Site icon Vistara News

Subramanian Swamy | ಸುಬ್ರಮಣಿಯನ್‌ ಸ್ವಾಮಿಗೆ ನೀಡಿದ್ದ ಮನೆ ಖಾಲಿ ಮಾಡಲು ಕೋರ್ಟ್‌ ಆದೇಶಿಸಿದ್ದೇಕೆ?

Subramanian Swamy

ನವದೆಹಲಿ: ಬಿಜೆಪಿ ಮುಖಂಡ, ರಾಜ್ಯಸಭೆ ಮಾಜಿ ಸದಸ್ಯ ಸುಬ್ರಮಣಿಯನ್‌ ಸ್ವಾಮಿ (Subramanian Swamy) ಅವರಿಗೆ ನೀಡಲಾಗಿದ್ದ ಸರ್ಕಾರದ ನಿವಾಸವನ್ನು ಆರು ವಾರದಲ್ಲಿ ಖಾಲಿ ಮಾಡಬೇಕು ಎಂದು ದೆಹಲಿ ಹೈಕೋರ್ಟ್‌ ಆದೇಶಿಸಿದೆ. ಸುಬ್ರಮಣಿಯನ್‌ ಸ್ವಾಮಿ ಅವರಿಗೆ ಬೆದರಿಕೆ ಇದ್ದ ಹಿನ್ನೆಲೆಯಲ್ಲಿ ೨೦೧೬ರಲ್ಲಿ ಅವರಿಗೆ ಭದ್ರತೆ ಇರುವ ನಿವಾಸವನ್ನು ನೀಡಲಾಗಿತ್ತು. ಈಗ ಆರು ವಾರದಲ್ಲಿ ನಿವಾಸ ಖಾಲಿ ಮಾಡುವಂತೆ ಕೋರ್ಟ್‌ ಗಡುವು ನೀಡಿದೆ.

2016ರ ಜನವರಿಯಲ್ಲಿ ಸುಬ್ರಮಣಿಯನ್‌ ಸ್ವಾಮಿ ಅವರಿಗೆ ಲುಟಿಯೆನ್ಸ್‌ ಬಂಗಲೆ ವಲಯದಲ್ಲಿ ನಿವಾಸ ನೀಡಲಾಗಿತ್ತು. ಆಗ ಅವರು ರಾಜ್ಯಸಭೆಗೂ ಆಯ್ಕೆಯಾಗಿರಲಿಲ್ಲ. ಆದರೆ, ಬೆದರಿಕೆ ಇರುವ ಕಾರಣ ವಸತಿ ಸೌಲಭ್ಯ ಒದಗಿಸಲಾಗಿತ್ತು. ಇದಾದ ಬಳಿಕ ಅವರು ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಆದರೆ, ಕಳೆದ ಏಪ್ರಿಲ್‌ನಲ್ಲಿ ರಾಜ್ಯಸಭೆ ಸದಸ್ಯತ್ವದ ಅವಧಿ ಮುಗಿದಿತ್ತು.

ರಾಜ್ಯಸಭೆ ಅವಧಿ ಹಾಗೂ ವಸತಿ ಸೌಲಭ್ಯದ ಅವಧಿ ಮುಗಿದರೂ ಸುಬ್ರಮಣಿಯನ್‌ ಸ್ವಾಮಿ ಅವರು ತಮ್ಮ ವಸತಿ ಸೌಕರ್ಯ ಮುಂದುವರಿಸಬೇಕು ಎಂದು ಕೋರ್ಟ್‌ ಮೊರೆ ಹೋಗಿದ್ದರು. ನನಗೆ ಝಡ್‌ ಪ್ಲಸ್‌ ಭದ್ರತೆ ಇರುವ ಕಾರಣ ವಸತಿ ಸೌಕರ್ಯ ಮುಂದುವರಿಸಬೇಕು ಎಂದು ಮನವಿ ಮಾಡಿದ್ದರು. ಆದರೆ, ಇದಕ್ಕೆ ಕೇಂದ್ರ ಸರ್ಕಾರವು ವಿರೋಧ ವ್ಯಕ್ತಪಡಿಸಿದೆ. ಕೊನೆಗೆ ನ್ಯಾಯಾಲಯವು ಅವರು ನಿವಾಸ ಖಾಲಿ ಮಾಡಬೇಕು ಎಂದು ಆದೇಶಿಸಿದೆ.

ಇದನ್ನೂ ಓದಿ | ಬೆಂಗಳೂರು ಗ್ರಾಮಾಂತರವನ್ನು ಸೈಬೀರಿಯಾಕ್ಕೆ ಹೋಲಿಸಿದ ಸುಬ್ರಮಣಿಯನ್‌ ಸ್ವಾಮಿ !

Exit mobile version