ನವದೆಹಲಿ: ಮೂವರು ಹದಿಹರೆಯದ ಹುಡುಗರು (3 Teens) 14 ವರ್ಷದ ಬಾಲಕನಿಗೆ (14-yr-old Boy) ಅಸ್ವಾಭಾವಿಕ ಲೈಂಗಿಕಕ್ರಿಯೆಗೆ (Unnatural Sex) ಒತ್ತಾಯಿಸಿದ್ದು, ಮಾತ್ರವಲ್ಲದೇ ಅದನ್ನು ಚಿತ್ರೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟ ಘಟನೆ ದಕ್ಷಿಣ ದಿಲ್ಲಿಯ ಹೌಜ್ ಖಾಸಾ ಪ್ರದೇಶದಲ್ಲಿ ನಡೆದಿದೆ(South Delhi Hauz Khas) . ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೂವರು ಬಾಲಾಪರಾಧಿಗಳಲ್ಲಿ ಒಬ್ಬ ಭಾನುವಾರ ರಾತ್ರಿ ವಿಡಿಯೋವನ್ನು ಸಂತ್ರಸ್ತ ಬಾಲಕನ ತಾಯಿಗೆ ಕಳುಹಿಸಿದ್ದಾನೆ. ಕೂಡಲೇ ಸಂತ್ರಸ್ತ ಬಾಲಕನ ತಾಯಿ, ಪೊಲೀಸರನ್ನು ಸ್ಥಳಕ್ಕೆ ಕರೆಯಿಸಿದ್ದಾರೆ.
ಸಂತ್ರಸ್ತ ಹುಡುಗನಿಗೆ ಚಾಕು ತೋರಿಸಿ ಬೆದರಿಸುವುದು, ಬಳಿಕ ತಮ್ಮ ಶೂಗಳನ್ನು ಆತನಿಂದ ನೆಕ್ಕಿಸುತ್ತಿರುವುದು ಮತ್ತು ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಲು ಆತನನ್ನು ಒತ್ತಾಯಿಸುವುದನ್ನು ಇನ್‌ಸ್ಟಾಗ್ರಾಮದಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ ಕಾಣಬಹುದು.
ಭಾನುವಾರ ರಾತ್ರಿ ಪಿಸಿಆರ್ ಕರೆಗೆ ಪ್ರತಿಕ್ರಿಯಿಸಿದ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಅಲ್ಲಿ ಕರೆ ಮಾಡಿದವರು, ಕೆಲವು ಹುಡುಗರು ತನ್ನ 14 ವರ್ಷದ ಮಗನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಎಸಗಿದ್ದಾರೆ ಮತ್ತು ವೀಡಿಯೊ ಕ್ಲಿಪ್ ಮೊಬೈಲ್ ಫೋನ್‌ನಲ್ಲಿ ಕಳುಹಿಸಿದ್ದಾರೆ ಎಂದು ಸಂತ್ರಸ್ತ ತಾಯಿಯು ತಿಳಿಸಿದ್ದಾರೆ. ಬಾಲಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಂತರ ಕೌನ್ಸೆಲಿಂಗ್ ನಡೆಸಲಾಯಿತು.
ಸಂತ್ರಸ್ತ ಬಾಲಕ ಶನಿವಾರ ಸಂಜೆ 6.30 ರ ಸುಮಾರಿಗೆ ಹೌಜ್ ಖಾಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ಆಟವಾಡಿಕೊಂಡು ಮನೆಗೆ ಹೋಗುತ್ತಿದ್ದಾಗ 12 ರಿಂದ 14 ವರ್ಷ ವಯಸ್ಸಿನ ಅವನ ಮೂವರು ಸ್ನೇಹಿತರು ಅವರನ್ನು ತಮ್ಮೊಂದಿಗೆ ಪ್ರತ್ಯೇಕ ಸ್ಥಳಕ್ಕೆ ಹೋಗುವಂತೆ ಒತ್ತಾಯಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಲ್ಲಿ ಒಬ್ಬ ತರಕಾರಿ ಚಾಕು ತೋರಿಸಿ ತನ್ನ ಖಾಸಗಿ ಅಂಗವನ್ನು, ಸಂತ್ರಸ್ತ ಬಾಲಕನ ಬಾಯಿಗೆ ಹಾಕಿದ್ದಾನೆ. ಮೂವರು ಆ ಕೃತ್ಯವನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದಿದ್ದಾರೆ ಎಂದು ಇನ್ನೊಬ್ಬ ಅಧಿಕಾರಿ ಹೇಳಿದ್ದಾರೆ. ಈ ವಿಷಯವನ್ನು ಬೇರೆ ಯಾರಿಗಾದರೂ ಹೇಳಿದರೆ ಕೃತ್ಯದ ಬಗ್ಗೆ ಯಾರಿಗಾದರೂ ತಿಳಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆರೋಪಿ ಬೆದರಿಕೆ ಹಾಕಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Delhi Crime: ವಿದ್ಯಾರ್ಥಿನಿ ಜತೆ ಮಾತನಾಡಿದ್ದಕ್ಕೆ ವಿದ್ಯಾರ್ಥಿಯ ಬೆರಳನ್ನೇ ಕತ್ತರಿಸಿದ!