Site icon Vistara News

Delhi Police: ರಾಹುಲ್ ಗಾಂಧಿ ಮನೆಗೆ ದಿಲ್ಲಿ ಪೊಲೀಸ್, ರೇಪ್ ಸಂತ್ರಸ್ತೆ ಮಾಹಿತಿ ಕೋರಿಕೆ

I Will Keep Speaking Truth Even If I Get Disqualified or Get Arrested: Rahul Gandhi

I Will Keep Speaking Truth Even If I Get Disqualified or Get Arrested: Rahul Gandhi

ನವದೆಹಲಿ: ಭಾರತ್ ಜೋಡೋ ಯಾತ್ರೆಯ ವೇಳೆ ರಾಹುಲ್ ಗಾಂಧಿ(Rahul Gandhi) ಅವರು ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯರ ಬಗ್ಗೆ ಮಾತನಾಡಿದ್ದರು. ಈ ಬಗ್ಗೆ ಮಾಹಿತಿಯನ್ನು ಕೋರಿ ಭಾನುವಾರ ದಿಲ್ಲಿಯಲ್ಲಿರುವ ರಾಹಲ್ ಅವರ ನಿವಾಸಕ್ಕೆ ದಿಲ್ಲಿಯ ಕಾನೂನು ಮತ್ತು ಸುವ್ಯವಸ್ಥೆಯ ವಿಭಾಗ ವಿಶೇಷ ಪೊಲೀಸ್ ಕಮಿಷನರ್ ಸಾಗರ್ ಪ್ರೀತ್ ಹೂಡಾ ನೇತೃತ್ವದ ದಿಲ್ಲಿ ಪೊಲೀಸ್ (Delhi Police) ತಂಡವು ತೆರಳಿದೆ.

ಭಾರತ್ ಜೋಡೋ ಯಾತ್ರೆಯ ವೇಳೆ ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯನ್ನು ಉಲ್ಲೇಖಿಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಸಂತ್ರಸ್ತೆಯ ಕುರಿತು ಮಾಹಿತಿಯನ್ನು ನೀಡುವಂತೆ ದಿಲ್ಲಿ ಪೊಲೀಸ್ ಇತ್ತೀಚೆಗಷ್ಟೇ ರಾಹುಲ್ ಗಾಂಧಿ ಅವರಿಗೆ ನೋಟಿಸ್ ಜಾರಿ ಮಾಡಿತ್ತು.

ನಾವು ರಾಹುಲ್ ಗಾಂಧಿ ಅವರ ಜತೆಗೆ ಮಾತನಾಡಲು ಬಂದಿದ್ದೇವೆ. ರಾಹುಲ್ ಅವರು ಭಾರತ್ ಜೋಡೋ ಯಾತ್ರೆಯ ವೇಳೆ ಜನವರಿ 30ರಂದು ಶ್ರೀನಗರದಲ್ಲಿ ಮಾತನಾಡುತ್ತಾ, ತಾವು ಅನೇಕ ಮಹಿಳೆಯರನ್ನು ಭೇಟಿ ಮಾಡಿದ್ದು, ಈ ಪೈಕಿ ಹಲವರು ತಮ್ಮ ಮೇಲೆ ರೇಪ್ ಆಗಿದೆ ಎಂದು ಹೇಳಿಕೊಂಡಿದ್ದಾರೆಂದು ತಿಳಿಸಿದ್ದರು. ಹಾಗಾಗಿ, ಅವರಿಂದ ಮಾಹಿತಿಯನ್ನು ಪಡೆದುಕೊಂಡು ಸಂತ್ರಸ್ತರಿಗೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಹೂಡಾ ಅವರು ರಾಹುಲ್ ಗಾಂಧಿ ನಿವಾಸದೆದುರು ಸುದ್ದಿಗಾರರಿಗೆ ತಿಳಿಸಿದರು. ಈ ಕುರಿತು ಪೊಲೀಸ್ ಮಾಹಿತಿ ಕಲೆ ಹಾಕಲು ಪ್ರಯತ್ನಿಸಿತು. ಆದರೆ, ಸಾಧ್ಯವಾಗದಿದ್ದಕ್ಕೆ ರಾಹುಲ್ ಅವರಿಗೆ ನೋಟಿಸ್ ನೀಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Rahul Gandhi: ರಾಹುಲ್​ ಗಾಂಧಿಗೆ ನೋಟಿಸ್ ಕೊಟ್ಟ ದೆಹಲಿ ಪೊಲೀಸ್​; ಪ್ರತಿಕ್ರಿಯೆ ನೀಡ್ತೇವೆ ಎಂದ ಕಾಂಗ್ರೆಸ್​

ಶ್ರೀನಗರದಲ್ಲಿ ಭಾರತ್ ಜೋಡೋ ಯಾತ್ರೆಯ ಸಮಾರೋಪದಲ್ಲಿ ರಾಹುಲ್ ಗಾಂಧಿ ಅವರು ಮಾಡಿದ ಭಾಷಣವನ್ನು ಪೊಲೀಸರು ಈ ಹಿಂದೆ ಪರಿಶೀಲಿಸಿದ್ದರು. ಅಲ್ಲಿ ಅವರು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿರುವುದನ್ನು ಒಪ್ಪಿಕೊಂಡ ಕೆಲವು ಮಹಿಳೆಯರೊಂದಿಗೆ ಸಂವಾದದ ಮಾಹಿತಿಯನ್ನು ಹಂಚಿಕೊಂಡಿದ್ದರು. ಈ ವಿಷಯದ ಕುರಿತು ಹೆಚ್ಚಿನ ವಿವರಗಳನ್ನು ಕೋರಿ ರಾಹುಲ್ ಗಾಂಧಿ ಅವರಿಗೆ ಪ್ರಶ್ನಾವಳಿಯನ್ನು ಕಳುಹಿಸಿತ್ತು.

Exit mobile version