Site icon Vistara News

ದಿಲ್ಲಿ-ದರ್ಭಾಂಗ್ ರೈಲಿಗೆ ಬೆಂಕಿ; ಎಂಟು ಪ್ರಯಾಣಕರಿಗೆ ಗಾಯ!

Delhi-Bihar train cath fire and eight passengers injured

ನವದೆಹಲಿ: ಉತ್ತರ ಪ್ರದೇಶದಲ್ಲಿ (Uttar Pradesh) ದಿಲ್ಲಿ-ದರ್ಭಾಂಗ್ (Delhi-Bihar train) ರೈಲಿನ ನಾಲ್ಕು ಬೋಗಿಗಳಿಗೆ ಬುಧವಾರ ಬೆಂಕಿ ಹೊತ್ತಿಕೊಂಡ (Train Catch Fire) ಪರಿಣಾಮ ಎಂಟು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ ಇಟಾವಾ ಬಳಿ 02570 ದೆಹಲಿ-ದರ್ಭಾಂಗ್‌ ಕ್ಲೋನ್ ಸ್ಪೆಷಲ್‌ನ ಎಸ್1 ಸ್ಲೀಪರ್ ಕೋಚ್‌ನಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಇತರ ಬೋಗಿಗಳಿಗೂ ಬೆಂಕಿ ವ್ಯಾಪಿಸಿದೆ. ರೈಲು ಸರಾಯ್ ಭೋಪಾಟ್ ನಿಲ್ದಾಣದ ಮೂಲಕ ಹಾದು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.

ಬೋಗಿಗಳಿಗೆ ಬೆಂಕಿ ತಗುಲಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರೈಲಿನ ಒಂದು ಬೋಗಿಯಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಮತ್ತು ಅಧಿಕಾರಿಗಳು ಸುತ್ತ ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಛತ್ ಹಬ್ಬದ ಕಾರಣಕ್ಕೆ ಉತ್ತರ ಭಾರತದಲ್ಲಿ ಸಂಚರಿಸುತ್ತಿರುವ ಎಲ್ಲ ರೈಲುಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ.

ಈ ಬೆಂಕಿ ಅವಘಡದಲ್ಲಿ ಗಾಯಗೊಂಡಿರುವ ಪ್ರಯಾಣಿಕರನ್ನು ಇಟವಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಶಾರ್ಟ್ ಸರ್ಕಿಟ್‌ನಿಂದಾಗಿ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಈ ಬಗ್ಗೆ ಇನ್ನೂ ಯಾವುದೇ ನಿಖರವಾದ ಮಾಹಿತಿಯನ್ನು ಅಧಿಕಾರಿಗಳು ನೀಡಿಲ್ಲ.

“ಬೆಂಕಿ ಕಾಣಿಸಿಕೊಂಡಾಗ ನಾವು ಹೇಗೋ ಕೋಚ್‌ನ ಕಿಟಕಿಯಿಂದ ಹೊರಬಂದೆವು. ಕೋಚ್‌ನಲ್ಲಿ ಬೆಂಕಿಯನ್ನು ನಂದಿಸಲು ಸರಿಯಾದ ವ್ಯವಸ್ಥೆಗಳು ಇರಲಿಲ್ಲ. ಕೋಚ್‌ನಿಂದ ಹೊರಬರುವಾಗ ಕೆಲವು ಜನರು ಗಾಯಗೊಂಡಿದ್ದಾರೆ” ಎಂಬ ಪ್ರತ್ಯಕ್ಷದರ್ಶಿ ಪ್ರಯಾಣಿಕರ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈಗಾಗಲೇ ಅಗ್ನಿಶಾಮಕ ದಳ ಸ್ಥಳಕ್ಕೆ ರವಾನಿಸಿ ಬೆಂಕಿಯನ್ನು ನಂದಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ರೈಲುನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಛತ್ ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ: Kerala Train Fire: ರೈಲಿಗೆ ಬೆಂಕಿ ಇಟ್ಟ ಶಾರುಖ್ ಸೈಫಿ ಇಸ್ಲಾಂ ಮೂಲಭೂತವಾದಿ ಜಾಕೀರ್ ನಾಯ್ಕ್‌ನ ಅನುಯಾಯಿ

Exit mobile version