ನವದೆಹಲಿ: ದಿಲ್ಲಿ ಮೆಟ್ರೋ (Delhi Metro) ರೈಲಿನಲ್ಲಿ ಬಿಕಿನಿ ರೀತಿ ಬಟ್ಟೆ ಧರಿಸಿ ಪ್ರಯಾಣಿಸುತ್ತಿದ್ದ ಯುವತಿಯ ವಿಡಿಯೋ ವೈರಲ್ ಆಗಿದೆ. ಯುವತಿಯೊಬ್ಬಳು ತನ್ನ ಸೀಟ್‌ನಿಂದ ಎದ್ದು ಕೋಚ್‌ನಿಂದ ಇಳಿಯುವಾಗ, ಆಕೆ ಧರಿಸಿದ ಬಿಕಿನಿ ರೀತಿಯ ಬಟ್ಟೆಯು ಕಾಣತ್ತಿದೆ. ಈ ವಿಡಿಯೋ ಯಾವಾಗ ಚಿತ್ರಿಕರಿಸಿದ್ದು ಎಂಬುದರ ಮಾಹಿತಿ ಇಲ್ಲ. ಆದರೆ, ಇಂಟರ್ನೆಟ್‌ನಲ್ಲಿ ಯುವತಿಯ ಬಟ್ಟೆ ಬಗೆಗೆ ಪರ ಮತ್ತು ವಿರೋಧ ಚರ್ಚೆಗಳು ಜೋರಾಗಿವೆ. ಏತನ್ಮಧ್ಯೆ, ಪ್ರಯಾಣಿಕರು ಸಾಮಾಜಿಕ ಶಿಷ್ಟಾಚಾರಗಳನ್ನು ಪಾಲಿಸಬೇಕೆಂದು ದಿಲ್ಲಿ ಮೆಟ್ರೋ ಹೇಳಿದೆ(Video Viral).
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ದಿಲ್ಲಿ ಮೆಟ್ರೋ ಪ್ರಧಾನ ಕಾರ್ಯನಿರ್ವಾಹಕ ನಿರ್ದೇಶಕ ಅನುಜ್ ದಯಾಳ್ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಪ್ರಯಾಣಿಕರು ಸಮಾಜ ಸ್ವೀಕಾರ್ಹ ಮತ್ತು ಸಾಮಾಜಿಕ ಶಿಷ್ಟಾಚಾರಗಳನ್ನು ಅನುಸರಿಸಬೇಕೆಂದು ದಿಲ್ಲಿ ಮೆಟ್ರೋ ನಿರೀಕ್ಷಿಸುತ್ತದೆ. ಸಹ ಪ್ರಯಾಣಿಕರ ಸಂವೇದನೆಗೆ ಧಕ್ಕೆತರುವಂತೆ ಯಾವುದೇ ಉಡುಪುಗಳನ್ನು ಧರಿಸಬಾರದು. ಡಿಎಂಆರ್‌ಸಿ ಕಾರ್ಯಾಚರಣೆ ಮತ್ತು ನಿರ್ವಹಣಾ ಕಾಯ್ದೆಯ ಅನುಸಾರ, ಅಸಭ್ಯ ನಡವಳಿಕೆ ಮತ್ತು ಅಶ್ಲೀಲ ಪ್ರದರ್ಶನ ಮಾಡಿದರೆ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಹೇಳಿದ್ದಾರೆ.
ತುಂಡುಡುಗೆ ತೊಟ್ಟ ದಿಲ್ಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವ ವಿಡಿಯೋ ಷೇರ್ ಮಾಡಿರುವ ಎನ್‌ಸಿಎಂಇಂಡಿಯಾ ಕೌನ್ಸಿಲ್ ಫಾರ್ ಮೆನ್ ಅಫೇರ್ಸ್
ದಿಲ್ಲಿ ಮೆಟ್ರೋ ಗರ್ಲ್ ಬಗ್ಗೆ ಪರ ಮತ್ತು ವಿರೋಧ ಚರ್ಚೆಗಳು
ಮಿನಿ ಸ್ಕರ್ಟ್ ಮತ್ತು ಬ್ರಾ ರೀತಿಯ ಬಟ್ಟೆಗಳನ್ನು ಧರಿಸಿದ ಹುಡುಗಿಯ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರ ಹುಡುಗಿಯ ಪರವಾಗಿ ನಿಂತರೆ, ಇನ್ನುಳಿದವರು ಅವಳನ್ನು ಟೀಕಿಸಿದ್ದಾರೆ. ಆಕೆಯ ಧರಿಸಿರುವ ಉಡಪನ್ನು ಬಹಳಷ್ಟು ಜನರು ಪ್ರಶ್ನಿಸಿದ್ದಾರೆ. ಮತ್ತೆ ಕೆಲವುರ, ಆಕೆಯ ಒಪ್ಪಿಗೆ ಇಲ್ಲದೇ ಶೂಟ್ ಮಾಡಿದವನು ಖಾಸಗಿತನಕ್ಕೆ ಧಕ್ಕೆ ತಂದಿದ್ದಾನೆಂದು ದೂರಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ದಿಲ್ಲಿ ಮೆಟ್ರೋ ಗರ್ಲ್ ಬಗ್ಗೆ ಫುಲ್ ಚರ್ಚೆ ನಡೆಯುತ್ತಿದೆ. ಅಂದ ಹಾಗೆ, ಈ ವಿಡಿಯೋ ಯಾವಾಗ ಶೂಟ್ ಮಾಡಿದ್ದು ಎಂಬುದರ ಬಗ್ಗೆ ಮಾಹಿತಿ ಇಲ್ಲ.
ಇದನ್ನೂ ಓದಿ: Urfi Javed: ಇದು ಡಬಲ್ ಧಮಾಕಾ! ಒಟ್ಟಿಗೆ ಕಾಣಿಸಿಕೊಂಡ ಉರ್ಫಿ ಜಾವೇದ್ ಮತ್ತು ಸನ್ನಿ ಲಿಯೋನ್!
ಕೆಲವರು ಮಹಿಳೆಯ ತನಗೆ ಇಷ್ಟವಾದ ಬಟ್ಟೆಯನ್ನು ತೊಡುವ ಹಕ್ಕು ಹೊಂದಿದ್ದಾರೆಂದು ವಾದಿಸಿದ್ದಾರೆ. ಮತ್ತೆ ಕೆಲವುರ ಆಕೆಯ ವೇಷ ಭೂಷಣವು ಸಹ ಪ್ರಯಾಣಿಕರಿಗೆ ಅಸಹ್ಯ ಎನಿಸುವಂತಿದೆ ಎಂದು ಹೇಳಿದ್ದಾರೆ. ಅದು ಅಸಭ್ಯ, ಅಶ್ಲೀಲ ಪ್ರದರ್ಶನ ಎಂದು ಜರಿದಿದ್ದಾರೆ. ಟ್ವಿಟರ್‌ನಲ್ಲಿ ಈ ಯುವತಿಯನ್ನು ಬಹಳಷ್ಟು ಜನರು ದಿಲ್ಲಿ ಮೆಟ್ರೋ ಗರ್ಲ್ ಎಂದು ಕರೆದಿದ್ದಾರೆ. ಊರ್ಫಿ ಜಾವೇದ್, ಈ ಹುಡುಗಿಯ ಬಟ್ಟೆಗೆ ಸ್ಫೂರ್ತಿಯಾಗಿದ್ದಾರೆಂದು ಹೇಳಿದ್ದಾರೆ.