ನವದೆಹಲಿ: ತನ್ನ ಲಿವ್ ಇನ್ ಸಂಗಾತಿ ಶ್ರದ್ಧಾ ವಾಳ್ಕರಳನ್ನು (Shraddha Murder Case) ಕೊಂದು, ಆಕೆಯ ದೇಹವನ್ನು 35 ಭಾಗಗಳಾಗಿ ಕತ್ತರಿಸಲು ಪಾತಕಿ ಅಫ್ತಾಬ್ ಪೂನಾವಾಲ ಬಳಸಿದ್ದ ಕೆಲವು ಆಯುಧಗಳನ್ನು ದಿಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಯಾವೆಲ್ಲ ಆಯುಧಗಳು ಎಂಬ ಮಾಹಿತಿಯನ್ನು ಅವರು ನೀಡಲು ನಿರಾಕರಿಸಿದ್ದಾರೆ. ಆದರೆ, ಈಗ ವಶಪಡಿಸಿಕೊಂಡಿರುವ ಆಯುಧಗಳಿಂದಲೇ ಶ್ರದ್ಧಾಳ ದೇಹವನ್ನು ಕತ್ತರಿಸಿದ್ದ ಎಂಬುದನ್ನು ಅವರು ಖಚಿತಪಡಿಸಿದ್ದಾರೆ.
ಶ್ರದ್ಧಾ ವಾಳ್ಕರ್ ಅವರಿಗೆ ಸೇರಿದ್ದ ರಿಂಗ್ ಅನ್ನು ಪಾತಕಿ ಅಫ್ತಾಬ್ ತನ್ನ ಹೊಸ ಗರ್ಲ್ ಫ್ರೆಂಡ್ ವೈದ್ಯಳಿಗೆ ಗಿಫ್ಟ್ ನೀಡಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ. ಬಂಬಲ್ ಡೇಟಿಂಗ್ ಆ್ಯಪ್ ಮೂಲಕ ಈ ವೈದ್ಯಳನ್ನು ಪರಿಚಯ ಮಾಡಿ ಕೊಂಡಿದ್ದ. ಶ್ರದ್ಧಾಳನ್ನು ಕೊಂದು ಆಕೆಯ ದೇಹದ ಭಾಗಗಳನ್ನು ಫ್ರಿಡ್ಜ್ನಲ್ಲಿಟ್ಟು, ಈ ಹೊಸ ಗರ್ಲ್ ಫ್ರೆಂಡ್ ಜತೆ ಅದೇ ಫ್ಲ್ಯಾಟ್ನಲ್ಲಿ ಪಾತಕಿ, ಸರಸ ಸಲ್ಲಾಪ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಏತನ್ಮಧ್ಯೆ, ಕಳೆದ ಮಂಗಳವಾರ ಪಾತಕಿ ಅಫ್ತಾಬ್, ಸಿಟ್ಟಿನ ಗಳಿಗೆಯಲ್ಲಿ ಶ್ರದ್ಧಾಳನ್ನು ಕೊಲೆ ಮಾಡಿದೆ ಎಂದು ಕೋರ್ಟ್ನಲ್ಲಿ ತಪ್ಪು ಒಪ್ಪಿಕೊಂಡಿದ್ದಾನೆ. ಆದರೆ, ಈ ಘಟನೆಯ ಕುರಿತು ಹೊರ ಬರುತ್ತಿರುವ ಮಾಹಿತಿಗಳೆಲ್ಲವೂ ಸತ್ಯವಲ್ಲ ಎದು ಕೋರ್ಟ್ಗೆ ಹೇಳಿದ್ದಾನೆ. ಮುಂಬೈ ಮೂಲದ ಶ್ರದ್ಧಾ ವಾಳ್ಕರ್ ಜತೆ ಅಫ್ತಾಬ್ ಪೂನಾವಾಲ ದಿಲ್ಲಿಯಲ್ಲಿ ಫ್ಲ್ಯಾಟ್ನಲ್ಲಿ ವಾಸವಾಗಿದ್ದ. ಆದರೆ, ಆಕೆಯನ್ನು ಕೊಂದು ದೇಹವನ್ನು 35 ಭಾಗಗಳಾಗಿ ಕತ್ತರಿಸಿ, 18 ದಿನಗಳ ಕಾಲ ಈ ಭಾಗಗಳನ್ನು ದಿಲ್ಲಿಯ ಮೆಹ್ರೌಲಿ ಅರಣ್ಯದಲ್ಲಿ ವಿಲೇವಾರಿ ಮಾಡಿದ್ದ.
ಇದನ್ನೂ ಓದಿ | Video| ಶ್ರದ್ಧಾ ಹತ್ಯೆ ಮಾದರಿಯಲ್ಲೇ ನಡೆದ ಮರ್ಡರ್; ಪತಿಯನ್ನು ಕೊಂದು, 22 ಪೀಸ್ಗಳಾಗಿ ಕತ್ತರಿಸಿ ಫ್ರಿಜ್ನಲ್ಲಿಟ್ಟ ಮಹಿಳೆ!