಿನಲ್ಲೇ ಅತಿದೊಡ್ಡ ಸಂಸ್ಥೆಯಾಗಿದೆ. ಸಕ್ರಿಯ ಸೇವಾ ಸಿಬ್ಬಂದಿ, ಮೀಸಲು ಪಡೆ ಮತ್ತು ನಾಗರಿಕ ಸಿಬ್ಬಂದಿ ಸೇರಿದಂತೆ ಒಟ್ಟು 2.92 ದಶಲಕ್ಷ ಉದ್ಯೋಗಗಳನ್ನು ರಕ್ಷಣಾ ಇಲಾಖೆ ಹೊಂದಿದೆ ಎಂದು ಸ್ಟ್ಯಾಟಿಸ್ಟಾ ವರದಿ ತಿಳಿಸಿದೆ. ಭಾರತೀಯ ರಕ್ಷಣಾ ಇಲಾಖೆಗೆ ತೀವ್ರ ಸ್ಪರ್ಧೆಯಲ್ಲಿರುವುದು ಅಮೆರಿಕದ ರಕ್ಷಣಾ ಇಲಾಖೆ. ಒಟ್ಟು 2.91 ದಶಲಕ್ಷ ಉದ್ಯೋಗಿಗಳನ್ನು ಅಮೆರಿಕ ರಕ್ಷಣಾ ಇಲಾಖೆ ಹೊಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಜರ್ಮನಿ ಮೂಲದ ಸ್ಟ್ಯಾಟಿಸ್ಟಾ ಖಾಸಗಿ ಸಂಸ್ಥೆಯು ಜಗತ್ತಿನಾದ್ಯಂತ ನಾನಾ ವಿಷಯಗಳಿಗೆ ಸಂಬಂಧಿಸಿದಂತೆ ಡೇಟಾಗಳನ್ನು ಒದಗಿಸುತ್ತದೆ. ಅದರಂತೆ ಸಂಸ್ಥೆಯು ಈಗ ಜಗತ್ತಿನ ಅತಿದೊಡ್ಡ ಉದ್ಯೋಗದಾತ ಕಂಪನಿಗಳಿಗೆ ಸಂಬಂಧಿಸಿದ ಡೇಟಾವನ್ನು ಸಂಗ್ರಹಿಸಿ ಕೊಟ್ಟಿದೆ. ಉದ್ಯೋಗದಾತ ಸಂಸ್ಥೆಗಳ ಪಟ್ಟಿಯಲ್ಲಿ ಭಾರತದ ರಕ್ಷಣಾ ಇಲಾಖೆಯು ಅಗ್ರಸ್ಥಾನದಲ್ಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಚೀನಾ ರಕ್ಷಣಾ ಇಲಾಖೆಯೂ ಹೆಚ್ಚಿನ ಉದ್ಯೋಗಗಳನ್ನು ನೀಡುತ್ತಿದೆ. ಆದರೆ, ರಕ್ಷಣಾ ಇಲಾಖೆಯು ನಾಗರಿಕ ಹುದ್ದೆಗಳನ್ನು ಪಟ್ಟಿಯಲ್ಲಿ ಸೇರಿಸಲು ಹೋಗಿಲ್ಲ. ಹಾಗಾಗಿ, ಚೀನಾ ರಕ್ಷಣಾ ಇಲಾಖೆಯ ಒಟ್ಟು ಉದ್ಯೋಗಿಗಳ ಸಂಖ್ಯೆ 2.5 ದಶಲಕ್ಷಗಳಷ್ಟಾಗಿದೆ. ಈ ಹಿನ್ನೆಲೆಯಲ್ಲಿ ಭಾರತವು ಮೊದಲನೇ ಸ್ಥಾನದಲ್ಲಿದ್ದು, ಅಮೆರಿಕದ ರಕ್ಷಣಾ ಇಲಾಖೆಯು ನಂತರದ ಸ್ಥಾನದಲ್ಲಿದೆ. ಉಭಯ ರಾಷ್ಟ್ರಗಳ ಮಧ್ಯೆ ಅಂಥ ವ್ಯತ್ಯಾಸಗಳೇನೂ ಇಲ್ಲ.

ಕಂಪನಿಗಳ ಪೈಕಿ ಹೇಳುವುದಾದರೆ ವಾಲ್‌ಮಾರ್ಟ್ ಜಗತ್ತಿನಲ್ಲೇ ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿದ ಕಂಪನಿಯಾಗಿದೆ. ಅಮೆರಿಕದ ಈ ಕಂಪನಿಯಲ್ಲಿ ಒಟ್ಟು 2.3 ಮಿಲಿಯನ್ ಜನರು ಕೆಲಸ ಮಾಡುತ್ತಿದ್ದಾರೆ. ಅಮೆಜಾನ್ ಎರಡನೇ ಸ್ಥಾನದಲ್ಲಿದ್ದರೂ ವಾಲ್‌ಮಾರ್ಟ್ ಸಮೀಪ ಬರಲು ಸಾಧ್ಯವಾಗಿಲ್ಲ. ಜಗತ್ತಿನ ಅತಿದೊಡ್ಡ ಕಂಪನಿ ಎನಿಸಿಕೊಂಡಿರುವ ಅಮೆಜಾನ್‌ನಲ್ಲಿ 1.6 ಮಿಲಿಯನ್ ಜನರು ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ | Rajnath Singh | ಶೀಘ್ರವೇ ಭಾರತಕ್ಕೆ ಗಿಲ್ಗಿಟ್-ಬಾಲ್ಟಿಸ್ತಾನ್, ಪಿಒಕೆ! ಪಾಕ್‌ಗೆ ರಾಜನಾಥ್ ಸಿಂಗ್ ಎಚ್ಚರಿಕೆ

Exit mobile version