Site icon Vistara News

Delhi Rain: ಕುಸಿದು ಬಿದ್ದ ದಿಲ್ಲಿ ಏರ್‌ಪೋರ್ಟ್‌ ಛಾವಣಿ- ಒಬ್ಬ ಬಲಿ, 5 ಮಂದಿಗೆ ಗಂಭೀರ ಗಾಯ; ಕಾರುಗಳು ನಜ್ಜುಗುಜ್ಜು

Delhi Rain

ಹೊಸದಿಲ್ಲಿ: ಇಷ್ಟು ದಿನ ಬಿಸಿಲ ಬೇಗೆ, ಉಷ್ಣ ಗಾಳಿಯ ತಾಪಕ್ಕೆ ಬೇಸತ್ತಿದ್ದ ರಾಷ್ಟ್ರ ರಾಜಧಾನಿ ದೆಹಲಿ(New Delhi)ಯಲ್ಲಿ ವರಣನ ಅಬ್ಬರ(Delhi Rain) ಜೋರಾಗಿದೆ. ನಿನ್ನೆ ತಡರಾತ್ರಿ ಸುರಿದ ಭಾರೀ ಮಳೆಗೆ ದಿಲ್ಲಿ ವಿಮಾನ ನಿಲ್ದಾಣದ ಟರ್ಮಿನಲ್‌ 1ರ ಮೇಲ್ಛಾವಣಿ ಕಾರುಗಳ ಮೇಲೆ ಕುಸಿದು ಬಿದ್ದಿದ್ದು, ಒಬ್ಬ ದುರ್ಮರಣಕ್ಕೀಡಾಗಿದ್ದಾನೆ. ಘಟನೆಯಲ್ಲಿ 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಟರ್ಮಿನಲ್‌ 1ರ ಎಲ್ಲಾ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಅದೂ ಅಲ್ಲದೇ ಮುಂಜಾಗೃತಾ ಕ್ರಮವಾಗಿ ದಿಲ್ಲಿ ವಿಮಾನ ನಿಲ್ದಾಣ(Delhi International Airport)ದ ಎಲ್ಲಾ ಚೆಕ್-ಇನ್‌ ಕೌಂಟರ್‌ಗಳನ್ನು ಮುಚ್ಚಲಾಗಿದೆ.

ಅಧಿಕೃತ ಮೂಲಗಳ ಪ್ರಕಾರ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಛಾವಣಿ ಶೀಟ್‌ ಮತ್ತು ಬೀಮ್‌ ಕುಸಿದು ಬಿದ್ದಿದ್ದು, ಪಾರ್ಕಿಂಗ್‌ ಏರಿಯಾದಲ್ಲಿದ್ದ ಕಾರುಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರೀ ಮಳೆಯಿಂದಾಗಿ ಈ ಅವಘಡ ಸಂಭವಿಸಿದ್ದು, ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಇನ್ನು ಘಟನೆ ಬಗ್ಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್‌ ಮೋಹನ್‌ ನಾಯ್ಡು ಪ್ರತಿಕ್ರಿಯಿಸಿದ್ದು, ದಿಲ್ಲಿ ವಿಮಾನ ನಿಲ್ದಾಣದಲ್ಲಿ ನಡೆದಿರುವ ಘಟನೆ ಖುದ್ದು ಪರಿಶೀಲನೆ ನಡೆಸಲಾಗುತ್ತಿದೆ. ಗಾಯಾಳುಗಳನ್ನು ದಿಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ರಣಭೀಕರ ಮಳೆಗೆ ದಿಲ್ಲಿ ತತ್ತರ

ಎರಡನೇ ದಿನವೂ ದಿಲ್ಲಿಯ್ಲಿ ಭಾರೀ ಮಳೆಯಾಗುತ್ತಿದೆ. ರಸ್ತೆ, ಮನೆಗಳಿಗೆ ನೀರು ನುಗ್ಗಿದ್ದು, ಜನ ಸಂಚಾರ ಅಸ್ತವ್ಯಸ್ತಗೊಂಡಿದೆ. ದಿಲ್ಲಿಯ ವಿವಿಧ ರಸ್ತೆಗಳಲ್ಲಿ ಟ್ರಾಫಿಕ್‌ ಸಮಸ್ಯೆ ಉಂಟಾಗಿತ್ತು.

ಇದನ್ನೂ ಓದಿ: Kalki 2898 AD: ‘ಕಲ್ಕಿ 2898 ಎಡಿ’ಗೆ ವೀಕ್ಷಕರಿಂದ ಬಹುಪರಾಕ್ ; ಹರಿದ ಚಪ್ಪಲಿ ಫೋಟೊ ಹಂಚಿಕೊಂಡ ನಿರ್ದೇಶಕ !

Exit mobile version