Site icon Vistara News

Delhi School Scam | ಅಬಕಾರಿ ಪ್ರಕರಣದ ಬೆನ್ನಲ್ಲೇ ದಿಲ್ಲಿಯಲ್ಲಿ ಮತ್ತೊಂದು ಹಗರಣ ಸದ್ದು, ಏನಿದು ಕೇಸ್?

AAP MLAs to hold door-to-door campaign against arrest of Sisodia, Jain

ನವದೆಹಲಿ: ಅಬಕಾರಿ ನೀತಿ ಜಾರಿ ವೇಳೆ ಹಗರಣ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ದಾಳಿ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಆಮ್‌ ಆದ್ಮಿ ಪಕ್ಷದ ನಡುವೆ ರಾಜಕೀಯ ಮೇಲಾಟ, ಜಟಾಪಟಿ ನಡೆದಿರುವ ಬೆನ್ನಲ್ಲೇ ಸರಕಾರಿ ಶಾಲೆಗಳ ನಿರ್ಮಾಣದಲ್ಲಿ ಅಕ್ರಮ ನಡೆದಿದೆ ಎಂಬ ಪ್ರಕರಣ (Delhi School Scam) ಸದ್ದು ಮಾಡುತ್ತಿದೆ.

ರಾಷ್ಟ್ರ ರಾಜಧಾನಿಯಲ್ಲಿ ಸರಕಾರಿ ಶಾಲೆಗಳ ನಿರ್ಮಾಣದಲ್ಲಿ ಅಕ್ರಮ ನಡೆದಿರುವ ಕುರಿತು ವಿಸ್ತೃತ ತನಿಖೆಯಾಗಬೇಕು ಎಂದು ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಶಿಫಾರಸು ಮಾಡಿದಾರೆ. ಹಾಗೆಯೇ, ತನಿಖೆಯು ಎರಡೂವರೆ ವರ್ಷ ವಿಳಂಬವಾಗಲು ಏನು ಕಾರಣ ಎಂಬುದರ ಕುರಿತು ವರದಿ ನೀಡುವೆಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಸರಕಾರಿ ಶಾಲೆಗಳಲ್ಲಿ ಹೆಚ್ಚುವರಿ ಕ್ಲಾಸ್‌ರೂಮ್‌ಗಳನ್ನು ನಿರ್ಮಿಸುವಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ೨೦೧೯ರಲ್ಲಿಯೇ ಕೇಳಿಬಂದಿದೆ. ದಿಲ್ಲಿ ಸರಕಾರವು ಗುತ್ತಿಗೆ ಕರೆಯದೆಯೇ ೫೦೦ ಕೋಟಿ ರೂ. ಮೌಲ್ಯದ ಕಟ್ಟಡ ನಿರ್ಮಾಣ ಯೋಜನೆ ಜಾರಿಗೊಳಿಸಿದೆ ಎಂಬುದು ಸೇರಿ ಹಲವು ಆರೋಪಗಳು ಕೇಳಿಬಂದಿವೆ. ಈ ಕುರಿತು ಪ್ರಕರಣದ ಆರಂಭದಲ್ಲಿಯೇ ತನಿಖೆಗೆ ಆದೇಶಿಸಲಾಗಿತ್ತು.

ಅಬಕಾರಿ ನೀತಿ ಜಾರಿಯಲ್ಲಿ ಅಕ್ರಮ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಈಗಾಗಲೇ ದೆಹಲಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಅವರನ್ನು ವಿಚಾರಣೆ ನಡೆಸಿದೆ. ಇದು ಬಿಜೆಪಿ ಹಾಗೂ ಆಪ್‌ ಮಧ್ಯೆ ಜಟಾಪಟಿಗೆ ಕಾರಣವಾಗಿದೆ. “ಆಪರೇಷನ್‌ ಕಮಲ”ದ ಮೂಲಕ ಸರಕಾರವನ್ನು ಉರುಳಿಸಲು ಬಿಜೆಪಿ ತಂತ್ರ ಹೆಣೆಯುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ತಿಳಿಸಿದ್ದಾರೆ.

ಇದನ್ನೂ ಓದಿ | ಬಿಜೆಪಿಯಿಂದ ಬಂದಿತ್ತು ಸಿಎಂ ಪೋಸ್ಟ್​ ಆಫರ್​, ಶಾಸಕರಿಗೆ 20 ಕೋಟಿ ಆಮಿಷ: ಮನೀಷ್​ ಸಿಸೋಡಿಯಾ ಆರೋಪ

Exit mobile version