ನವದೆಹಲಿ: ಉತ್ತರ ದೆಹಲಿಯ ಶಹಬಾದ್ ಡೈರಿ ಪ್ರದೇಶದಲ್ಲಿ (Delhi Murder) ಮೊಹಮ್ಮದ್ ಸಾಹಿಲ್ ಎಂಬ ಯುವಕನು 16 ವರ್ಷದ ಬಾಲಕಿಯನ್ನು ಕ್ರೂರವಾಗಿ ಹತ್ಯೆಗೈದ ಪ್ರಕರಣಕ್ಕೆ ಲವ್ ಜಿಹಾದ್ ಟ್ವಿಸ್ಟ್ ಸಿಕ್ಕಿದೆ. ದೆಹಲಿಯಲ್ಲಿ ಲವ್ ಜಿಹಾದ್‌ಗೆ ಬಾಲಕಿ ಬಲಿಯಾಗಿದ್ದಾಳೆ ಎಂದು ಬಿಜೆಪಿ ಆರೋಪಿಸಿದೆ. ಅಲ್ಲದೆ, ಪ್ರಕರಣದ ಕುರಿತು ಬಿಜೆಪಿ ನಾಯಕ ಕಪಿಲ್ ಮಿಶ್ರಾ ವಿಡಿಯೊ ಟ್ವೀಟ್ ಮಾಡಿದ್ದು, ಕೇರಳ ಸ್ಟೋರಿಗೂ ಪ್ರಕರಣವನ್ನು ಹೋಲಿಕೆ ಮಾಡಿದ್ದಾರೆ.
“ಲವ್ ಜಿಹಾದ್‌ನಲ್ಲಿ ತೊಡಗಿರುವವರಿಗೆ ಶಿಕ್ಷೆ ನೀಡುವಲ್ಲಿ ನಮ್ಮ ಪೊಲೀಸರು ಹಾಗೂ ನ್ಯಾಯಾಂಗವು ನೀರಸವಾಗಿ ವರ್ತಿಸುತ್ತಿದೆ. ಇದು ಕೂಡ ದಿ ಕೇರಳ ಸ್ಟೋರಿಯಂತಹ ಪ್ರಕರಣದ ಭಾಗವೇ ಆಗಿದೆ” ಎಂದು ಕಪಿಲ್ ಮಿಶ್ರಾ ಹೇಳಿದ್ದಾರೆ. “ದೆಹಲಿಯಲ್ಲಿ ಶ್ರದ್ಧಾ ವಾಳ್ಕರ್ ಹತ್ಯೆಯಾಯಿತು. ಆದರೆ, ಇದುವರೆಗೆ ಹತ್ಯೆ ಮಾಡಿದವನಿಗೆ ಶಿಕ್ಷೆಯಾಗಿಲ್ಲ. ಅಫ್ತಾಬ್ ಪೂನಾವಾಲಾನನ್ನು ಗಲ್ಲಿಗೇರಿಸಿದ್ದರೆ ಈಗ ಸಾಕ್ಷಿಯ ಕೊಲೆಯಾಗುತ್ತಿರಲಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
दिल्ली में एक और श्रद्धा की दर्दनाक हत्या
— Kapil Mishra (@KapilMishra_IND) May 29, 2023
इस बार हत्या सरेआम सड़क सबके सामने सड़क पर
आख़िर कब तक ? गली गली कितनी केरला स्टोरी ?
कब तक नाबालिग श्रद्धा या साक्षी बेटियाँ यूँ आफ़ताब और सरफ़राज़ जैसे हैवानों की बलि चढ़ती रहेंगी pic.twitter.com/bCaugcncuR
ಹಿಂದುಗಳು ಕಟ್ಟುವ ದಾರ ಕಟ್ಟಿದ ಸಾಹಿಲ್
ಮತ್ತೊಂದೆಡೆ, ಸಾಕ್ಷಿಯನ್ನು ಹತ್ಯೆಗೈದ ಮೊಹಮ್ಮದ್ ಸಾಹಿಲ್ ಕೈಗೆ ಹಿಂದುಗಳು ಕೈಗೆ ಕಟ್ಟುವ, ಪವಿತ್ರ ಎಂದು ನಂಬುವ ದಾರವನ್ನು ಸಾಹಿಲ್ ಕಟ್ಟಿದ್ದು, ಇದು ಕೂಡ ಲವ್ ಜಿಹಾದ್‌ನ ಭಾಗ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಕೇಳಿಬರುತ್ತಿವೆ.
ದೆಹಲಿಯ ಉತ್ತರ ರೋಹಿಣಿ ಪ್ರದೇಶದಲ್ಲಿ ಸಾಕ್ಷಿಯನ್ನು ಸಾಹಿಲ್ ಕೊಂದಿದ್ದಾನೆ. 16 ವರ್ಷದ ಸಾಕ್ಷಿ ಹಾಗೂ 20 ವರ್ಷದ ಸಾಹಿಲ್ ಪ್ರೀತಿಸುತ್ತಿದ್ದರು. ಆದರೆ, ಇತ್ತೀಚೆಗೆ ಇಬ್ಬರ ಮಧ್ಯೆ ಜಗಳವಾಗಿತ್ತು. ಭಾನುವಾರ (May 28) ಸಾಕ್ಷಿಯು ಬರ್ತ್‌ಡೇ ಪಾರ್ಟಿಗೆಂದು ಗೆಳತಿಯ ಮನೆಗೆ ತೆರಳುತ್ತಿದ್ದಳು. ಇದೇ ವೇಳೆ ಸಾಕ್ಷಿಯನ್ನು ಅಡ್ಡಹಾಕಿದ ಸಾಹಿಲ್ ಭೀಕರವಾಗಿ ಹತ್ಯೆ ಮಾಡಿದ್ದಾನೆ.
ಇದನ್ನೂ ಓದಿ: Delhi Murder: ಹಿಂದು ಬಾಲಕಿಗೆ 40 ಬಾರಿ ಇರಿದು, 20 ಸಲ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಂದ ಮುಸ್ಲಿಂ ಯುವಕ
ಸಾಕ್ಷಿಯನ್ನು ಅಡ್ಡಗಟ್ಟಿದವನೇ ಸತತವಾಗಿ ಚಾಕುವಿನಿಂದ ಇರಿದಿದ್ದಾನೆ. ಜನಸಂದಣಿ ಪ್ರದೇಶಲ್ಲಿಯೇ ಬಾಲಕಿಗೆ ಚಾಕು ಇರಿದಿದ್ದು, ಜನ ಬಿಡಿಸಲು ಬಂದರೂ ಆತನು ಚಾಕು ಇರಿದಿದ್ದಾನೆ. ಸುಮಾರು ಸಲ ಚಾಕು ಇರಿದ ಬಳಿಕ ತಲೆಗೆ ಒದ್ದಿದ್ದಾನೆ. ಕೆಳಗೆ ಹಾಕಿ ತುಳಿದಿದ್ದಾನೆ. ಪದೇಪದೆ ಕಲ್ಲು ಹಾಕಿದ್ದಾನೆ. ಬಾಲಕಿ ಮೃತಪಟ್ಟಿದ್ದನ್ನು ನೋಡಿ ಸ್ವಲ್ಪ ದೂರ ಹೋದ ಯುವಕನು ಮತ್ತೆ ಬಂದು ಕಲ್ಲು ಎತ್ತಿಹಾಕಿ ಕ್ರೌರ್ಯ ಮೆರೆದಿದ್ದಾನೆ.