Site icon Vistara News

Delhi Murder: ಸಾಹಿಲ್‌ನಿಂದ ಹತಳಾದ ಸಾಕ್ಷಿ ನನ್ನ ಗರ್ಲ್‌ಫ್ರೆಂಡ್‌ ಎಂದ ಮತ್ತೊಬ್ಬ ಯುವಕ; ಕೊಲೆಗೆ ಮತ್ತೊಂದು ಟ್ವಿಸ್ಟ್

Delhi Murder: Arrested Accused Sahil

Delhi Murder: Friend Deepak claims minor was his girlfriend, promised to marry him

ನವದೆಹಲಿ: ರಾಷ್ಟ್ರ ರಾಜಧಾನಿಯ ರೋಹಿಣಿ ಪ್ರದೇಶದ ಶಹಬಾದ್‌ನಲ್ಲಿ ನಡೆದ 16 ವರ್ಷದ ಹಿಂದು ಬಾಲಕಿ ಸಾಕ್ಷಿಯನ್ನು ಹತ್ಯೆಗೈದ (Delhi Murder) ಸಾಹಿಲ್‌ನನ್ನು ಬಂಧಿಸಲಾಗಿದ್ದು, ಆತನನ್ನು ಕಸ್ಟಡಿಗೆ ನೀಡಲಾಗಿದೆ. ಇನ್ನು ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದೆ. “ಉತ್ತರ ದೆಹಲಿಯಲ್ಲಿ ಹತ್ಯೆಗೀಡಾದ ಸಾಕ್ಷಿ ನನ್ನ ಗರ್ಲ್‌ಫ್ರೆಂಡ್‌ ಆಗಿದ್ದಳು” ಎಂದು ದೀಪಕ್‌ ಎಂಬ ಮತ್ತೊಬ್ಬ ಬಾಲಕ ಹೇಳಿದ್ದಾನೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಆತ ಹಲವು ಮಾಹಿತಿ ಬಿಚ್ಚಿಟ್ಟಿದ್ದಾನೆ.

“ನನ್ನ ಸಹೋದರಿಯ ಮೂಲಕ ಸಾಕ್ಷಿಯು ನನಗೆ ಪರಿಚಯವಾಗಿದ್ದಳು. ಅವರು ನನಗೆ ನಾಲ್ಕೈದು ತಿಂಗಳಿಂದ ಪರಿಚಯವಾಗಿದ್ದಳು. ನಾವು ತುಂಬ ಕ್ಲೋಸ್‌ ಆಗಿದ್ದೆವು. ಇಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ನಾವಿಬ್ಬರು ಮದುವೆಯಾಗಲು ಕೂಡ ತೀರ್ಮಾನಿಸಿದ್ದೆವು. ಆದರೆ, ಕೊನೆಯ ಕ್ಷಣದಲ್ಲಿ ನನ್ನ ಪ್ರಸ್ತಾಪವನ್ನು ಸಾಕ್ಷಿ ತಿರಸ್ಕರಿಸಿದ್ದಳು. ಆದರೆ, ತಿರಸ್ಕರಿಸುವ ಮುನ್ನ, ನನ್ನನ್ನು ಪ್ರೀತಿಸುತ್ತೇನೆ ಎಂಬುದಾಗಿ ಹೇಳಿದ್ದಳು” ಎಂದು ದೀಪಕ್‌ ಹೇಳಿದ್ದಾನೆ ಎಂಬುದಾಗಿ ನ್ಯೂಸ್‌ 18 ವರದಿ ಮಾಡಿದೆ.

“ಸಾಕ್ಷಿಗೆ ಸಾಹಿಲ್‌ ಎಂಬ ಬಾಯ್‌ಫ್ರೆಂಡ್‌ ಇದ್ದಾನೆ ಎಂಬ ವಿಷಯ ನನಗೆ ಗೊತ್ತಿರಲಿಲ್ಲ. ಹಾಗೆಯೇ, ಇದಕ್ಕೂ ಮೊದಲು ಪ್ರವೀಣ್‌ ಎಂಬ ಬಾಯ್‌ಫ್ರೆಂಡ್‌ ಇದ್ದ ಎಂಬ ವಿಷಯವೂ ಗೊತ್ತಿರಲಿಲ್ಲ. ಆದರೆ, ಸಾಕ್ಷಿಯ ಕೊಲೆಯಾಗಿದೆ ಎಂಬ ಸುದ್ದಿ ತಿಳಿದು ನನಗೆ ತಡೆಯಲು ಆಗಲಿಲ್ಲ. ನಾನೇನಾದರೂ ಹತ್ಯೆ ನಡೆದ ಸ್ಥಳದಲ್ಲಿದ್ದರೆ ತಡೆಯುತ್ತಿದ್ದೆ. ಆಕೆಯನ್ನು ಕೊಂದ ವ್ಯಕ್ತಿಗೆ ಗಲ್ಲು ಶಿಕ್ಷೆಯಾಗಬೇಕು” ಎಂದು ದೀಪಕ್ ಆಗ್ರಹಿಸಿದ್ದಾನೆ. ‌

ಇದನ್ನೂ ಓದಿ: Delhi Murder :‌ ಹಿಂದೂ ಬಾಲಕಿಯ ಕೊಲೆ ಪೂರ್ವನಿಯೋಜಿತ, 3 ದಿನಗಳಿಂದ ಸಂಚು ನಡೆಸಿದ್ದ ಸಾಹಿಲ್

16 ವರ್ಷದ ತನ್ನ ಮಾಜಿ ಗೆಳತಿಯನ್ನು 21 ಬಾರಿ ಚಾಕು ಇರಿದು ಕೊಂದ (Delhi Murder) 20 ವರ್ಷದ ಆರೋಪಿಗೆ, ತಾನು ಮಾಡಿದ ಕೃತ್ಯದ ಬಗ್ಗೆ ಯಾವುದೇ ಪಶ್ಚಾತ್ತಾಪವೇ ಇಲ್ಲ! ದಿಲ್ಲಿಯ ರೋಹಿಣಿ ಶಹಾಬಾದ್ ಡೇರಿ ಪ್ರದೇಶದಲ್ಲಿ ಇಡೀ ದೇಶವೇ ಬೆಚ್ಚಿ ಬೀಳುವಂಥ ಭಯಾನಕ ಕೊಲೆ ಘಟನೆ ನಡೆದಿದೆ. 16 ವರ್ಷದ ಹುಡುಗಿಗೆ 21 ಬಾರಿ ಚಾಕು ಇರಿದಿದ್ದು ಮಾತ್ರವಲ್ಲದೇ, ಆಕೆಯ ತಲೆಯನ್ನು ಜಜ್ಜಿ, ಕೊಲೆ ಮಾಡಿದ ಘಟನೆಯು ಸಿಸಿಟಿವಿಯಲ್ಲಿ ದಾಖಲಾಗಿದೆ. ಪೊಲೀಸ್ ವಿಚಾರಣೆ ವೇಳೆ, ತನ್ನ ಮಾಜಿ ಗೆಳತಿಯನ್ನು ಕೊಲೆ ಮಾಡಿದ್ದಕ್ಕೆ ಯಾವುದೇ ಪಶ್ಚಾತ್ತಾಪ ಇಲ್ಲ ಎಂದು ಆರೋಪಿ ಹೇಳಿದ್ದಾನೆ. ಈ ಮಧ್ಯೆ, ಕೊಲೆ ಮಾಡುವ 1 ನಿಮಿಷಕ್ಕೂ ಮೊದಲು ಆತ ತನ್ನ ಸ್ನೇಹಿತನೊಂದಿಗೆ ಮಾತನಾಡುತ್ತ ನಿಂತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

16 ವರ್ಷದ ಹುಡುಗಿಯ ಕೊಲೆ ಆರೋಪಿ ಸಾಹಿಲ್‌ನನ್ನು ದಿಲ್ಲಿ ಪೊಲೀಸರು ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಬಂಧಿಸಿದ್ದರು. ವೈರಲ್ ಆಗಿರುವ ಅಪರಾಧದ ಸಿಸಿಟಿವಿ ದೃಶ್ಯಾವಳಿ ನೋಡಗರು ಎದೆಯನ್ನು ನಡುಗಿಸುವಂತಿದೆ. ಕೊಲೆ ನಡೆಯುವಾಗ ದಾರಿ ಹೋಕರು ಇದ್ದರೂ, ಅದನ್ನು ತಪ್ಪಿಸುವ ಯಾವುದೇ ಪ್ರಯತ್ನವನ್ನು ಮಾಡದಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ದೇಶದ ಮತ್ತಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Exit mobile version