ನವದೆಹಲಿ: ದೆಹಲಿ ಮಹಿಳಾ ಆಯೋಗ(DCW)ದ 223 ಗುತ್ತಿಗೆ ನೌಕರರನ್ನು(Contractual Employees) ಲೆಫ್ಟಿನೆಂಟ್ ಗವರ್ನರ್ (Delhi Lieutenant Governor) ವಿ.ಕೆ. ಸಕ್ಸೇನಾ(VK Saxena) ನೌಕರಿಯಿಂದ ವಜಾಗೊಳಿಸಿದೆ. ಮಹಿಳಾ ಮತ್ತು ಮಕ್ಕಳ ಆಯೋಗದ ಮಾಹಿತಿ ಪ್ರಕಾರ, ಆಯೋಗದ ಮಾಜಿ ಅಧ್ಯಕ್ಷೆ ಸ್ವಾತಿ ಮಲಿವಾಲ್ (Swati Maliwal) ಅವಧಿಯಲ್ಲಿ ಸರ್ಕಾರದ ಯಾವುದೇ ಅನುಮತಿ ಪಡೆಯದೇ, ನಿಯಮಕ್ಕೆ ವಿರುದ್ಧವಾಗಿ ಈ ನೌಕರರನ್ನು ನೇಮಕ ಮಾಡಿಕೊಳ್ಳಲಾಗಿತ್ತು ಎನ್ನಲಾಗಿದೆ. ಇಗೀಗ ಈ ನೌಕರರನ್ನು ವಜಾಗೊಳಿಸಿ ಲೆಫ್ಟಿನೆಂಟ್ ಗವರ್ನರ್ ಆದೇಶ ಹೊರಡಿಸಿದ್ದಾರೆ.
ಮಹಿಳಾ ಆಯೋಗವು ಯಾವುದೇ ನಿಯಮ ಪಾಲಿಸದೇ 223 ಹುದ್ದೆಗಳನ್ನು ಸೃಷ್ಟಿಸುವ ಮೂಲಕ DCW ಕಾಯಿದೆ 1994 ಮತ್ತು ಹಣಕಾಸು & ಯೋಜನೆ ಇಲಾಖೆ, GNCTDಯ ನಿಯಮವನ್ನು ಉಲ್ಲಂಘಿಸಿದೆ. ಅಲ್ಲದೇ ಪ್ರತಿ ಹುದ್ದೆಗಳ ಅಗತ್ಯತೆ ಬಗ್ಗೆ ಯಾವುದೇ ಸೂಕ್ತ ಅಧ್ಯಯನ ಮಾಡದೇ, ನೌಕರರ ಅರ್ಹತೆ ಪರೀಕ್ಷಿಸದೇ, ಆಡಳಿತಾತ್ಮಕ ಅನುಮತಿ ಪಡೆಯದೇ ಈ ನೌಕರರನ್ನು ನೇಮಿಸಿಕೊಳ್ಳಲಾಗಿತ್ತು. ಈ ಹುದ್ದೆಗಳಿಗೆ ಔಪಚಾರಿಕವಾಗಿ ಯಾವುದೇ ಅರ್ಜಿ ಆಹ್ವಾನ ಪ್ರಕ್ರಿಯೆಗಳೂ ನಡೆದಿಲ್ಲ. ಈ ರೀತಿ DCWಯಿಂದ ಅಗಿರುವ ಅಕ್ರಮಗಳನ್ನು ಗಂಭೀರವಾಗಿ ಪರಿಗಣಿಸಿರುವ ಲೆಫ್ಟಿನೆಂಟ್ ಗವರ್ನರ್ ಈ ಬಗ್ಗೆ ಕ್ರಮ ಜರುಗಿಸಲು ಮುಂದಾಗಿದೆ. ಹೀಗಾಗಿ ಸೂಕ್ತ ನಿಯಮಗಳನ್ನು ಪಾಲಿಸದೇ ಹುದ್ದೆಗಳಿಗೆ ನೇಮಕಗೊಂಡಿರುವ ನೌಕರರನ್ನು ಹುದ್ದೆಯಲ್ಲಿ ಮುಂದುವರೆಸಲು ಸಾಧ್ಯವಿಲ್ಲ. ತಕ್ಷಣ ಎಲ್ಲಾ 223 ಗುತ್ತಿಗೆ ನೌಕರರನ್ನು ತಕ್ಷಣವೇ ಹುದ್ದೆಯಿಂದ ಅಮಾನತುಗಳಿಸುವಂತೆ ಮಹಿಳಾ ಆಯೋಗಕ್ಕೆ ಸೂಚನೆ ನೀಡಲಾಗಿದೆ.
223 employees from the Delhi Women Commission have been removed with immediate effect on the order of Lieutenant Governor VK Saxena. It is alleged that the then chairperson of the Delhi Women Commission, Swati Maliwal, had appointed them without permission, going against the… pic.twitter.com/wMZmaTuX9l
— ANI (@ANI) May 2, 2024
ಇದನ್ನೂ ಓದಿ:Gangster Goldy Brar:”ಶೂಟೌಟ್‌ನಲ್ಲಿ ಸತ್ತಿದ್ದು ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಅಲ್ಲ”…ವದಂತಿಗೆ ತೆರೆ
ಸ್ವಾತಿ ವಿರುದ್ಧ ಈ ಹಿಂದೆಯೂ ಅಕ್ರಮ ಹಾಗೂ ಹಗರಣಗಳ ಆರೋಪ ಕೇಳಿಬಂದಿತ್ತು. 2015 ಮತ್ತು 2016ರ ನಡುವೆ ತಮಗೆ ಬೇಕಾಗಿದ್ದವರು ಮತ್ತು ಆಪ್‌ಗೆ ಸಂಬಂಧಿಸಿದ ವ್ಯಕ್ತಿಗಳನ್ನು ಆಯೋಗದ ವಿವಿಧ ಹುದ್ದೆಗಳಿಗೆ ನೇಮಕ ಮಾಡಿರುವ ಬಗ್ಗೆ ದಿಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಕೇಸ್ ದಾಖಲಿಸಿತ್ತು. ಬಳಿಕ ದಿಲ್ಲಿ ಹೈ ಕೋರ್ಟ್ ಅವರ ವಿರುದ್ಧ ವಿಚಾರಣೆಗೆ ತಡೆಯಾಜ್ಞೆ ತಂದಿತ್ತು. ಮಾಜಿ ಶಾಶಕ ಬರ್ಖಾ ಸಿಂಗ್ ದೂರ ನೀಡಿದ್ದ ದೂರಿನಾಧಾರದಲ್ಲಿ ಕೇಸ್ ದಾಖಲಿಸಲಾಗಿತ್ತು. ಆದರೆ ವಿಚಾರಣೆ ನಡೆಸಿದ ಏಕಸದಸ್ಯ ಪೀಠ ಸೂಕ್ತ ಸಾಕ್ಷ್ಯಾಧಾರಗಳು ಮತ್ತು ದಾಖಲೆಗಳು ಇಲ್ಲದೇ ಇರುವುದರಿಂದ ಪ್ರಕರಣ ವಿಚಾರಣೆಯನ್ನು ಕೈ ಬಿಡುವುದಾಗಿ ಹೇಳಿತ್ತು. ಇದಾದ ಬಳಿಕ ಸ್ವಾತಿ ಕಳೆದ ಜನವರಿಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಆಪ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ರಾಜ್ಯಸಭೆ ಚುನಾವಣೆ ತನ್ನ ಅಭ್ಯರ್ಥಿ ಎಂದು ಆಪ್ ಘೋಷಿಸಿದ ಬಳಿಕ ಸ್ವಾತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು.