Site icon Vistara News

ಡಾಬಾದ ಫ್ರಿಡ್ಜ್‌ನಲ್ಲಿ ಗೆಳತಿಯ ಶವ ಇಟ್ಟು, ಕೆಲವೇ ಗಂಟೆಯಲ್ಲಿ ಮತ್ತೊಬ್ಬಳನ್ನು ಮದುವೆಯಾದ ಸಾಹಿಲ್‌ ಗೆಹ್ಲೋಟ್

Sahil Gehlot Nikki Yadav

#image_title

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ 25ವರ್ಷದ ಯುವತಿಯೊಬ್ಬಳ ಮೃತದೇಹ ಫ್ರಿಡ್ಜ್‌ನಲ್ಲಿ ಪತ್ತೆಯಾಗಿದೆ. ಲಿವ್​ ಇನ್ ಪಾರ್ಟನರ್ ಅಫ್ತಾಬ್​​ ​​ನಿಂದ ಹತ್ಯೆಗೀಡಾದ ಶ್ರದ್ಧಾ ವಾಳ್ಕರ್​ ಕೊಲೆಯನ್ನು ನೆನಪಿಸುವಂಥ ಕೇಸ್​ ಇದು. ದಕ್ಷಿಣ ದೆಹಲಿಯ ನಜಾಫ್​ಗಡ್​​ನಲ್ಲಿರುವ ಮಿತ್ರಾನ್ ಎಂಬ ಹಳ್ಳಿಯ ಹೊರವಲಯದಲ್ಲಿ ಇರುವ ಡಾಬಾದಲ್ಲಿನ ಫ್ರಿಡ್ಜ್‌ನಲ್ಲಿ ಮಹಿಳೆಯ ಮೃತದೇಹ ಸಿಕ್ಕಿದ್ದು, ಈಕೆಯ ಉತ್ತಮನಗರದವಳು ಎಂಬುದು ಗೊತ್ತಾಗಿದೆ. ಈಗ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಗೆಳತಿ ನಿಕ್ಕಿ ಯಾದವ್‌ಳನ್ನು ಕೊಂದ ಸಾಹಿಲ್‌ ಗೆಹ್ಲೋಟ್‌, ಕೆಲವೇ ಗಂಟೆಯಲ್ಲಿ ಬೇರೊಬ್ಬರನ್ನು ಮದುವೆಯಾಗಿದ್ದಾನೆ ಎಂದು ತಿಳಿದುಬಂದಿದೆ.

ಸಾಹಿಲ್‌ ಗೆಹ್ಲೋಟ್‌ ಹಾಗೂ ನಿಕ್ಕಿ ಯಾದವ್‌ ಪ್ರೀತಿಸುತ್ತಿದ್ದರು. ಆದರೆ, ಗೆಹ್ಲೋಟ್‌ ಮನೆಯಲ್ಲಿ ಪ್ರೀತಿಗೆ ಒಪ್ಪಿಗೆ ಇರಲಿಲ್ಲ. ಹಾಗೆಯೇ, ಬೇರೊಬ್ಬ ಯುವತಿಯ ಜತೆ ಮದುವೆಯಾಗು ಎಂದು ಕುಟುಂಬಸ್ಥರು ಒತ್ತಡ ಹೇರಿದ್ದರು. ಅದರಂತೆ, ಬೇರೊಬ್ಬ ಯುವತಿ ಜತೆ ಗೆಹ್ಲೋಟ್‌ಗೆ ಫೆಬ್ರವರಿ ೯ ಹಾಗೂ ೧೦ರಂದು ಮದುವೆ ಫಿಕ್ಸ್‌ ಆಗಿತ್ತು. ಇತ್ತ, ಪ್ರಿಯತಮೆಯ ಒತ್ತಡವನ್ನೂ ತಾಳದ ಸಾಹಿಲ್‌, ನಿಕ್ಕಿ ಯಾದವ್‌ಳನ್ನು ಕೊಂದು, ತನ್ನ ಡಾಬಾದ ಫ್ರಿಡ್ಜ್‌ನಲ್ಲಿ ಇರಿಸಿದ್ದಾನೆ. ಇದಾದ ಬಳಿಕ ಮನೆಗೆ ತೆರಳಿ, ಮನೆಯವರು ನೋಡಿದ ಯುವತಿ ಜತೆ ಮದುವೆಯಾಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ: ದೆಹಲಿ ಹೊರ ವಲಯದ ಡಾಬಾದ ಫ್ರಿಜ್​​ನಲ್ಲಿ ಯುವತಿ ಮೃತದೇಹ ಪತ್ತೆ; ಮದುವೆಯಾಗೆಂದು ಪೀಡಿಸಿ ಹತ್ಯೆಯಾದಳು

ಸದ್ಯ, ಕೊಲೆ ಪ್ರಕರಣದಲ್ಲಿ ಸಾಹಿಲ್‌ ಗೆಹ್ಲೋಟ್‌ನನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ ಶ್ರದ್ಧಾ ವಾಳ್ಕರ್​ ತನ್ನ ಪ್ರಿಯತಮ ಅಫ್ತಾಬ್​ನಿಂದಲೇ ಹತ್ಯೆಯಾಗಿದ್ದಳು. ಇವಳನ್ನು ಕೊಂದಿದ್ದ ಅಫ್ತಾಬ್​ ಮೃತದೇಹವನ್ನು 35 ಪೀಸ್​ಗಳಾಗಿ ಮಾಡಿ, ಫ್ರಿಡ್ಜ್‌​​ನಲ್ಲಿ ಬಚ್ಚಿಟ್ಟಿದ್ದ. ಬಳಿಕ ಪ್ರತಿದಿನ ಒಂದೊಂದೇ ಅಂಗವನ್ನು ತೆಗೆದುಕೊಂಡು ಹೋಗಿ, ಎಸೆದಿದ್ದ. ಆ ಪ್ರಕರಣದ ಕೇಸ್​ ಇನ್ನೂ ನಡೆಯುತ್ತಿದೆ.

Exit mobile version