Site icon Vistara News

Delhi Shocker: 9 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ, ಕೊಂದು ಕಾಲುವೆಗೆ ಎಸೆದ ಪಾಪಿ!

Sexual Assault, Neet Student gang raped in kota Says Police

ನವದೆಹಲಿ: 52 ವರ್ಷದ ವ್ಯಕ್ತಿಯೊಬ್ಬ 9 ವರ್ಷದ ಬಾಲಕಿಯನ್ನು (9 Year old Girl) ಪುಸಲಾಯಿಸಿ ಕಾರಿನಲ್ಲಿ ಕರೆದುಕೊಂಡು ಹೋಗಿ, ಅತ್ಯಾಚಾರ (Sexual Assault) ಎಸಗಿದಲ್ಲದೇ ಕೊಲೆ ಮಾಡಿ ಶವವನ್ನು ಕಾಲುವೆಯಲ್ಲಿ ಬಿಸಾಡಿದ (dumps body in canal) ಘಟನೆ ದಿಲ್ಲಿಯ ಸ್ವರೂಪ್ ‌ನಗರದಲ್ಲಿ ನಡೆದಿದೆ(Delhi Shocker). ಕೊಲೆಯಾದ ಬಾಲಕಿಯ ದೇಹವು ಇನ್ನೂ ಪತ್ತೆಯಾಗಿಲ್ಲ. ಶವ ಹುಡುಕಾಟಕ್ಕೆ ಆರು ಮಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು(Delhi Police) ತಿಳಿಸಿದ್ದಾರೆ.

ಡಿಸೆಂಬರ್ 12ರಂದು ಬಾಲಕಿಯು ತನ್ನ ಮನೆಯ ಮುಂದೆ ಆಟ ಆಡುತ್ತಿರುವಾಗ ಕಾರಿನಲ್ಲಿ ಕರೆದುಕೊಂಡು ಹೋಗುವುದಾಗಿ ನಂಬಿಸಿದ್ದಾನೆ. ಆತನ ಮಾತು ನಂಬಿದ ಬಾಲಕಿ ಕಾರನಲ್ಲಿ ಪ್ರಯಾಣಿಸುವ ಆಸೆಯಿಂದ ಕಾರ್ ಹತ್ತಿದ್ದಾಳೆ. ಬಳಿಕ ಬಾಲಕಿಯನ್ನು ಆರೋಪಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಕಾರಿನಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಬಳಿಕ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಮತ್ತು ಶವವನ್ನು ಮುನಾಕ್ ಕಾಲುವೆಗ ಎಸೆದು ಪರಾರಿಯಾಗಿದ್ದಾನೆ ಎಂದು ಈ ಪ್ರಕರಣದ ತನಿಖೆಯನ್ನು ಕೈಗೊಂಡಿರುವ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ದಿಲ್ಲಿ ಪೊಲೀಸರು ಆರೋಪಿಯನ್ನು ಈಗ ಬಂಧಿಸಿದ್ದಾರೆ. ಬಾಲಕಿ ವಾಸವಾಗಿದ್ದ ಪುನಾ ಗ್ರಾಮದಲ್ಲೇ ಆರೋಪಿ ಕೂಡ ವಾಸವಾಗಿದ್ದ. ಕ್ರೈಮ್ ನಡೆದ ದಿನ ಆರೋಪಿಯು ರಾತ್ರಿ 7.30 ಗಂಟೆಗೆ ಮನೆಗೆ ಬಂದಿದ್ದ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಮುಚ್ಚಿದ ಗೋಡೌನ್ ಬಳಿಯಿಂದ ಹುಡುಗಿಯನ್ನು ಅಪಹರಿಸಲಾಗಿದೆ ಎಂದು ನಾವು ತಿಳಿದುಕೊಂಡಿದ್ದೇವೆ. ಕುಟುಂಬದ ಸದಸ್ಯರು ಅವಳನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ತಮ್ಮ ಜಮೀನುದಾರ ಎಂದು ಗುರುತಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಚಾರಣೆಯ ವೇಳೆ ಆರೋಪಿಯ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಅತ್ಯಾಚಾರ ನಡೆಸಿದ ಬಳಿಕ ತಾನು ಭಯಭೀತನಾಗಿದ್ದೆ ಮತ್ತು ಹೀಗಾಗಿ ಅವಳನ್ನು ಕತ್ತು ಹಿಸುಕಿ ಕೊಂದಿದ್ದೇನೆ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಮಂಗಳವಾರ, ನಾವು ಆರೋಪಿಯನ್ನು ಅಪರಾಧ ಸ್ಥಳಕ್ಕೆ ಕರೆದೊಯ್ದಿದ್ದೇವೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಕಾರ್ಖಾನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಸಂತ್ರಸ್ತೆಯ ಪೋಷಕರು ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ. ಸ್ಥಳೀಯರು ಮತ್ತು ಮಗುವಿನ ಕುಟುಂಬಸ್ಥರು ತಮ್ಮ ಪ್ರದೇಶದಲ್ಲಿ ನ್ಯಾಯಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

ಈ ಸುದ್ದಿಯನ್ನೂ ಓದಿ: Ujjain Horror: ಉಜ್ಜಯಿನಿಯಲ್ಲಿ ಇನ್ನೊಂದು ಬರ್ಬರ ಕೃತ್ಯ;‌ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ

Exit mobile version