Site icon Vistara News

Delhi Earthquake: ನೇಪಾಳದ ಗಡಿಯಲ್ಲಿ ಭೂಕಂಪ, ದಿಲ್ಲಿಯಲ್ಲಿ ನಡುಗಿದ ಭೂಮಿ

Delhi Earthquake and Nepal border is center of it

ನವದೆಹಲಿ: ನೇಪಾಳದಲ್ಲಿ ಸಂಭವಿಸಿದ ಭೂಕಂಪದ ಅನುಭವವು ದಿಲ್ಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲೂ (Delhi Earthquake) ಆಗಿದೆ. ರಿಕ್ಟರ್ ಮಾಪಕದಲ್ಲಿ 5.8ರಷ್ಟು ತೀವ್ರತೆ ದಾಖಲಾಗಿದೆ. ನೇಪಾಳದ ಗಡಿ ಭಾಗದಲ್ಲಿ ಭೂಕಂಪದ ಕೇಂದ್ರವಾಗಿದೆ.

ನೇಪಾಳದ ಜುಮ್ಲಾ ಜಿಲ್ಲೆಯಿಂದ 63 ಕಿ.ಮೀ ದೂರ ಹಾಗೂ ರಾಜಧಾನಿ ಕಾಠ್ಮಂಡು 300 ಕಿ.ಮೀ ದೂರದಲ್ಲಿ ಭೂಕಂಪದ ಕೇಂದ್ರೀತವಾಗಿದ್ದು, 10 ಕಿ.ಮೀ ಆಳದಲ್ಲಿ ಕಂಪನಗಳೆದ್ದಿವೆ. ಈವರೆಗೆ ಯಾವುದೇ ಸಾವು ನೋವು ಸಂಭವಿಸಿದ ವರದಿಗಳು ಆಗಿಲ್ಲ.

ಏತನ್ಮಧ್ಯೆ, ಭಾರತದ ರಾಜಧಾನಿ ದಿಲ್ಲಿ ಹಾಗೂ ಅದರ ಸುತ್ತಮುತ್ತ ಪ್ರದೇಶದಲ್ಲಿ ಭೂಮಿ ಕಂಪಸಿದೆ. ಅದರ ಅನುಭವ ಜನರಿಗಾಗಿದೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ದಿಲ್ಲಿ, ಎನ್‌ಸಿಆರ್ ಮತ್ತು ಉತ್ತರದ ಕೆಲವು ರಾಜ್ಯಗಳಲ್ಲಿ ಭೂಕಂಪ ಸಂಭವಿಸಿತ್ತು. ಇದಾದ ಬಳಿಕವೂ, ಈ ಪ್ರದೇಶದ ಜನರು ಆಗಾಗ ಭೂಕಂಪದ ಅನುಭವವನ್ನು ಎದುರಿಸಿದೆ.

Exit mobile version