ನವದೆಹಲಿ: ಕಾನೂನು ಕಾಪಾಡಬೇಕಾದ, ಶಾಂತಿ-ಸುವ್ಯವಸ್ಥೆ ಪಾಲನೆ ಮಾಡಬೇಕಾದ, ಕಾನೂನು ಉಲ್ಲಂಘಿಸಿದವರಿಗೆ ತಿಳಿಹೇಳಬೇಕಾದ ವಕೀಲರೇ ದೆಹಲಿ ಕೋರ್ಟ್ ಆವರಣದಲ್ಲಿ ಕಿತ್ತಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸಂಘರ್ಷದ ವೇಳೆ ಶಕ್ತಿ ಪ್ರದರ್ಶನ ಎಂಬಂತೆ ಗಾಳಿಯಲ್ಲಿ ಗುಂಡು ಹಾರಿಸಿ (Delhi Court Firing) ಉದ್ಧಟತನದ ವರ್ತನೆ ತೋರಿದ್ದಾರೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೆಹಲಿಯ ತೀಸ್ ಹಜಾರಿ ಕೋರ್ಟ್‌ನಲ್ಲಿ ಎಂದಿನಂತೆ ಕಲಾಪಗಳು ನಡೆದಿವೆ. ಇದೇ ವೇಳೆ ಎರಡು ವಕೀಲರ ಗುಂಪುಗಳ ನಡುವೆ ವಾಗ್ವಾದ ನಡೆದಿದೆ. ವಾಗ್ವಾದವು ಗಲಾಟೆಗೆ ತಿರುಗಿದ್ದು, ಕೋರ್ಟ್ ಆವರಣ ರಣರಂಗವಾಗಿ ಮಾರ್ಪಟ್ಟಿದೆ. ಇದೇ ವೇಳೆ ವಕೀಲರೊಬ್ಬರು ತಮ್ಮ ಗನ್ ತೆಗೆದು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆ ಮೂಲಕ ಮತ್ತೊಂದು ವಕೀಲರ ಗುಂಪನ್ನು ಹೆದರಿಸುವ, ಕೋರ್ಟ್ ಆವರಣದ ಶಿಷ್ಟಾಚಾರಗಳಿಗೆ ಧಕ್ಕೆ ತರುವ ಯತ್ನ ಮಾಡಿದ್ದಾರೆ.
#WATCH | An incident of firing was reported at Tis Hazari Court premises in Delhi this afternoon. No injuries were reported. Police say that this happened after an argument among lawyers.
— ANI (@ANI) July 5, 2023
(Note: Abusive language)
(Video Source: A lawyer) pic.twitter.com/AkRYOoyQPe
ಇದನ್ನೂ ಓದಿ: Contempt of court | ಕೋರ್ಟ್, ನ್ಯಾಯಮೂರ್ತಿಗಳ ನಿಂದನೆ: ವಕೀಲ ಜಗದೀಶ್‌ಗೆ 2 ಲಕ್ಷ ರೂ. ದಂಡ, ಪ್ರಕರಣ ಇತ್ಯರ್ಥ
ವಕೀಲರೊಬ್ಬರು ಗಾಳಿಯಲ್ಲಿ ಗುಂಡು ಹಾರಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದಾಗ್ಯೂ, ಫೈರಿಂಗ್ ಬಳಿಕ ಯಾರಿಗೂ ಗಾಯಗಳಾಗಿಲ್ಲ, ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ವಿಡಿಯೊ ವೈರಲ್ ಆಗುತ್ತಲೇ ದೆಹಲಿ ಬಾರ್ ಕೌನ್ಸಿಲ್ ಅಧ್ಯಕ್ಷ ಕೆ.ಕೆ.ಮಾನನ್ ಖಂಡಿಸಿದ್ದಾರೆ. ಇನ್ನು ವಕೀಲರೇ ಕೋರ್ಟ್ ಆವರಣದಲ್ಲಿ ಕಿತ್ತಾಡಿಕೊಂಡಿರುವ ಕುರಿತು ಸಾಮಾನ್ಯ ಜನರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ದೆಹಲಿ ಕೋರ್ಟ್ ಆವರಣದಲ್ಲಿ ಫೈರಿಂಗ್ ಆದ ಘಟನೆಯನ್ನು ಖಂಡಿಸುತ್ತೇವೆ. ಫೈರಿಂಗ್ ಮಾಡಿದ ಬಂದೂಕಿಗೆ ಪರವಾನಗಿ ಪಡೆಯಲಾಗಿದೆಯೋ, ಇಲ್ಲವೋ, ಗುಂಡು ಹಾರಿಸಿದವರು ವಕೀಲರು ಹೌದೋ, ಅಲ್ಲವೋ ಎಂಬುದು ಸೇರಿ ಪ್ರಕರಣದ ಕುರಿತು ಸಮರ್ಪಕವಾಗಿ ಹಾಗೂ ಸಮಗ್ರವಾಗಿ ತನಿಖೆ ನಡೆಸುತ್ತೇವೆ. ಇದಾದ ಬಳಿಕ ಕ್ರಮದ ಕುರಿತು ಚಿಂತನೆ ನಡೆಸುತ್ತೇವೆ ಎಂದು ಕೆ.ಕೆ.ಮಾನನ್ ಮಾಹಿತಿ ನೀಡಿದರು.